Advertisement
ಮಾ. 7ರಂದು ಆರಂಭಗೊಂಡ ಇದು ಎ. 24ರ ವರೆಗೆ ನಡೆಯಲಿದೆ. ಕೃಷ್ಣ ಷಡಕ್ಷರ ಮಂತ್ರ (ಆರು ಅಕ್ಷರ, ಆರು ಲಕ್ಷ ಜಪ), ಧನ್ವಂತರಿ ಮಂತ್ರ (ಎಂಟು ಅಕ್ಷರ, ಎಂಟು ಲಕ್ಷ ಜಪ), ವೇದವ್ಯಾಸ ಮಂತ್ರ (ಎಂಟು ಅಕ್ಷರ, ಎಂಟು ಲಕ್ಷ ಜಪ), ರಾಮಮಂತ್ರ (ಆರು ಅಕ್ಷರ, ಆರು ಲಕ್ಷ ಜಪ), ಹಯಗ್ರೀವ ಮಂತ್ರ (ಎಂಟು ಅಕ್ಷರ, ಎಂಟು ಲಕ್ಷ ಜಪ), ಭೂವರಾಹ ಮಂತ್ರಗಳ (ಏಳು ಅಕ್ಷರ, ಏಳು ಲಕ್ಷ ಜಪ) ಜಪಾನುಷ್ಠಾನ 25ರಿಂದ 50 ವೈದಿಕರಿಂದ ನಿತ್ಯ ನಡೆಯುತ್ತಿದೆ.
Related Articles
ಶ್ರೀಕೃಷ್ಣನ ಸನ್ನಿಧಿಯಲ್ಲಿ ಮಂತ್ರ ಜಪಾನುಷ್ಠಾನ ನಡೆಯಬೇಕೆಂಬುದು ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರ ಅಪೇಕ್ಷೆ. ಬೇರೆ ಬೇರೆ ಊರಿನಲ್ಲಿ ವೇದಾಧ್ಯಯನ ನಡೆಸಿ, ವಿದ್ಯಾರ್ಥಿಗಳಿಗೆ ಪಾಠ ಹೇಳುವ ವಿದ್ವಾಂಸರು ಇದ್ದಾರೆ. ಇವರಿಗೆ ಬೇರೆ ಆದಾಯಗಳಿಲ್ಲದಿದ್ದರೂ ವೇದ ಪಾಠವನ್ನು ಸಂರಕ್ಷಣೆ ಮಾಡಿ ಕೊಂಡು ಬಂದಿರುವುದರಿಂದ ವಿಶೇಷ ವಾಗಿ ಇವರನ್ನು ಕರೆಸಿ ಪಾರಾಯಣ ಮಾಡಿಸ ಬೇಕೆಂಬುದು ಸ್ವಾಮೀಜಿಯವರ ಇಚ್ಛೆ.
– ಭಾರತೀಶ ಬಲ್ಲಾಳ್, ವೇದ ವಿದ್ವಾಂಸರು, ಜಪ, ಪಾರಾಯಣದ ಉಸ್ತುವಾರಿ, ಶ್ರೀಕೃಷ್ಣಮಠ, ಉಡುಪಿ
Advertisement