Advertisement

ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನ ಮುಂಬಯಿ 6ನೇ ವಾರ್ಷಿಕೋತ್ಸವ

02:02 PM Jan 19, 2018 | Team Udayavani |

ಮುಂಬಯಿ: ಕರ್ನಾಟಕ ಕರಾವಳಿ ಗಂಡುಕಲೆ ಯಕ್ಷಗಾನ ಮುಂಬಯಿ ಮಹಾನಗರದಲ್ಲಿ ಹೊಸ ಹೊಸ ಯಕ್ಷ ತಂಡದವರಿಂದ ಪ್ರದರ್ಶನಗೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಯಕ್ಷಗಾನದ ತವರೂರಾದ ಕರಾವಳಿಯಲ್ಲಿ ಈಗ ವರ್ಷವಿಡೀ ಯಕ್ಷಗಾನ ನೋಡುವ ಭಾಗ್ಯ ಬಂದಿದೆ ಎಂದರೆ ಯಕ್ಷಗಾನ ಇಂದು ತನ್ನ ಪ್ರೇಕ್ಷಕ ವರ್ಗವನ್ನು ಹೆಚ್ಚಿಸಿಕೊಂಡಿದೆ ಎಂದು ಅರ್ಥ. ಈ ವಾಣಿಜ್ಯ ನಗರದಲ್ಲಿ ಯಕ್ಷಗಾನ ನಿತ್ಯ ನಿರಂತರವಾಗಿ ಬೆಳಗಬೇಕಾದರೆ ಕಲಾಪೋಷಕರು, ದಾನಿಗಳ ಪ್ರೋತ್ಸಾಹ ಅತ್ಯಗತ್ಯ. ಅಯ್ಯಪ್ಪ ಯಕ್ಷಕಲಾ  ಪ್ರತಿಷ್ಠಾನ ಮುಂಬಯಿ ಅನೇಕ ಯುವ ಪ್ರತಿಭೆಗಳ ಮೂಲಕ ಯಶಸ್ವಿ ಪ್ರದರ್ಶನ ನೀಡುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದು ಉದ್ಯಮಿ ನಿತಿನ್‌ ಶೆಟ್ಟಿ ಜಡ್ಡಾಡಿ ಅವರು ನುಡಿದರು.

Advertisement

ಇತ್ತೀಚೆಗೆ ಶ್ರೀ ಅಯ್ಯಪ್ಪ ಯಕ್ಷ ಕಲಾ ಪ್ರತಿಷ್ಠಾನ ಮುಂಬಯಿ ಇದರ 6ನೇ ವಾರ್ಷಿಕೋತ್ಸವ ನಿಮಿತ್ತ ಘಾಟ್ಕೊàಪರ್‌ ಅಸಲ್ಫಾದ ಗೀತಾಂಬಿಕಾ ಮಂದಿರದ ಸಭಾಂಗಣ ದಲ್ಲಿ ನಡೆದ ವೀರ ಅಭಿಮನ್ಯು ಯಕ್ಷಗಾನ ಪ್ರದರ್ಶನ ಮತ್ತು ಕಲಾಪೋಷಕ, ಉದ್ಯಮಿ ಸತೀಶ್‌ ಕೊಠಾರಿ ದಂಪತಿಗೆ ಸಮ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಮಾಳ ಶ್ರೀನಿವಾಸ ಭಟ್‌ ಅವರು, ಯಕ್ಷಗಾನಕ್ಕೆ  ಪೌರಾಣಿಕ ಪ್ರಸಂಗವೇ ಜೀವಾಳ. ಸಾಮಾಜಿಕ, ಕಾಲ್ಪನಿಕ ಪ್ರಸಂಗಗಳು ಪುರಾಣದ ಆದರ್ಶವನ್ನು ಹೊಂದಿರಬೇಕು. ಇಂದು ಕಲಾ ಪ್ರೇಕ್ಷಕರು ಪೌರಾಣಿಕ ಪ್ರಸಂಗಗಳನ್ನೇ ಬಯಸುತ್ತಿದ್ದಾರೆ.  ಪೌರಾಣಿಕ ಪ್ರಸಂಗಗಳ ಪ್ರದರ್ಶನಗಳಿಂದ ಯಕ್ಷಗಾನ ಶ್ರೀಮಂತಗೊಳ್ಳುತ್ತಿದೆ. ಬಡಗುತಿಟ್ಟಿನ ಯಕ್ಷಶೈಲಿಯ ಈ ಕಲಾತಂಡ ಇನ್ನೂ ಹೆಚ್ಚು  ಕಾರ್ಯಕ್ರಮಗಳನ್ನು ನೀಡುತ್ತಾ, ಒಂದು ಯಶಸ್ವಿ ತಂಡವಾಗಿ ಹೊರಹೊಮ್ಮಲಿ ಎಂದು ಶುಭಹಾರೈಸಿದರು.

ಮುಖ್ಯ ಅತಿಥಿಗಳಾದ ಸಾನ್ವಿ ಸ್ಟಾರ್‌ ಹಾಸ್ಪಿಟಾಲಿಟಿ ಇದರ ನಿರ್ದೇಶಕ ಸಂತೋಷ್‌ ಶೆಟ್ಟಿ ಅವರು ಮಾತನಾಡಿ, ಯುವ ಪ್ರತಿಭಾನ್ವಿತ ಪ್ರತಿಭೆಗಳು ಭಾಗವಹಿಸುವುದರಿಂದ ಯಕ್ಷಗಾನ ಕಲೆ ಬೆಳೆಯುವುದರಲ್ಲಿ ಸಂದೇಹವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಉದ್ಯಮಿ ಎಂ. ಡಿ. ಸತೀಶ್‌ ಕೊಠಾರಿ ದಂಪತಿಯನ್ನು ಗಣ್ಯರು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು. ವೇದಿಕೆಯಲ್ಲಿ ಕಲಾ ಪೋಷಕರುಗಳಾದ ಸುರೇಶ್‌ ಕೊಠಾರಿ, ರಾಜೀವ ಕೊಠಾರಿ, ರಾಜು ಮೆಂಡನ್‌ ವಂಡ್ಸೆ, ನಾಗರಾಜ ಪುತ್ರನ್‌, ರತ್ನಾಕರ ಶೆಟ್ಟಿ, ಜಯರಾಮ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಅಶೋಕ್‌ ಮರತೂರು ಮತ್ತು ಇತರ ಸದಸ್ಯರು ಅತಿಥಿಗಳನ್ನು ಗೌರವಿಸಿದರು.

Advertisement

ಪ್ರತಿಷ್ಠಾನದ ಕಾರ್ಯದರ್ಶಿ ಮಹೇಂದ್ರ ಶೆಟ್ಟಿ ನಂದೊÅಳ್ಳಿ ಸ್ವಾಗತಿಸಿದರು. ನಾಗರಾಜ ಅಪ್ಪೇಡಿ ಹೇರಂಜಾಲು ಕಾರ್ಯಕ್ರಮ ನಿರ್ವ ಹಿಸಿದರು. ಪ್ರತಿಷ್ಠಾನದ ಕಲಾವಿದ ರಿಂದ  ಯಕ್ಷಗಾನ ಪ್ರದರ್ಶನ ಗೊಂಡಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next