Advertisement

SRH ಸ್ಪಿನ್ನರ್‌ ವನಿಂದು ಹಸರಂಗ ಈ ಐಪಿಎಲ್‌ಗೆ ಅಲಭ್ಯ

10:27 PM Mar 31, 2024 | Team Udayavani |

ಕೊಲಂಬೊ: ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಸ್ಪಿನ್ನರ್‌, ಶ್ರೀಲಂಕಾದ ವನಿಂದು ಹಸರಂಗ ಈ ಐಪಿಎಲ್‌ಗೆ ಅಲಭ್ಯ ರಾಗಲಿದ್ದಾರೆ. ಹಿಮ್ಮಡಿ ಗಾಯಕ್ಕೆ ತುತ್ತಾಗಿರುವ ಅವರು, ಈ ಬಾರಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ವರದಿಗಳು ಹೇಳಿವೆ.

Advertisement

ಕಳೆದ ಬಾರಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿದ್ದ ವನಿಂದು ಹಸರಂಗ ಅವರನ್ನು, ಈ ಬಾರಿಯ ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ಬಿಡುಗಡೆ ಮಾಡಿತ್ತು. ಹೀಗಾಗಿ, ಹರಾಜಿನ ವೇಳೆ ಹಸರಂಗ, 1.5 ಕೋಟಿ ರೂ.ಗೆ ಎಸ್‌ಆರ್‌ಹೆಚ್‌ ಪಾಲಾಗಿದ್ದರು.

ಐಪಿಎಲ್‌ನ ಆರಂಭಿಕ ಕೆಲವು ಪಂದ್ಯಗಳಿಗೆ ಹಸರಂಗ ಅಲಭ್ಯರಾಗಲಿದ್ದಾರೆ ಎಂದು ಆರಂಭದಲ್ಲಿ ಹೇಳ ಲಾಗುತ್ತಿತ್ತು. ಟೆಸ್ಟ್‌ ನಿವೃತ್ತಿ ವಾಪಸ್‌ ಪಡೆದಿದ್ದ ಹಸರಂಗ ಅವರಿಗೆ ಐಸಿಸಿ, ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಯಿಂದ ನಿಷೇಧ ಹೇರಿ ದ್ದರಿಂದ ಐಪಿಎಲ್‌ನಲ್ಲಿ ಅವರು ಆಡುವ ನಿರೀಕ್ಷೆಗಳಿದ್ದವು. ಆದರೆ ಗಾಯಕ್ಕೀಡಾಗಿರುವ ಕಾರಣ, ಈ ಐಪಿಎಲ್‌ನಿಂದ ಹೊರಗಿದ್ದು, ಜೂನ್‌ನಿಂದ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್‌ನತ್ತ ಗಮನ ಹರಿಸುವುದಾಗಿ ಹಸರಂಗ, ಹೈದರಾಬಾದ್‌ ಫ್ರಾಂಚೈಸಿಗೆ ತಿಳಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ವೇಳೆ ಅಂಪಾಯರ್‌ ತೀರ್ಮಾನಕ್ಕೆ ಅಗೌರವ ತೋರಿದ್ದ ಕಾರಣ ಹಸರಂಗ ಅವರಿಗೆ ಐಸಿಸಿ, 2 ಅಂತಾರಾಷ್ಟ್ರೀಯ ಪಂದ್ಯಗಳ ನಿಷೇಧ ಹೇರಿದೆ. ಹಸರಂಗ, 26 ಐಪಿಎಲ್‌ ಪಂದ್ಯಗಳಲ್ಲಿ 35 ವಿಕೆಟ್‌ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next