Advertisement

ಶ್ರೀ ಭಗೀರಥ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವ

11:18 PM May 14, 2019 | Team Udayavani |

ಮಡಿಕೇರಿ :ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಶ್ರೀಭಗೀರಥ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವವು ಸೋಮವಾರ ನಡೆಯಿತು.

Advertisement

ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ, ಜಿ.ಪಂ.ಉಪ ಕಾರ್ಯದರ್ಶಿ ಗುಡೂರು ಭೀಮಸೇನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ್‌, ಇತರರು ಶ್ರೀ ಭಗೀರಥ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡಿ ಗೌರವ ನಮನ ಸಲ್ಲಿಸಿದರು.

ಜಿ.ಪಂ.ಉಪ ಕಾರ್ಯದರ್ಶಿ ಗುಡೂರು ಭೀಮಸೇನ ಅವರು ಮಾತ ನಾಡಿ, ಶತಮಾನಗಳ ಹಿಂದೆ ರಾಜರಾಗಿ ಆಡಳಿತ ನಡೆಸಿದ ಭಗೀರಥರ ಕಠಿಣ ತಪಸ್ಸು ಇತರರಿಗೆ ಮಾದರಿಯಾಗಬೇಕು. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಯಿದ್ದು, ಭಗೀರಥರಂತೆ ಪ್ರಯತ್ನಪಟ್ಟಾಗ ಮಾತ್ರ ಯಶಸ್ಸು ಸಾಧಿಸಬಹುದು ಹಾಗೇ ಹೇಮರೆಡ್ಡಿ ಮಲ್ಲಮ್ಮ ಅವರ ಜೀವನ ಸರ್ವರಿಗೂ ಅನುಕರಣೀಯವಾದದ್ದು, ಅವರ ಸರಳತೆ, ಶಿವಭಕ್ತಿಯಿಂದ ಸಮಾಜದಲ್ಲಿನ ನಾನಾ ಸಮಸ್ಯೆಗಳನ್ನು ತನ್ನ ಮುನಿದವರಿಗೆ ತಾನೆಕೇ ಮುನಿಯಲಯ್ನಾ ಎಂಬಂತ ವ್ಯಕ್ತಿತ್ವವನ್ನು ಹೊಂದಿದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರು ತಮ್ಮನು ತಾವು ಶಿವ ಭಕ್ತಿಯಲ್ಲಿ, ದಾನ ಧರ್ಮಗಳಲ್ಲಿ, ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟು ಬಡವರ ಉದ್ಧಾರಕ್ಕಾಗಿ ಶ್ರಮಿಸಿದರು ಎಂದು ಅವರು ಹೇಳಿದರು.

ಸಮಾಜದಲ್ಲಿ ಅವರನ್ನು ಅನುಕರಣೆ ಮಾಡುವಂತ ವ್ಯಕ್ತಿತ್ವವನ್ನು ರೂಪಿಸಿ ಕೊಂಡಿದ್ದರು. ಬಡವರು, ಭಿಕ್ಷುಕರಿಗೆ ದಾನ ಧರ್ಮ ಮಾಡುವುದರಲ್ಲಿ ಮುಂದೆ ಇದ್ದು ಶಿವ ಭಕ್ತಿಯಿಂದ ಪ್ರಸಿದ್ಧಿಯಾಗಿದ್ದರು ಎಂದು ವಿವರಿಸಿದರು. ನಾನಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next