ಪುಣೆ: ಶ್ರೀ ದುರ್ಗಾಕಾಳಿ ಮಂದಿರ ಪಂಚ ಪಾಂಡವ ಸೊಸೈಟಿ ಗೋಖಲೆನಗರ ಇಲ್ಲಿ ವಾರ್ಷಿಕ ನಾಗರ ಪಂಚಮಿ ಉತ್ಸವವು ಆ. 15 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಲಿಂಗಪ್ಪ ಪೂಜಾರಿ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಬೆಳಗ್ಗೆಯಿಂದ ಆರಂಭಗೊಂಡ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಭಕ್ತಾದಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ ನಾಗಕನ್ಯಾ ದರ್ಶನ, ನಾಗದೇವರ ವಿಶೇಷವಾಗಿ ಅಲಂಕೃತ ಮಂಟಪಕ್ಕೆ ಪೂಜೆ ಸಲ್ಲಿಸಲಾಯಿತು. ಭಕ್ತಾದಿಗಳು ನಾಗದೇವರಿಗೆ ತಾನು ತಂಬಿಲ ಸೇವೆಗಳನ್ನು ಅರ್ಪಿಸಿ ಪೂಜೆಗೈದರು. ಚಂದ್ರಹಾಸ್ ಶೆಟ್ಟಿ ಚಾರೂಸ್ ವತಿಯಿಂದ ಮಂದಿರಕ್ಕೆ ನಾಗದೇವರ ಮೂರ್ತಿಯನ್ನು ಒಪ್ಪಿಸಿದರು.
ನಂತರ ತೀರ್ಥ ಪ್ರಸಾದ ವಿತರಣೆ ಹಾಗೂ ಬಾಳಾಸಾಹೇಬ್ ಅಪ್ಪಯ್ಯ ಹುಕ್ಕೇರಿ, ಮೀನಾ ಬಾಳಾಸಾಹೇಬ್ ಹುಕ್ಕೇರಿ, ರಶ್ಮಿ ಬಿ. ಹುಕ್ಕೇರಿ, ಓಂಕಾರ್ ಬಿ. ಹುಕ್ಕೇರಿ, ಪ್ರಣಾಲಿ ಬಿ. ಹುಕ್ಕೇರಿ ಇವರ ಪ್ರಾಯೋಜಕತ್ವದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ಗಣೇಶ್ ಹೆಗ್ಡೆ ಅಗತ್ಯ, ಪಾಂಡುರಂಗ ಪೂಜಾರಿ ಶಿವಸಾಗರ್, ಸತೀಶ್ ಪೂಜಾರಿ ಗುರುದತ್ತ, ವಿಶ್ವನಾಥ ಪೂಜಾರಿ ಕಪಿಲ, ಶ್ರೀಧರ ಶೆಟ್ಟಿ ಕÇÉಾಡಿ, ಸದಾಶಿವ ಸಾಲ್ಯಾನ್ ಖುಷೂº, ಪ್ರವೀಣ್ ಶೆಟ್ಟಿ ಪುತ್ತೂರು, ಗೋವರ್ಧನ್ ಶೆಟ್ಟಿ, ದಿನೇಶ್ ಪೂಜಾರಿ ಗಾಂಧಿ ಭವನ್, ರಮೇಶ್ ಶೆಟ್ಟಿ ಎನ್. ಐ. ಬಿ. ಎಂ., ಚೇತನ್ ಶೆಟ್ಟಿ ವುಡ್ ಲ್ಯಾಂಡ್, ಉದಯ್ ಶೆಟ್ಟಿ ರಾಮ್ ನಗರ, ಅರುಣ್ ಪೂಜಾರಿ ಫುಡ್ ಪ್ಯಾಲೇಸ್, ಸಂಜೀವ ಪೂಜಾರಿ ಮಯೂರ್ ಕಾಲನಿ, ಸುನಿಲ್ ಪೂಜಾರಿ ಕೊಣಾಜೆ, ಸುಧಾಕರ್ ಶೆಟ್ಟಿ ಶಿವಾಜಿನಗರ, ಚಂದ್ರಹಾಸ್ ಶೆಟ್ಟಿ ಚಾರೂಸ್, ದಿನೇಶ್ ಶೆಟ್ಟಿ, ಶ್ರೀಧರ ಪೂಜಾರಿ, ಜಗನ್ನಾಥ ಮೂಲ್ಯ, ಸುರೇಶ್ ಪೂಜಾರಿ ಚಂದನ್ ನಗರ್, ಗುರುದತ್ತ್, ಯಾದವ್ ಶೆಟ್ಟಿ ಬಂಜಾರ ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದು ತೀರ್ಥ ಪ್ರಸಾದ ಸ್ವೀಕರಿಸಿದರು. ಪ್ರಭಾಕರ ಸಾಫಲ್ಯ, ಶ್ರೀಧರ ಪೂಜಾರಿ, ದೇವ್ ಪೂಜಾರಿ, ಸುಧಾಕರ ಪೂಜಾರಿ, ಹರೀಶ್ ಪೂಜಾರಿ, ಆನಂದ ಪೂಜಾರಿ, ಮಯೂರ್ ಪೂಜಾರಿ, ದೀಪಕ್ ಪೂಜಾರಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.