Advertisement

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಸಹಸ್ರ ಕುಂಭಾಭಿಷೇಕ, ನಾಗಬ್ರಹ್ಮ ಮಂಡಲೋತ್ಸವ ಸೇವೆ

03:53 PM Mar 06, 2023 | Team Udayavani |

ತುಳುನಾಡಿನಲ್ಲಿ ನಾಗ ಮತ್ತು ಬ್ರಹ್ಮ ಬೇರೆ ಬೇರೆ ಎರಡು ಶಕ್ತಿಗಳು. ಬ್ರಹ್ಮ ಎಂಬುವುದು “ಬೆರ್ಮೆರ್‌’ ಎಂಬ ಶಬ್ದದ ಸಂಸ್ಕೃತೀಕರಣಗೊಂಡ ರೂಪ, ಬೆರ್ಮೆರ್‌ ಮೂಲತಃ ತುಳುನಾಡಿನಲ್ಲಿ ಒಬ್ಬ ರಾಜನಾಗಿದ್ದ ಎಂಬುವುದನ್ನು ಒಪ್ಪಬಹುದಾದಂತಹ ವಿಚಾರವಾಗಿದೆ. ತುಳುನಾಡಿನಲ್ಲಿ “ಪೆರಿಯಾರ್‌’ ಹಾಗೂ “ಬೆರ್ಮೆರ್‌’ ಎಂದರೆ ಹಿರಿಯ ಎಂಬ ಅರ್ಥಬರುತ್ತದೆ.

Advertisement

ಬೆರ್ಮೆರನ್ನು ಭೂತಗಳ ಅಧ್ಯಕ್ಷ ಭೂತಗಳಿಗೆ ಹಿರಿಯ ಎಂದೂ ಪೂರ್ವಿಕರು ತುಳುನಾಡಿನಲ್ಲಿ ಆರಾಧನೆ ಮಾಡಿಕೊಂಡು ಬಂದಿರುತ್ತಾರೆ. ತುಳುನಾಡಿನಲ್ಲಿ ಪ್ರಸ್ತಾವಗೊಳ್ಳುವ ಮೊದಲ ದೈವ ಕುಂಡೋದರ ಭೂತಾಳ ಪಾಂಡ್ಯನ ಪಾದxನದಲ್ಲಿ ನರಬಲಿ ಕೇಳಿದ ದೈವವಿದು ಈಗ ತುಳುನಾಡಿನಲ್ಲಿ ಎಲ್ಲಿಯೂ ಈ ದೈವದ ಆರಾಧನೆ ಇಲ್ಲ. ಕುಂಡೋದರ ದೈವವೇ ಹಿರಿಯನಾದುದರಿಂದ ಈ ತನಕ ಬೆರ್ಮೆರ್‌ ಎಂದು ಆರಾಧಿಸಲ್ಪಡುತ್ತಿರುವ ಸಾಧ್ಯತೆ ಇದೆ. ಈ ದೈವದಲ್ಲಿ ಕಾಲಭೆ„ರವನ ಅಂಶವೂ ಎಂದು ಹೇಳುತ್ತಾರೆ.

ಭೈರವ ಶಬ್ದ ಕೂಡ ಬರಮಪ್ಪ, ಬರಮ ಇತ್ಯಾದಿ ರೂಪ ಬರಮನೇ ಬೆರ್ಮ ಆಗಿರುವ ಸಾಧ್ಯತೆ ಇದೆ. ಏಕಸಾಲೆ ಧೈಯ್ನಾರರ ಬಾಮಕುಮಾರ ಹುಟ್ಟುವಾಗಲೇ ಬೆರ್ಮೆರ್‌ ಲಕ್ಷಣಗಳನ್ನು ಹೊಂದಿದ್ದ ಮಕ್ಕಳಿಂದ ಮೋಸ ಹೋಗಿ ನಂತರ ತಾಯಿಯ ಶಕ್ತಿಯಿಂದ ಎದ್ದು ಬಂದು ಘಟ್ಟದ ಮೇಲೆ ಮಹಾಂಕಾಳಿ ಅಬ್ಬೆ ಉತ್ಸವಕ್ಕೆ ಹೋಗುತ್ತಾನೆ ದೇವರ ಶರ್ಮಿಜ ಹಕ್ಕಿಗಳನ್ನು ಕೊಂದು ಗಡೀಪಾರಿಗೆ ಒಳಗಾಗುತ್ತಾನೆ.

ಘಟ್ಟದಿಂದ ಕೆಳಗಿಳಿಯುವಾಗ ಸುಬ್ರಹ್ಮಣ್ಯ ದೇವರೊಂದಿಗೆ ಯುದ್ಧವಾಗುತ್ತದೆ. ಸುಬ್ರಹ್ಮಣ್ಯ ಹೇಳಿದಂತೆ ಪದ್ಮಾ ನದಿಯನ್ನು ಎಡದಿಂದ ಬಲಕ್ಕೆ ತಿರುಗಿಸುತ್ತಾನೆ.ಆಗ ಸುಬ್ರಹ್ಮಣ್ಯ ನೀನು ಬ್ರಹ್ಮ ನಾನು ನಾಗ ಎಂದು ಹೇಳುತ್ತಾನೆ ಈ ಕಡೆಯ ಪ್ರಕಾರ ಬಾಮಲ್ಲ ಕುಮಾರನೇ ಬೆರ್ಮೆರ್‌ ಎಂದು ಸ್ಪಷ್ಟವಾಗುತ್ತದೆ. ಪುರಾತನ ಕಾಲದಲ್ಲಿ ಬೆರ್ಮರನ್ನು ವರ್ಷಕ್ಕೊಮ್ಮೆ ಕಾಡಿನ ಬನದಲ್ಲಿ ಆರಾಧನೆ ಮಾಡುವ ಸಂಪ್ರದಾಯವಿತ್ತು.

ಬೆರ್ಮರಿಗೆ ಇಂತಹದ್ದೇ ಆದ ಪುರುಷರೂಪವಿಲ್ಲ . ಕಲ್ಲು ಅಥವಾ ಮಡಕೆಯಲ್ಲಿ ಬೆರ್ಮರನ್ನು ಸಂಕಲ್ಪಿಸಿ ಆರಾಧಿಸಿಕೊಂಡು ಬಂದಿರುತ್ತಾರೆ. ಕಾಲಾಂತರದಲ್ಲಿ ಈ ಕಲ್ಲು ಅಥವಾ ಮಡಿಕೆಯ ಮೇಲೆ ಹುತ್ತಗಳು ಬೆಳೆದು ಆ ಹುತ್ತದಲ್ಲಿ ನಾಗಗಳು ಬಂದು ವಾಸವಾಗಿ ಇರುತ್ತಿತ್ತು. ಬೆರ್ಮೆರ್‌ ಆರಾಧನಾ ಸ್ಥಳದಲ್ಲಿ ಹುತ್ತಗಳಲ್ಲಿ ನಾಗನು ಬಂದು ವಾಸವಾಗಿರುವುದರಿಂದ ಕಾಲಾಂತರದಲ್ಲಿ ನಾಗಬ್ರಹ್ಮ ಎಂಬ ಆರಾಧನೆಯು ಬಂತು.

Advertisement

ಕಾಡಿನಲ್ಲಿ ಹುತ್ತಗಳು ಇರುವಲ್ಲಿ ಹಾವುಗಳು ಕಾಣಿಸಿಕೊಳ್ಳುವುದು ಸಾಮಾನ್ಯ ವಿಚಾರ. ನಾಗಾರಾಧನೆ ಎಂಬುವುದು ಜಗತ್ತಿನ ಪ್ರಾಚೀನ ಆರಾಧನಾ ಸಂಪ್ರದಾಯ. ಈ ನಾಗನ ಆರಾಧನೆಯು ತುಳುನಾಡಿನಲ್ಲಿಯೂ ಪೂರ್ವಕಾಲದಿಂದಲೂ ಬಂದಂತಹ ವಿಚಾರ.

ತುಳುನಾಡಿನ ಬೆರ್ಮೆರ್‌ ವೈದಿಕ ಕಲ್ಪನೆಯ ಬ್ರಹ್ಮರಿಗಿಂತ ಬೇರೆಯಾಗಿಯೇ ಕಾಣಿಸಿಕೊಂಡಿದೆ.ಇಲ್ಲಿ ಬೆರ್ಮೆರ್‌ ಸಂತಾನ ದೇವತೆ ಸಂಪತ್ತನ್ನು ಕೊಡುವಂತಹ ದೇವತೆ. ಅದೇ ರೀತಿ ನಾಗದೇವರು ಸಂಪತ್ತಿಗೆ ಮತ್ತು ಸಂತಾನಕ್ಕೆ ಆರಾಧನೆ ಮಾಡುವ ದೇವತೆ. ಆದ್ದರಿಂದಲೇ ನಾಗನನ್ನು ಮತ್ತು ಬ್ರಹ್ಮನನ್ನು ನಾಗಬ್ರಹ್ಮ ಎಂದು ಆರಾಧನೆ ಮಾಡಿಕೊಂಡು ಬರುತ್ತಾರೆ.

ಕೆಲವೆಡೆ ಬ್ರಹ್ಮರಿಗೆ ವಿಶಿಷ್ಟವಾದ ಆರಾಧನೆಗಳಿವೆ. ಗರೋಡಿಗಳಲ್ಲಿ ಕುದುರೆ ಏರಿದ ವೀರನ ರೂಪ ಸುಂದರ ರಾಜಪುರುಷನ ರೂಪ ಕುದುರೆಯೇರಿದ ವೀರನ ಸ್ವರೂಪಗಳಲ್ಲಿ ತಲೆಯ ಮೇಲ್ಭಾಗ ನಾಗನ ಹೆಡೆಯಿಂದ ಆವೃತ್ತವಾಗಿರುತ್ತದೆ. ಕೆಲವೆಡೆ ಲಿಂಗಾಕಾರದಲ್ಲಿ ಕೂಡ ಆರಾಧನೆ ಮಾಡಿಕೊಂಡು ಬಂದಿರುತ್ತಾರೆ.

ಆರಂಭ ಕಾಲದಲ್ಲಿಯೇ ಬೆರ್ಮರಿಗೆ ಮೂರ್ತಿರೂಪ ಇರಲಿಲ್ಲ . ಕೋಟಿ ಚೆನ್ನಯ ಕಾಲಕ್ಕಾಗುವಾಗಲೇ ಅಂದರೆ ಸುಮಾರು 16ನೇ ಶತಮಾನದ ಕಾಲಕ್ಕನುಗುಣವಾಗಲೇ ಬೆರ್ಮೆರೊಂದಿಗೆ ನಾಗನಿಗೂ ಆರಾಧನೆ ಆಯಿತು. ಈ ರೀತಿಯಾಗಿ ಕಂಕನಾಡಿ ಗರೋಡಿಯಲ್ಲೂ ಕೂಡ ಬೆರ್ಮರ ಆರಾಧನೆಯೊಂದಿಗೆ ನಾಗಾರಾಧನೆಯು ನಡೆದುಕೊಂಡು ಬಂದಿರುವುದರಿಂದ ಬ್ರಹ್ಮರು ಹಾಗೂ ನಾಗದೇವರಿಗೆ ನಾಗಬ್ರಹ್ಮ ಮಂಡಲೋತ್ಸವವನ್ನು ಮಾಡಬೇಕೆನ್ನುವಂತಹ ಸಂಕಲ್ಪ ಪೂರ್ವ ಕಾಲದಲ್ಲಿಯೇ ಇತ್ತು. ಈ ಒಂದು ಸಂಕಲ್ಪಕ್ಕೆ ಕಂಕನಾಡಿ ಗರೋಡಿ ಕ್ಷೇತ್ರಕ್ಕೆ 150 ನೇ ವರ್ಷದ ಸಂಭ್ರಮಾಚರಣೆಯಲ್ಲಿ “ನಾಗಬ್ರಹ್ಮ ಮಂಡಲೋತ್ಸವ”ವನ್ನು ಮಾಡುವ ಭಾಗ್ಯ ನಮಗೆ ಒದಗಿ ಬಂದಿದೆ .ಅದು ಕ್ಷೇತ್ರದ ಆರಾಧನಾ ದೇವರಾದಂತಹ ನಾಗಬ್ರಹ್ಮರು ಹಾಗೂ ಕಾರಣೀಕ ಪುರುಷರಾದ ಕೋಟಿ ಚೆನ್ನಯರ ಅನುಗ್ರಹವೇ ಸರಿ.

ಶ್ರೀ ಮನೋಜ್‌ ಶಾಂತಿ ಕಾವೂರು

Advertisement

Udayavani is now on Telegram. Click here to join our channel and stay updated with the latest news.

Next