Advertisement
ಬೆರ್ಮೆರನ್ನು ಭೂತಗಳ ಅಧ್ಯಕ್ಷ ಭೂತಗಳಿಗೆ ಹಿರಿಯ ಎಂದೂ ಪೂರ್ವಿಕರು ತುಳುನಾಡಿನಲ್ಲಿ ಆರಾಧನೆ ಮಾಡಿಕೊಂಡು ಬಂದಿರುತ್ತಾರೆ. ತುಳುನಾಡಿನಲ್ಲಿ ಪ್ರಸ್ತಾವಗೊಳ್ಳುವ ಮೊದಲ ದೈವ ಕುಂಡೋದರ ಭೂತಾಳ ಪಾಂಡ್ಯನ ಪಾದxನದಲ್ಲಿ ನರಬಲಿ ಕೇಳಿದ ದೈವವಿದು ಈಗ ತುಳುನಾಡಿನಲ್ಲಿ ಎಲ್ಲಿಯೂ ಈ ದೈವದ ಆರಾಧನೆ ಇಲ್ಲ. ಕುಂಡೋದರ ದೈವವೇ ಹಿರಿಯನಾದುದರಿಂದ ಈ ತನಕ ಬೆರ್ಮೆರ್ ಎಂದು ಆರಾಧಿಸಲ್ಪಡುತ್ತಿರುವ ಸಾಧ್ಯತೆ ಇದೆ. ಈ ದೈವದಲ್ಲಿ ಕಾಲಭೆ„ರವನ ಅಂಶವೂ ಎಂದು ಹೇಳುತ್ತಾರೆ.
Related Articles
Advertisement
ಕಾಡಿನಲ್ಲಿ ಹುತ್ತಗಳು ಇರುವಲ್ಲಿ ಹಾವುಗಳು ಕಾಣಿಸಿಕೊಳ್ಳುವುದು ಸಾಮಾನ್ಯ ವಿಚಾರ. ನಾಗಾರಾಧನೆ ಎಂಬುವುದು ಜಗತ್ತಿನ ಪ್ರಾಚೀನ ಆರಾಧನಾ ಸಂಪ್ರದಾಯ. ಈ ನಾಗನ ಆರಾಧನೆಯು ತುಳುನಾಡಿನಲ್ಲಿಯೂ ಪೂರ್ವಕಾಲದಿಂದಲೂ ಬಂದಂತಹ ವಿಚಾರ.
ತುಳುನಾಡಿನ ಬೆರ್ಮೆರ್ ವೈದಿಕ ಕಲ್ಪನೆಯ ಬ್ರಹ್ಮರಿಗಿಂತ ಬೇರೆಯಾಗಿಯೇ ಕಾಣಿಸಿಕೊಂಡಿದೆ.ಇಲ್ಲಿ ಬೆರ್ಮೆರ್ ಸಂತಾನ ದೇವತೆ ಸಂಪತ್ತನ್ನು ಕೊಡುವಂತಹ ದೇವತೆ. ಅದೇ ರೀತಿ ನಾಗದೇವರು ಸಂಪತ್ತಿಗೆ ಮತ್ತು ಸಂತಾನಕ್ಕೆ ಆರಾಧನೆ ಮಾಡುವ ದೇವತೆ. ಆದ್ದರಿಂದಲೇ ನಾಗನನ್ನು ಮತ್ತು ಬ್ರಹ್ಮನನ್ನು ನಾಗಬ್ರಹ್ಮ ಎಂದು ಆರಾಧನೆ ಮಾಡಿಕೊಂಡು ಬರುತ್ತಾರೆ.
ಕೆಲವೆಡೆ ಬ್ರಹ್ಮರಿಗೆ ವಿಶಿಷ್ಟವಾದ ಆರಾಧನೆಗಳಿವೆ. ಗರೋಡಿಗಳಲ್ಲಿ ಕುದುರೆ ಏರಿದ ವೀರನ ರೂಪ ಸುಂದರ ರಾಜಪುರುಷನ ರೂಪ ಕುದುರೆಯೇರಿದ ವೀರನ ಸ್ವರೂಪಗಳಲ್ಲಿ ತಲೆಯ ಮೇಲ್ಭಾಗ ನಾಗನ ಹೆಡೆಯಿಂದ ಆವೃತ್ತವಾಗಿರುತ್ತದೆ. ಕೆಲವೆಡೆ ಲಿಂಗಾಕಾರದಲ್ಲಿ ಕೂಡ ಆರಾಧನೆ ಮಾಡಿಕೊಂಡು ಬಂದಿರುತ್ತಾರೆ.
ಆರಂಭ ಕಾಲದಲ್ಲಿಯೇ ಬೆರ್ಮರಿಗೆ ಮೂರ್ತಿರೂಪ ಇರಲಿಲ್ಲ . ಕೋಟಿ ಚೆನ್ನಯ ಕಾಲಕ್ಕಾಗುವಾಗಲೇ ಅಂದರೆ ಸುಮಾರು 16ನೇ ಶತಮಾನದ ಕಾಲಕ್ಕನುಗುಣವಾಗಲೇ ಬೆರ್ಮೆರೊಂದಿಗೆ ನಾಗನಿಗೂ ಆರಾಧನೆ ಆಯಿತು. ಈ ರೀತಿಯಾಗಿ ಕಂಕನಾಡಿ ಗರೋಡಿಯಲ್ಲೂ ಕೂಡ ಬೆರ್ಮರ ಆರಾಧನೆಯೊಂದಿಗೆ ನಾಗಾರಾಧನೆಯು ನಡೆದುಕೊಂಡು ಬಂದಿರುವುದರಿಂದ ಬ್ರಹ್ಮರು ಹಾಗೂ ನಾಗದೇವರಿಗೆ ನಾಗಬ್ರಹ್ಮ ಮಂಡಲೋತ್ಸವವನ್ನು ಮಾಡಬೇಕೆನ್ನುವಂತಹ ಸಂಕಲ್ಪ ಪೂರ್ವ ಕಾಲದಲ್ಲಿಯೇ ಇತ್ತು. ಈ ಒಂದು ಸಂಕಲ್ಪಕ್ಕೆ ಕಂಕನಾಡಿ ಗರೋಡಿ ಕ್ಷೇತ್ರಕ್ಕೆ 150 ನೇ ವರ್ಷದ ಸಂಭ್ರಮಾಚರಣೆಯಲ್ಲಿ “ನಾಗಬ್ರಹ್ಮ ಮಂಡಲೋತ್ಸವ”ವನ್ನು ಮಾಡುವ ಭಾಗ್ಯ ನಮಗೆ ಒದಗಿ ಬಂದಿದೆ .ಅದು ಕ್ಷೇತ್ರದ ಆರಾಧನಾ ದೇವರಾದಂತಹ ನಾಗಬ್ರಹ್ಮರು ಹಾಗೂ ಕಾರಣೀಕ ಪುರುಷರಾದ ಕೋಟಿ ಚೆನ್ನಯರ ಅನುಗ್ರಹವೇ ಸರಿ.
ಶ್ರೀ ಮನೋಜ್ ಶಾಂತಿ ಕಾವೂರು