Advertisement

ಶ್ರೀ ಕೃಷ್ಣಾಷ್ಟಮಿ: ವೃದ್ಧಶ್ರಮದ ನೆರವಿಗೆ “ಮಾರಿಕಾಡು’ವೇಷ

07:10 AM Sep 12, 2017 | Team Udayavani |

ಉಡುಪಿ: ಉಡುಪಿಯ ನಾಡಹಬ್ಬ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕಳೆದ 4 ವರ್ಷಗಳಿಂದ ವೇಷ ಹಾಕಿ ಸಂಗ್ರಹವಾದ ಹಣವನ್ನು ಸಾಮಾಜಿಕ ಕಾರ್ಯಕ್ಕೆ ನೀಡುತ್ತಿದ್ದು, ಈ ಬಾರಿ ಮಾರಿಕಾಡು ಎನ್ನುವ ವೇಷ ಧರಿಸಿ, ಅದರಿಂದ ಗಳಿಸಿದ ಹಣವನ್ನು ಕೊರಂಗ್ರಪಾಡಿಯ ಕಲ್ವಾರಿ ವೃದ್ಧಾಶ್ರಮಕ್ಕೆ ನೀಡುವುದಾಗಿ ವೇಷಧಾರಿ ರಾಮಾಂಜಿ ನಮ್ಮ ಭೂಮಿ ಹೇಳಿದರು. 

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 4 ವರ್ಷಗಳಿಂದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಹಿನ್ನೆಲೆಯ ವಸ್ತುವನ್ನಿರಿಸಿಕೊಂಡು ಕೃಷ್ಣಾಷ್ಟಮಿ ವೇಳೆ ನಾಗಾಸಾಧು, ಮಾಯಾನ್‌ ಸಂಸ್ಕೃತಿಯ ಬುಡಕಟ್ಟು ಜನ, ಕೇರಳದ ತೈಯಂ, ದ. ಆಫ್ರಿಕಾದ ಬುಡಕಟ್ಟು ಜನಾಂಗದ ಅಪಕಲಿಪಟು ವೇಷ ಧರಿಸಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಈ ಬಾರಿ ಶೇಕ್ಸ್‌ಪೀಯರ್‌ನ ಮ್ಯಾಕ್‌ಬೆತ್‌ ನಾಟಕದಿಂದ ಆಯ್ದ ಅದನ್ನು ಡಾ| ಚಂದ್ರಶೇಖರ್‌ ಕಂಬಾರರು ಕನ್ನಡಕ್ಕೆ ಮಾರಿಕಾಡು ಎನ್ನುವುದಾಗಿ ರೂಪಾಂತರಿಸಿದ್ದು, ಆ ವೇಷ ಧರಿಸಿ ವೃದ್ಧಾಶ್ರಮಕ್ಕೆ ನೆರವು ನೀಡುವ ಉದ್ದೇಶ ಹೊಂದಲಾಗಿದೆ. ಮಾರಿಕಾಡು ಎಂದರೆ ಪರಿಸರ ಸಂರಕ್ಷಣೆ ಕಾಳಜಿ, ಪ್ರಕೃತಿಗೆ ವಿರುದ್ಧವಾಗಿ ನಡೆದರೆ ಎದುರಾಗುವ ಆಪತ್ತಿನ ಕುರಿತ ಸಂದೇಶವು ಇದೆ ಎಂದರು.

ನಾನು ವೇಷ ಧರಿಸಿ ಎಲ್ಲರನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಈ ವೇಷವನ್ನು ವೀಕ್ಷಿಸಿದವರು, ಸ್ನೇಹಿತರು, ಹಿತೈಷಿಗಳು ನನ್ನ ಸಿಂಡಿಕೇಟ್‌ ಬ್ಯಾಂಕಿನ ಕುಂಜಿಬೆಟ್ಟು ಶಾಖೆಯ ಕಾತೆ ಸಂಖ್ಯೆ : 01862210042226, ಐಎಫ್ ಸಿ ಕೋಡ್‌ : SYNB 0000186  ಖಾತೆಗೆ ಹಣ ಜಮೆ ಮಾಡಬಹುದು ಎಂದು ರಾಮಾಂಜಿ ಮನವಿ ಮಾಡಿಕೊಂಡಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ನಿತ್ಯಾನಂದ ಒಳಕಾಡು, ರೋಹಿತ್‌ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next