Advertisement

ಶ್ರೀಕೃಷ್ಣಮಠ : ರಾಮಮಂದಿರಕ್ಕೆ ನಿಧಿ ಸಂಗ್ರಹ

02:17 AM Jan 16, 2021 | Team Udayavani |

ಉಡುಪಿ: ದೇಶಾದ್ಯಂತ ಅಯೋಧ್ಯೆ ಶ್ರೀರಾಮಚಂದ್ರನ ಭವ್ಯಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ನಡೆಸುವ ನಿಧಿ ಸಂಗ್ರಹ ಅಭಿಯಾನವು ಉಡುಪಿ ಶ್ರೀಕೃಷ್ಣಮಠದಲ್ಲಿಯೂ ಉದ್ಘಾಟನೆಗೊಂಡಿತು.

Advertisement

ಚೂರ್ಣೋತ್ಸವದ ಬಳಿಕ ಮಧ್ವ ಮಂಟಪದಲ್ಲಿ ನಡೆದ ಅಯೋಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ವಿಶ್ವಸ್ತ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪರ್ಯಾಯ ಅದಮಾರು, ಕೃಷ್ಣಾಪುರ, ಪಲಿಮಾರು, ಕಾಣಿಯೂರು, ಸೋದೆ ಮಠಗಳ  ಶ್ರೀಪಾದರುಗಳ  ಉಪಸ್ಥಿತಿಯಲ್ಲಿ ನಿಧಿ ಸಮರ್ಪಣೆ ಮಾಡಲಾಯಿತು.

ವಿಹಿಂಪ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ ಶೆಟ್ಟಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ನಗರ ಸಂಘಚಾಲಕ್‌ ರಾಮಚಂದ್ರ ಸನಿಲ್‌, ಸಮಿತಿ ಪ್ರಮುಖರಾದ ಸುರೇಶ ಹೆಜಮಾಡಿ, ಗಣಪತಿ ನಾಯಕ್‌, ಕಿಶೋರ್‌ ಮೊದಲಾದವರು ಇದ್ದರು.

ಉಡುಪಿ ಜಿಲ್ಲೆಯ ಒಂಬತ್ತು ಮಂಡಲ ಗಳಲ್ಲಿ ಏಕಕಾಲದಲ್ಲಿ ಅಭಿಯಾನ ಆರಂಭಗೊಂಡಿತು.

ಮಂಗಳೂರಿನಲ್ಲೂ ಚಾಲನೆ :

Advertisement

ಮಂಗಳೂರು: ನಗರದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ವಿಶೇಷ ಸಂಕಲ್ಪಪೂಜೆ ಮತ್ತು ಸಾಮೂಹಿಕ ಪ್ರಾರ್ಥನೆಯೊಂದಿಗೆ ನಿಧಿ ಸಮರ್ಪಣ ಅಭಿಯಾನ ಪ್ರಾರಂಭವಾಯಿತು. ಉದ್ಯಮಿ ಎ. ಜೆ. ಶೆಟ್ಟಿ ಮತ್ತು ಕದ್ರಿ ದೇವಸ್ಥಾನದ ತಂತ್ರಿ ವಿಟuಲ ದಾಸ್‌ ತಂತ್ರಿ ಅವರು  ನಿಧಿ ಸಮರ್ಪಣೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಶ್ರೀ ಮಂಗಳಾದೇವಿ  ದೇವಸ್ಥಾನದಲ್ಲಿ  ವಿಶೇಷ ಪೂಜೆ ಸಲ್ಲಿಸಲಾಯಿತು. ಮಂಗಳೂರು ವಿಭಾಗದ ಪ್ರತಿ ಜಿಲ್ಲೆಯ ನಗರ, ವಾರ್ಡ್‌ ಮಟ್ಟದಲ್ಲಿ ಸುಮಾರು 4000 ಬೂತ್‌ ಸಮಿತಿಗಳಲ್ಲಿ  ಶುಕ್ರವಾರದಿಂದ ನಿಧಿ ಸಮರ್ಪಣ ಅಭಿಯಾನ ಆರಂಭಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next