Advertisement

ಘಾಟ್‌ಕೋಪರ್‌ ಅಸಲ್ಫಾದ ಶ್ರೀ ಗೀತಾಂಬಿಕಾ ಮಂದಿರ : ವರ್ಧಂತಿ ಉತ್ಸವ

04:57 PM Jun 17, 2018 | |

ಮುಂಬಯಿ: ಘಾಟ್‌ಕೋಪರ್‌ ಪಶ್ಚಿಮದ ಅಸಲ್ಫಾದ ಶ್ರೀ ಗೀತಾಂಬಿಕಾ ಸೇವಾ ಸಮಿತಿ ಸಂಚಾಲಕತ್ವದ ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನ ಅಸಲ್ಫಾ³ದ ಶ್ರೀ ಗೀತಾಂಬಿಕಾದೇವಿ ಮತ್ತು ಪರಿವಾರ ದೇವತೆಗಳ ಇಪ್ಪತ್ತನೇ ಪ್ರತಿಷ್ಠಾ ವರ್ಧಂತಿ ಉತ್ಸವವು ಜೂ. 14ರಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ವಿಲಂಬಿ ನಾಮ ಸಂವತ್ಸರದ ಜ್ಯೇಷ್ಠ ಮಾಸ ಶುಕ್ಲ ಪಕ್ಷದ ಶುಭವಸರದಲ್ಲಿ ಆಚರಿಸಲ್ಪಟ್ಟ ದ್ವಿದಶಕ ಪ್ರತಿಷ್ಠಾ ವರ್ಧಂತಿ ಉತ್ಸವದಲ್ಲಿ   ದೇವಸ್ಥಾನದ   ಪ್ರಧಾನ  

ಅರ್ಚಕ ವಿದ್ವಾನ್‌ ರಘುಪತಿ ಭಟ್‌ ಉಡುಪಿ ಅವರ ಮುಂದಾಳತ್ವದಲ್ಲಿ ದಿನಪೂರ್ತಿಯಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. 

ವೇದಮೂರ್ತಿ ಶ್ರೀ ಶಂಕರನಾರಾಯಣ ತಂತ್ರಿ ಡೊಂಬಿವಲಿ ಅವರ ಪೌರೋಹಿತ್ಯ ದಲ್ಲಿ ಸಾಮೂಹಿಕ ಪ್ರಾರ್ಥನೆ, ಅದ್ಯಗಣ ಯಾಗ, ತೋರಣ ಮುಹೂರ್ತ, ಪರಿವಾರ ದೇವತೆಗಳ ನವಕ ಕಲಶ ಹಾಗೂ ಶ್ರೀ  ದೇವಿಗೆ 25 ಕಲಶದ ಕಲಶ ಪೂರಣ, ಪಂಚಾಮೃತ ಅಭಿಷೇಕ, ಪರಿವಾರ ದೇವತೆಗಳ ಅಭಿಷೇಕ, ಶ್ರೀ ದೇವಿಗೆ ಪ್ರಧಾನ ಹೋಮ, ಪಲ್ಲಪೂಜೆ, ಪ್ರಧಾನ ಕಲಶಾಭಿಷೇಕ, ಮಧ್ಯಾಹ್ನ ಮಹಾ ಮಂಗಳಾರತಿ ಮತ್ತು ಅನ್ನ ಸಂತರ್ಪಣೆ ನಡೆಯಿತು.

ಮಂದಿರದಲ್ಲಿ ಪ್ರತಿಷ್ಠಾಪಿತ ಗಣಪತಿ,  ಈಶ್ವರ, ಆಂಜನೇಯ, ನಾಗದೇವರು, ರಕ್ತೇಶ್ವರಿ ಹಾಗೂ ಭದ್ರಕಾಳಿ ದೇವರಿಗೂ ವಿಶೇಷ ಪೂಜೆಗೈಯಲಾಯಿತು. 
ವಿದ್ವಾನರಾದ ರಘುಪತಿ ಭಟ್‌, ಸುಬ್ರಹ್ಮಣ್ಯ ಭಟ್‌, ರಾಜೇಶ್‌ ಭಟ್‌ ಕಿದಿಯೂರು, ಉಮಾಶಂಕರ್‌ ಭಟ್‌, ದುರ್ಗಾಪ್ರಸಾದ್‌ ಭಟ್‌, ವ್ಯಾಸ ಭಟ್‌, ಉದಯಶಂಕರ ಭಟ್‌, ನಿರಂಜನ ಭಟ್‌ ನಂದಿಕೂರು ಇವರು ವಿವಿಧ ಪೂಜಾದಿಗಳನ್ನು ನೆರವೇರಿಸಿ  ನೆರೆದ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಿ ಹರಸಿದರು. 
ಉಪಸ್ಥಿತ ನಗರದ ಹಿರಿಯ ಹೊಟೇಲ್‌ ಉದ್ಯಮಿ, ದಾನಿ ಗಂಗಾಧರ ಎಸ್‌. ಪಯ್ಯಡೆ ಅವರನ್ನು ಶ್ರೀ ಗೀತಾಂಬಿಕಾ ಸೇವಾ ಸಮಿತಿಯ ಅಧ್ಯಕ್ಷ ಕಡಂದಲೆ  ಸುರೇಶ್‌ ಎಸ್‌. ಭಂಡಾರಿ ಮತ್ತು ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ್‌ ಪಿ. ಕೋಟ್ಯಾನ್‌ ಹಾಗೂ ಪದಾಧಿಕಾರಿಗಳು ಸಮ್ಮಾನಿಸಿ ಗೌರವಿಸಿದರು.
ಸಂಜೆ  ಶ್ರೀ ಗೀತಾಂಬಿಕಾ ಭಜನಾ ಮಂಡಳಿ ಯವರಿಂದ ಭಜನ ಕಾರ್ಯಕ್ರಮ ನಡೆಯಿತು.  

Advertisement

ರಾತ್ರಿ ದೇವಿಯ ದರ್ಶನ, ರಂಗಪೂಜೆ ಆನಂತರ ಉತ್ಸವ ಬಲಿ, ಪ್ರಸಾದ ವಿತರಣೆ ನಡೆಯಿತು. ರಾತ್ರಿ ಗಂಗಾಧರ ಪಯ್ಯಡೆ ಪ್ರಾಯೋಜಕತ್ವದಲ್ಲಿ ದಿ| ರಮಾನಾಥ ಪಯ್ಯಡೆ ಸ್ಮರಣಾರ್ಥ ಶ್ರೀ ಗೀತಾಂಬಿಕಾ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲಾವಿದರಿಂದ “ಇಂದ್ರಜಿತು ಕಾಳಗ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

ಈ ಸಂದರ್ಭದಲ್ಲಿ ಸೇವಾ ಸಮಿತಿಯ  ಕೋಶಾಧಿಕಾರಿ ವಿಕ್ರಮ ಸುವರ್ಣ, ಉಪಾಧ್ಯಕ್ಷ ಸತೀಶ್‌ ಕೆ. ಶೆಟ್ಟಿ, ಉಪ ಗೌರವಾಧ್ಯಕ್ಷ ಜಯರಾಮ ಜಿ. ರೈ, ಕಾರ್ಯಾಧ್ಯಕ್ಷ ಸುರೇಶ್‌ ಪಿ. ಕೋಟ್ಯಾನ್‌, ಉಪ ಕಾರ್ಯಾಧ್ಯಕ್ಷರುಗಳಾದ  ವಿಠಲ್‌ ಶೆಟ್ಟಿ ಮತ್ತು ಬೆಳುವಾಯಿ ಸಂಜೀವ ಪೂಜಾರಿ, ಜೊತೆ ಕಾರ್ಯದರ್ಶಿ ಸುಧಾಕರ ಶೆಟ್ಟಿ, ಜೊತೆ ಕೋಶಾಧಿಕಾರಿಗಳಾದ ಸಚಿನ್‌ ಡಿ. ಜಾಧವ್‌, ಸೌಮ್ಯಾ ಎಸ್‌. ಪೂಜಾರಿ, ಲೆಕ್ಕಪತ್ರ ಪರಿಶೋಧಕ ಸಿಎ ಬಿಪಿನ್‌ ಶೆಟ್ಟಿ, ಯಕ್ಷಗಾನ ಮಂಡಳಿಯ  ಸಂಚಾಲಕ ಸುನೀಲ್‌ ಅಮೀನ್‌, ವ್ಯವಸ್ಥಾಪಕ ಪ್ರಭಾಕರ್‌ ಕುಂದರ್‌, ಮಹಿಳಾ ಮಂಡಳಿ ಮತ್ತು ಪೂಜಾ ಸಮಿತಿ ಹಾಗೂ ಭಜನಾ ಸಮಿತಿಯ ಸದಸ್ಯರು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು. 

ಚಿತ್ರ-ವರದಿ : ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next