Advertisement
ಐದು ದಿನಗಳ ಕಾಲ ಈ ಉತ್ಸವದ ವೇಳೆ ಮಂಜುನಾಥ ಸ್ವಾಮಿಯು ದೇವಸ್ಥಾನದಿಂದ ಹೊರ ಬಂದು ಭಕ್ತಸಾಗರಕ್ಕೆ ದರ್ಶನ ನೀಡುವುದು ವಿಶೇಷವಾಗಿದೆ. ದೇಗುಲದ ಗರ್ಭಗುಡಿಯ ಮುಂಭಾಗದ ಅಂಗಣದಲ್ಲಿ ಸ್ವಾಮಿಯನ್ನು ಸ್ವರ್ಣಪಲ್ಲಕ್ಕಿಯಲ್ಲಿ ಕೂರಿಸಿ ಉಡಿಕೆ ಸುತ್ತು, ಪಲ್ಲಕ್ಕಿ ಸುತ್ತು, ಚೆಂಡೆ ಸುತ್ತು, ನಾದಸ್ವರ ಸುತ್ತು, ಸಂಗೀತ ಸುತ್ತು, ಕೊಳಲು ಸುತ್ತು, ಶಂಖ ಸುತ್ತು, ಸರ್ವವಾದ್ಯ ಸುತ್ತುಗಳೊಂದಿಗೆ ಕರೆತರಲಾಯಿತು.
Related Articles
Advertisement
ಇಂದು ಸರ್ವಧರ್ಮ ಸಮ್ಮೇಳನಡಿ. 2ರಂದು ಸಂಜೆ 5ಕ್ಕೆ ಅಮೃತವರ್ಷಿಣಿ ಸಭಾಭವನದಲ್ಲಿ ಸರ್ವಧರ್ಮ ಸಮ್ಮೇಳನದ 89ನೇ ಅಧಿವೇಶನ ನಡೆಯಲಿದ್ದು, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಸಮ್ಮೇಳನ ಉದ್ಘಾಟಿಸುವರು. ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಸ್ವಾಗತ ಭಾಷಣ ಮಾಡುವರು. ಬೆಂಗಳೂರಿನ ಎಸ್. ವ್ಯಾಸಯೋಗ ವಿ.ವಿ.ಯ ವಿಶ್ರಾಂತ ಕುಲಪತಿ ಪ್ರೊ| ರಾಮಚಂದ್ರ ಜಿ. ಭಟ್ಟ ಅಧ್ಯಕ್ಷತೆ ವಹಿಸುವರು. ಸಾಗರದ ಸಾಹಿತಿ ಸಫ್ರಾಜ್ ಚಂದ್ರಗುತ್ತಿ, ಮೈಸೂರು ವಿ.ವಿ.ಯ ನಿವೃತ್ತ ಪ್ರಾಧ್ಯಾಪಕಿ ಡಾ| ಎಂ.ಎಸ್. ಪದ್ಮ ಮತ್ತು ಶಿವಮೊಗ್ಗ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ವೀರೇಶ್ ವಿ. ಮೊರಾಸ್ ಧಾರ್ಮಿಕ ಉಪನ್ಯಾಸ ನೀಡುವರು. ನ. 3ರಂದು ಸಾಹಿತ್ಯ ಸಮ್ಮೇಳನದ 89 ಅಧಿವೇಶನ ನಡೆಯಲಿದೆ.