Advertisement

ಜುಲೈ 12ರಂದು ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಲಲಿತ ಮಹಾ ತ್ರಿಪುರ ಸುಂದರಿ ಮಹಾಯಾಗ

12:09 PM Jul 11, 2023 | Team Udayavani |

ಉಡುಪಿ: ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಜುಲೈ 12ರ ಬುಧವಾರದಂದು ಶ್ರೀ ಚಕ್ರ ಪೀಠ ಸುರಪೂಜಿತೆಗೆ ಲಲಿತ ಮಹಾ ತ್ರಿಪುರ ಸುಂದರಿ ಮಹಾ ಯಾಗ ಸಂಪನ್ನಗೊಳ್ಳಲಿದೆ.

Advertisement

ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಸ್ಥಳೀಯ ಉದ್ಯಮಿಯೊರ್ವರ ಪ್ರಾಯಶ್ಚಿತ್ತ ಪೂರ್ವಕವಾಗಿ ಕ್ಷೇತ್ರದಲ್ಲಿ ಸಂಪನ್ನಗೊಳ್ಳಲಿದೆ.

ದಕ್ಷಿಣ ಭಾರತದಲ್ಲಿ ಅತಿ ಎತ್ತರವಾದ ಮೇರು ಶ್ರೀ ಚಕ್ರವನ್ನು ಹೊಂದಿ ಇಪ್ರ ಫಲಪ್ರದಕ್ಷೇತ್ರವಾಗಿ ಬೆಳಿಗ್ಗೆ ಗಂಟೆ 10 ರಿಂದ ಈ ಪುಣ್ಯ ಪ್ರದಯಾಗವು ಆರಂಭಗೊಳ್ಳಲಿದೆ. ಸಹಸ್ರ ಸಹಸ್ರ ಸಂಖ್ಯೆಯ ಕದಳಿ ಹಣ್ಣನ್ನು ತ್ರಿಮಧುರಯುಕ್ತವಾಗಿ ಹೋಮಿಸಿ ಲಲಿತಾ ಸಹಸ್ರನಾಮದಿಂದ ಅರ್ಚ್ಚಿಸಿ ವಿಶೇಷ ನೈವೇದ್ಯಗಳನ್ನುಸಮರ್ಪಿಸಿ ತ್ರಿಪುರಂಬಿಕೆಯನ್ನು ಪ್ರಸನ್ನಗೊಳಿಸಿ ಆಶೀರ್ವಾದ ಯಾಚಿಸುವ ಈ ಮಹಾನ್ ಯಾಗದ ಪ್ರಯುಕ್ತ ಬ್ರಾಹ್ಮಣ ಸುವಾಸಿನಿ ಆರಾಧನೆ, ಕನ್ನಿಕರಾದನೆ ,ದಂಪತಿ ಪೂಜೆ,ಆಚಾರ್ಯ ಪೂಜೆ ,ಕುಮಾರ ಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿದ್ದಾರೆ.

ಇದನ್ನೂ ಓದಿ: ಶಿವಣ್ಣನ ಹುಟ್ಟುಹಬ್ಬಕ್ಕೆ ಭರ್ಜರಿ ತಯಾರಿ: ದಿನಪೂರ್ತಿ ಕಾರ್ಯಕ್ರಮ

Advertisement

Udayavani is now on Telegram. Click here to join our channel and stay updated with the latest news.

Next