ಬ್ರಹ್ಮಾವರ: ವಿಘ್ನನಿವಾರಕನಾದ ಗಣೇಶನು ವಿಶ್ವದೆಲ್ಲೆಡೆ ಪೂಜಿಸಲ್ಪಡುತ್ತಾನೆ. ಜಾತ್ಯತೀತ, ಧರ್ಮಾತೀತವಾಗಿ ಸರ್ವರಿಂದ ಆರಾಧಿಸಲ್ಪಡುವ ಶ್ರೀ ಗಣೇಶನು ವಿಶ್ವಮಾನ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಮಂಗಳವಾರ ಬಾರಕೂರು ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಶ್ರೀ ಗಣೇಶೋತ್ಸವದ ಸುವರ್ಣ ಮಹೋತ್ಸವದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರೀ ಗಣೇಶನು ದುರ್ಜನರಿಗೆ ವಿಘ್ನಕಾರಕ, ಸಜ್ಜನರಿಗೆ ವಿಘ್ನನಿವಾರಕ. ಶ್ರದ್ಧೆಯಿಂದ ಶ್ರಮಪಟ್ಟು ಮಾಡಿದ ಕಾರ್ಯಕ್ಕೆ ದೇವರು ಫಲ ನೀಡುತ್ತಾನೆ ಎಂದರು.
ಸಮ್ಮಾನ: ಸಮಾರಂಭದಲ್ಲಿ ಮಂಗಳೂರು ಗಣೇಶ್ ಬೀಡಿ ವರ್ಕ್ಸ್ ಆಡಳಿತ ಪಾಲುದಾರ ಡಾ| ಬಿ.ಜಗನ್ನಾಥ ಶೆಣೈ ಮತ್ತು ಗಣೇಶೋತ್ಸವ ಸುವರ್ಣ ಮಹೋತ್ಸವ ಸಮಿತಿ ಕಾರ್ಯದರ್ಶಿ ವೈ. ಮೋಹನದಾಸ್ ಕಾಮತ್ ಅವರನ್ನು ಸಮ್ಮಾನಿಸಲಾಯಿತು.
ಅತಿಥಿಗಳಾಗಿ ಸಿಂಡಿಕೇಟ್ ಬ್ಯಾಂಕ್ ಮಣಿಪಾಲ ವಲಯ ಕಚೇರಿ ಜನರಲ್ ಮ್ಯಾನೇಜರ್ ಸತೀಶ್ ಕಾಮತ್, ಬಾರಕೂರು ಶ್ರೀ ಪಂಚಲಿಂಗೇಶ್ವರ ದೇವ ಸ್ಥಾನದ ಅಧ್ಯಕ್ಷ ಬಿ.ಶಾಂತಾರಾಮ ಶೆಟ್ಟಿ, ಬಾರಕೂರು ಗ್ರಾ.ಪಂ. ಅಧ್ಯಕ್ಷೆ ಶೈಲಾ ಡಿಸೋಜ, ಬಾರಕೂರು ರಂಗನಕೆರೆ ಶೆಟ್ಟಿಗಾರ್ ಇಂಡಸ್ಟಿÅàಸ್ ಸಾರ್ವ ಜನಿಕ ಶ್ರೀ ಗಣೇ ಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ.ಶ್ರೀನಿವಾಸ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಬಾರಕೂರು ಶ್ರೀ ಪಟ್ಟಾಭಿರಾಮ ಚಂದ್ರ ದೇವಸ್ಥಾನದ ಅಧ್ಯಕ್ಷ ವೈ. ಗಣಪತಿ ಕಾಮತ್ ಅತಿಥಿಗಳನ್ನು ಗೌರವಿಸಿ ದರು. ಗಣೇಶೋತ್ಸವಕ್ಕೆ ನಿರಂತರ ಸಹಕಾರ ನೀಡಿದವರನ್ನು ಗೌರವಿಸಲಾಯಿತು.
ಶ್ರೀ ಗಣೇಶೋತ್ಸವ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ವೆಂಕಟ ರಮಣ ಭಂಡಾರ್‌ಕರ್ ಸ್ವಾಗತಿಸಿ, ಬಿ.ಸುಧಾಕರ ರಾವ್ ವಂದಿಸಿದರು. ಎಸ್. ಪ್ರಭಾಕರ ಪೈ, ರಾಮಚಂದ್ರ ಕಾಮತ್ ಸಮ್ಮಾನಿತರನ್ನು ಪರಿಚಯಿಸಿ ದರು. ಎನ್.ಆರ್. ದಾಮೋದರ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.