Advertisement
“ನಾನೀಗ ಸಂಪೂರ್ಣ ಸ್ವತಂತ್ರ. ನನ್ನ ಮೇಲೀಗ ಯಾವುದೇ ಆರೋಪಗಳಿಲ್ಲ. ನಾನು ಅತಿಯಾಗಿ ಪ್ರೀತಿಸುವ ಕ್ರೀಡೆಯನ್ನು ಪ್ರತಿನಿಧಿಸಬಹುದಾಗಿದೆ. ಈಗಲೇ ಅಭ್ಯಾಸ ಆರಂಭಿಸಿ ಪ್ರತೀ ಎಸೆತದಲ್ಲೂ ಅತ್ಯುತ್ತಮ ನಿರ್ವಹಣೆ ನೀಡುವುದು ನನ್ನ ಗುರಿ. ಇನ್ನೂ ಕೆಲವು ವರ್ಷಗಳ ಕಾಲ ಆಡುವ ಸಾಮರ್ಥ್ಯ ನನ್ನಲ್ಲಿದೆ. ಯಾವ ತಂಡವನ್ನು ಪ್ರತಿನಿಧಿಸಿದರೂ ಶ್ರೇಷ್ಠ ಬೌಲಿಂಗ್ ನಡೆಸುವುದು ನನ್ನ ಗುರಿ’ ಎಂಬುದಾಗಿ 37 ವರ್ಷದ ಶ್ರೀಶಾಂತ್ ಹೇಳಿದ್ದಾರೆ.
Related Articles
2013ರ ಐಪಿಎಲ್ ಪಂದ್ಯಾವಳಿಯ ವೇಳೆ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಶ್ರೀಶಾಂತ್ ಅವರಿಗೆ ಬಿಸಿಸಿಐ ಆಜೀವ ನಿಷೇಧ ಹೇರಿತ್ತು. ಆದರೆ 6 ವರ್ಷಗಳ ಶಿಕ್ಷೆ ಪೂರ್ತಿಗೊಂಡ ಬಳಿಕ, ಕಳೆದ ವರ್ಷ ಬಿಸಿಸಿಐ ಒಂಬುಡ್ಸ್‌ಮನ್ ಡಿ.ಕೆ. ಜೈನ್ ಈ ಶಿಕ್ಷೆಯನ್ನು 7 ವರ್ಷಗಳಿಗೆ ಇಳಿಸಿದ್ದರು.
Advertisement
2013ರ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುತ್ತಿದ್ದಾಗ ಶ್ರೀಶಾಂತ್ ಸ್ಪಾಟ್ ಫಿಕ್ಸಿಂಗ್ ವ್ಯೂಹದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಇವರೊಂದಿಗೆ ಸಹ ಆಟಗಾರರಾದ ಅಜಿತ್ ಚಂಡೀಲ ಮತ್ತು ಅಂಕಿತ್ ಚವಾಣ್ ಅವರನ್ನೂ ನಿಷೇಧಿಸಲಾಗಿತ್ತು.
ಭಾರತ ಪರ 27 ಟೆಸ್ಟ್, 53 ಏಕದಿನ ಪಂದ್ಯಗಳನ್ನಾಡಿರುವ ಶ್ರೀಶಾಂತ್ ಕ್ರಮವಾಗಿ 87 ಹಾಗೂ 75 ವಿಕೆಟ್ ಉರುಳಿಸಿದ್ದಾರೆ. 10 ಟಿ20 ಪಂದ್ಯಗಳಿಂದ 7 ವಿಕೆಟ್ ಕೆಡವಿದ್ದಾರೆ.