ಕಾಪು : ಕಾಪು ಪೇಟೆ ಗೌಡ ಸಾರಸ್ವತ ಸಮಾಜಕ್ಕೆ ಒಳಪಟ್ಟಿರುವ ಕಾಪು ಹಳೇ ಮಾರಿಯಮ್ಮ ದೇವಿಯ ಸನ್ನಿಧಿಯಲ್ಲಿ ಭಕ್ತಾಧಿಗಳ ಸಹಕಾರದೊಂದಿಗೆ ನಿರ್ಮಿಸಲಾದ 1 ಕೋ. ರೂ. ವೆಚ್ಚದ ನೂತನ ರಜತ ರಥವನ್ನು ಮಂಗಳವಾರ ರಾತ್ರಿ ಜರಗಿದ ನಡೆದ ಸುಗ್ಗಿ ಮಾರಿಪೂಜೆಯ ಸಂದರ್ಭದಲ್ಲಿ ಶ್ರೀ ಮಾರಿಯಮ್ಮ ದೇವಿಯ ಬಿಂಬ ಮೆರವಣಿಗೆಯ ಮೂಲಕವಾಗಿ ಸಮರ್ಪಿಸಲಾಯಿತು.
ಮಾರಿಪೂಜೆಯ ಸಂಪ್ರಧಾಯದಂತೆ ಕಾಪು ಕೊಂಕಣಿಮಠ ವೆಂಕಟರಮಣ ದೇವಸ್ಥಾನದಿಂದ ಸರ್ವಾಲಂಕಾರ ಭೂಷಿತಳಾಗಿ ಮಾರಿಗುಡಿಗೆ ಹೊರಡುವ ಹಳೇ ಮಾರಿಯಮ್ಮ ದೇವಿಯ ಬಿಂಬವನ್ನು ನೂತನ ರಜತ ರಥದಲ್ಲಿ ಕುಳ್ಳಿರಿಸಿ ಹಳೆ ಮಾರಿಗುಡಿಗೆ ವೈಭವದ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು.
ಕೊಂಕಣಿ ಮಠ ವೆಂಕಟರಮಣ ದೇವಸ್ಥಾನದ ಆಡಳಿತಕ್ಕೆ ಒಳಪಟ್ಟಿರುವ ಹಳೇ ಮಾರಿಗುಡಿಗೆ ಭಕ್ತಾದಿಗಳ ನೆರ ವಿನಿಂದ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ರಜತ ರಥವನ್ನು ಕಳೆದ ಗುರುವಾರ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಸಂಪ್ರದಾಯದಂತೆ ಮೊದಲು ವೆಂಕಟರಮಣ ದೇವರಿಗೆ ಸಮರ್ಪಿಸುವ ಮೂಲಕ ಮಾರಿಯಮ್ಮ ದೇವಿಗೆ ರಥ ಸಮರ್ಪಣೆ ನಡೆಸಿದ್ದರು.
ದೇವಸ್ಥಾನದ ಅರ್ಚಕ ವೇ|ಮೂ| ಕಮಲಾಕ್ಷ ಭಟ್ ಮತ್ತು ಅರ್ಚಕ ವೃಂದ ದವರು ಧಾರ್ಮಿಕ ಅನುಷ್ಠಾನಗಳನ್ನು ನೆರವೇರಿಸಿದರು. ಆಡಳಿತ ಮೊಕ್ತೇಸರ ಪ್ರಸಾದ್ ಗೋಕುಲದಾಸ ಶೆಣೆ„, ಮೊಕ್ತೇಸರರಾದ ಸದಾಶಿವ ರಾಧಾಕೃಷ್ಣ ಕಾಮತ್, ರಾಮ ಶಶಿಧರ ನಾಯಕ್, ರಾಜೇಶ್ ಮಾಧವರಾಯ ಶೆಣೆ„, ಶ್ರೀಕಾಂತ್ ಲಕ್ಷಿ$¾ನಾರಾಯಣ ಭಟ್, ಆಡಳಿತ ಮಂಡಳಿ ಸದಸ್ಯರಾದ ಸಂಜಯ ಹರಿ ಭಟ್, ಸುರೇಶ್ ಪ್ರಭು, ಮೋಹನದಾಸ ಕಿಣಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗೋಕುಲದಾಸ ಆನಂದರಾಯ ಶೆಣೆ„, ನಿಕಟಪೂರ್ವ ಆಡಳಿತ ಮೊಕ್ತೇಸರ ಶ್ರೀಧರ ಆನಂದರಾಯ ಶೆಣೆ„, ಮಾರಿಗುಡಿಯ ಮ್ಯಾನೇಜರ್ ಚಂದ್ರಕಾಂತ್ ಕಾಮತ್, ಮಾಜಿ ಟ್ರಸ್ಟಿಗಳು ಹಾಗೂ ಕಾಪು ಪೇಟೆಯ ಹತ್ತು ಸಮಸ್ತರು, ಊರ ಪರವೂರು ಭಗವದ್ಭಕ್ತರು ಮಾರಿಯಮ್ಮನ ಭಕ್ತರು ಉಪಸ್ಥಿತರಿದ್ದರು.