Advertisement

ಮಳಖೇಡದಲ್ಲಿ ಶ್ರೀಜಯತೀರ್ಥರ ಆರಾಧನೆ ಸಂಪನ್ನ: ದೇಶದ ವಿವಿಧ ಭಾಗಗಳ ಸಹಸ್ರಾರು ಭಕ್ತರು ಭಾಗಿ

12:29 AM Jul 20, 2022 | Team Udayavani |

ಕಲಬುರಗಿ: ಸೇಡಂ ತಾಲೂಕಿನ ಮಳಖೇಡದ ಕಾಗಿಣಾ ನದಿ ತಟದ ಶ್ರೀಜಯತೀರ್ಥರ (ಟೀಕಾ ಚಾರ್ಯ) ಮೂಲ ಬೃಂದಾವನ ಸನ್ನಿ ಧಿಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಜಯತೀರ್ಥರ ಆರಾಧನೆ ಮಂಗಳವಾರ ಸಂಪನ್ನಗೊಂಡಿತು.

Advertisement

ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥರ ನೇತೃತ್ವದಲ್ಲಿ 3 ದಿನಗಳ ಕಾಲ ನಡೆದ ಈ ಕಾರ್ಯಕ್ರಮ ದಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ತಮಿಳುನಾಡು ಸೇರಿ ದೇಶದ ವಿವಿಧ ಭಾಗಗಳ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

ಮಂಗಳವಾರ ಉತ್ತರಾರಾಧನೆ ಯಂದು ಮೂಲಬೃಂದಾವನಕ್ಕೆ ಪಂಚಾಮೃತಾಭಿಷೇಕ, ಸುಧಾಪಾಠ, ತಪ್ತ ಮುದ್ರಾಧಾರಣ, ಗಜವಾಹನ ಸೇವೆ, ಮಹಾಪೂಜೆ, ಮಂತ್ರಾಕ್ಷತೆ ಅನುಗ್ರಹ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ಆಂಧ್ರದ ಅನಂತಪುರದತ್ತ ಸಂಚಾರ ಬೆಳೆಸಿದ ಶ್ರೀ ಸತ್ಯಾತ್ಮತೀರ್ಥರು,
ಜು. 22ರಂದು ಸಂಜೆ ಆಂಧ್ರದಸಂತೆಬಿದನೂರಿನಲ್ಲಿ 27ನೇ ಚಾತು ರ್ಮಾಸ್ಯ ವ್ರತ ಆರಂಭಿಸಲಿದ್ದಾರೆ.

ಪಂ. ವಿದ್ಯಾಸಿಂಹಾಚಾರ್ಯ ಮಾಹುಲಿ, ಪಂ. ಶಶಿ ಆಚಾರ್ಯ, ಪಾಂಡುರಂಗಾಚಾರ್ಯ ರೊಟ್ಟಿ, ಪಂ. ವೆಂಕಣ್ಣಾಚಾರ್ಯ, ವಿಜಯ ವಿಠಲಾಚಾರ್ಯ ಮುಗೋಡ, ಘಂಟಿ ರಾಮಾಚಾರ್ಯ, ಗುರುಮಧ್ವಾ
ಚಾರ್ಯ ನವಲಿ, ಪಂ. ಸತ್ಯಬೋಧಾ ಚಾರ್ಯ ಘಟಾಲಿ ಮುಂತಾದವರು ಈ ಸಂದರ್ಭದಲ್ಲಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next