ಪುಣೆ: ಪುಣೆ ಯಲ್ಲಿ ನೂತನವಾಗಿ ಆರಂಭಗೊಂಡಿರುವ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ ಉದ್ಘಾಟನ ಸಮಾರಂಭ ಹಾಗೂ ಯಕ್ಷ ಗಾನ ಪ್ರದರ್ಶನವು ಸೆ.10 ರಂದು ಪುಣೆ ಕೇತ್ಕರ್‌ರೋಡ್ ಕನ್ನಡ ಸಂಘದ ಡಾ| ಕಲ್ಮಾಡಿ ಶಾಮರಾವ್ ಕನ್ನಡ ಮಾಧ್ಯಮ ಹೈಸ್ಕೂಲ್ ಸಭಾಂಗಣದಲ್ಲಿ ಅಪರಾಹ್ನ 3ರಿಂದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸಂಘದ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪುಣೆಯ ಹಿರಿಯ ಉದ್ಯಮಿ, ಪುಣೆ ಬಂಟರ ಸಂಘದ ಗೌರವಾಧ್ಯಕ್ಷ ಪುಣ್ಯಭೂಷಣ ಓಣಿಮಜಲು ಜಗನ್ನಾಥ ಬಿ. ಶೆಟ್ಟಿ ಅವರ ದಿವ್ಯ ಹಸ್ತದಿಂದ ಯಕ್ಷಗಾನ ಮಂಡಳಿಯ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಬಾಳಿಕೆ ಅವರು ಆಗಮಿಸಲಿದ್ದಾರೆ.
ಗೌರವ ಅತಿಥಿಗಳಾಗಿ ಶ್ರೀ ಗುರುದೇವಾ ಸೇವಾ ಬಳಗ ಪುಣೆ ಇದರ ಅಧ್ಯಕ್ಷರಾದ ಸದಾನಂದ ಕೆ. ಶೆಟ್ಟಿ, ಪಿಂಪ್ರಿ ಚಿಂಚಾÌಡ್ ಬಂಟರ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ ಡಿ. ಶೆಟ್ಟಿ, ಪುಣೆ ಕನ್ನಡ ಸಂಘದ ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್, ಬಂಟ್ಸ್ ಅಸೋಸಿಯೇಶನ್ ಪುಣೆ ಅಧ್ಯಕ್ಷ ನಾರಾಯಣ ಕೆ. ಶೆಟ್ಟಿ ಹಾಗೂ ಪುಣೆ ತುಳುಕೂಟದ ಅಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು ಆಗಮಿಸಲಿದ್ದಾರೆ.
ಈ ಸಂದರ್ಭ ಯಕ್ಷಗಾನ ರಂಗದ ಸಾಧಕ, ಹಿರಿಯ ಭಾಗವತ, ಸಾಹಿತಿ ಹಾಗೂ ಯಕ್ಷ ಗುರುಗಳಾದ ವಿಶ್ವವಿನೋದ ಬನಾರಿ ಇವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಗುವುದು. ಧಾರ್ಮಿಕ ಕಾರ್ಯಕ್ರಮವಾಗಿ ಪ್ರಾರಂಭದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಊರಿನ ಹೆಸರಾಂತ ಕಲಾವಿದರು ಹಾಗೂ ಮಂಡಳಿಯ ಕಲಾವಿದರ ಸಮ್ಮಿಲನದೊಂದಿಗೆ ರತಿ ಮನ್ಮಥ ಪರಿಣಯ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ವಿಶೇಷ ಆಕರ್ಷಣೆಯಾಗಿ ಕರಾವಳಿ ಕರ್ನಾಟಕದ ಹೆಸರಾಂತ ಕಲಾವಿದೆ, ಸುಶ್ರಾವ್ಯ ಹಾಡುಗಾರಿಕೆಯಿಂದ ಮನೆಮಾತಾಗಿರುವ ಕು| ಕಾವ್ಯಶ್ರೀ ಅಜೇರು ಭಾಗವತರಾಗಿ ಹಾಗೂ ತೆಂಕುತಿಟ್ಟಿನ ಖ್ಯಾತ ಮಹಿಳಾ ಚೆಂಡೆವಾದಕಿ ಕುಮಾರಿ ಅಪೂರ್ವಾ ಆರ್. ಸುರತ್ಕಲ್ ಆಗಮಿಸಲಿದ್ದಾರೆ. ಮದ್ದಳೆಯಲ್ಲಿ ಶ್ರೀಪತಿ ನಾಯಕ್ ಅಜೇರು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನದ ಕಂಪನ್ನು ತನ್ನ ಅಮೋಘ ಪ್ರತಿಭೆಯ ಮೂಲಕ ಅನಾವರಣಗೊಳಿಸಿ ಬಹು ಬೇಡಿಕೆಯ ಕಲಾವಿದೆ ವಿದ್ಯಾ ಕೊಳ್ಯೂರು, ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದ ಜಗದೀಶ್ ನಲ್ಕ, ಹಾಸ್ಯ ರಾಸಾಯನದ ಸರ್ವಶ್ರೇಷ್ಠ ಹಾಸ್ಯ ಕಲಾವಿದ ಸುಂದರ ಬಂಗಾಡಿ ಕಲಾವಿದರಾಗಿ ಭಾಗವಹಿಸಲಿದ್ದಾರೆ.
ಇದರೊಂದಿಗೆ ಸಂಘದ ಕಲಾವಿದರಾದ ನಾಟ್ಯಗುರು ಮದಂಗಲ್ಲು ಆನಂದ ಭಟ್, ವಾಸು ಕುಲಾಲ್ ವಿಟ್ಲ, ಪಾಂಗಾಳ ವಿಶ್ವನಾಥ ಶೆಟ್ಟಿ, ಮದಂಗಲ್ಲು ಅಶೋಕ್ ಭಟ್, ವಿಕೇಶ್ ರೈ ಶೇಣಿ, ಸುಕೇಶ್ ಶೆಟ್ಟಿ ಎಣ್ಣೆಹೊಳೆ, ವೆಂಕಟೇಶ ಗೌಡ ಪುತ್ತೂರು, ಚೇತನ್ ಶೆಟ್ಟಿ ಎಲಿಯಾಳ, ನಾಗೇಶ್ ಕುಲಾಲ್ ಕಡಂದಲೆ, ಸುದರ್ಶನ್, ಯಾದವ ಬಂಗೇರ, ಮಾ| ಪ್ರೀತೇಶ್ ಶೆಟ್ಟಿ, ಮಾ| ಪ್ರಾಣೇಶ್ ಶೆಟ್ಟಿ ಭಾಗವಹಿಸಲಿದ್ದಾರೆ.
ಪುಣೆಯ ಸರ್ವ ತುಳು-ಕನ್ನಡಿಗರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕಲಾಭಿಮಾನಿ ಬಂಧುಗಳೆಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಮದಂಗಲ್ಲು ಆನಂದ ಭಟ್, ಕೋಶಾಧಿಕಾರಿ ವಾಸು ಕುಲಾಲ್, ಉಪಾಧ್ಯಕ್ಷ ಮಟ್ಟಾರ್ ಪ್ರಕಾಶ್ ಹೆಗ್ಡೆ, ಪದಾಧಿಕಾರಿಗಳಾದ ಸುಭಾಷ್ ರೈ ಕಾಟುಕುಕ್ಕೆ, ಸುಕೇಶ್ ಶೆಟ್ಟಿ ಎಣ್ಣೆಹೊಳೆ, ವಿಕೇಶ್ ರೈ ಶೇಣಿ ಮತ್ತು ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.