Advertisement

ಮತ್ತೆ ಕ್ರಿಕೆಟಿಗೆ ಮರಳುವೆ: ಶ್ರೀಶಾಂತ್‌

10:40 PM Apr 18, 2020 | Sriram |

ಕೊಚ್ಚಿ: ಇದೇ ವರ್ಷ ಸ್ಪರ್ಧಾತ್ಮಕ ಕ್ರಿಕೆಟಿಗೆ ಮತ್ತೆ ಮರಳುವೆ ಎಂದು ವೇಗಿ ಶ್ರೀಶಾಂತ್‌ ಹೇಳಿದ್ದಾರೆ. ಹೆಲೋ ಆ್ಯಪ್‌ ಎನ್ನುವ ಸಾಮಾಜಿಕ ಜಾಲತಾಣದಲ್ಲಿ ಲೈವ್‌ ವೀಡಿಯೊ ಮೂಲಕ ಈ ವಿಚಾರವನ್ನು ಶ್ರೀಶಾಂತ್‌ ಘೋಷಿಸಿದ್ದು, ನಾಯಕ ವಿರಾಟ್‌ ಕೊಹ್ಲಿ ಮತ್ತು ಸುರೇಶ್‌ ರೈನಾ ಅವರಂತೆ ತಾವೂ ಕೂಡ ಫಿಟ್‌ ಆಗಿರಬೇಕು. ಮುಂದಿನ ದಿನಗಳಲ್ಲಿ ಮತ್ತಷ್ಟು ಫಿಟ್‌ನೆಸ್‌ ಕಾಯ್ದುಕೊಂಡು ವೃತಿಪರ ಕ್ರಿಕೆಟಿಗೆ ಮರಳುವೆ ಎಂದರು.

Advertisement

ಮಾತ್ರವಲ್ಲದೇ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪರ ಆಡುವ ಬಯಕೆಯಿದೆ. ವಿರಾಟ್‌ ಕೊಹ್ಲಿ ಸಾರಥ್ಯದ ಟೀಮ್‌ ಇಂಡಿಯಾದಲ್ಲಿ ಆಡೋದು ನನ್ನ ಬಹುದೊಡ್ಡ ಕನಸು. ಈ ಬಗ್ಗೆ ಸೌರವ್‌ ಗಂಗೂಲಿ ಅವರಲ್ಲಿ ಸಲಹೆ ಪಡೆಯುತ್ತೇನೆ ಎಂದಿದ್ದಾರೆ.

ಕ್ರಿಕೆಟ್‌ಗಿಂತ ದೇಶ ಮೊದಲು
ಕೋವಿಡ್‌-19 ವೈರಸ್‌ ವಿರುದ್ಧದ ಹೋರಾಟಕ್ಕೆ ನೆರವಾಗಲು ಭಾರತ-ಪಾಕಿಸ್ಥಾನ ನಡುವೆ ದುಬಾೖಯಲ್ಲಿ 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿ ಆಯೋಜಿಸಬೇಕು ಎಂಬ ಶೋಯಿಬ್‌ ಅಖ್ತರ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಶ್ರೀಶಾಂತ್‌, “ನಮಗೆ ಕ್ರಿಕೆಟ್‌ಗಿಂತ ದೇಶ ಮೊದಲು. ರಾಜಕೀಯ ಸ್ಥಿತಿಗತಿಗಳು ಮೊದಲು ಸುಧಾರಿಸಲಿ, ಆಮೇಲೆ ಕ್ರಿಕೆಟ್‌ ಬಗ್ಗೆ ನೋಡೋಣ. ಸದ್ಯಕ್ಕೆ ಭಾರತ-ಪಾಕ್‌ ಸರಣಿ ಅಸಾಧ್ಯ. ನಮಗೆ ದೇಶ ಮತ್ತು ದೇಶದವರ ಭಾವನೆಗಳೇ ಮುಖ್ಯ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next