Advertisement

ಶ್ರೀಘ್ರ ಇರುವವನೇ ಮನೆಯೊಡೆಯ ಯೋಜನೆ:ಶಾಸಕಿ  ಶಕುಂತಳಾ ಟಿ. ಶೆಟ್ಟಿ  

03:45 AM Jul 06, 2017 | |

ಪುತ್ತೂರು: ಬೇರೆಯವರಿಗೆ ಸೇರಿದ ಭೂಮಿಯಲ್ಲಿ ಮನೆ ಕಟ್ಟಿ ವಾಸ ಮಾಡುತ್ತಿರು ವವರ ಅಡಿ ಸ್ಥಳಕ್ಕೆ ಹಕ್ಕುಪತ್ರ ಒದಗಿಸುವ ನಿಟ್ಟಿನಲ್ಲಿ ಇರು ವವನೇ ಮನೆ ಯೊ ಡೆಯ ಯೋಜನೆ ಶೀಘ್ರದಲ್ಲೇ ಜಾರಿಯಾಗಲಿದೆ ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಹೇಳಿದರು.

Advertisement

ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸಭಾಭವನದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಜನಸಂಪರ್ಕ ಸಭೆಯಲ್ಲಿ 876 ಮಂದಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.ಉಳುವವನೆ ಹೊಲದೊಡೆಯ, 94ಸಿ, 94ಸಿಸಿ ಯೋಜನೆಯಂತೆ ಇರುವವನೆ ಮನೆಯೊಡೆಯ ಜಾರಿಗೆ ಯೋಜನೆ ರೂಪಿಸಲಾಗಿದೆ. ಇದರಿಂದ ಸಾವಿರಾರು ಜನರಿಗೆ ಪ್ರಯೋಜನವಾಗಲಿದೆ. ಬೇರೆ ಯವರಿಗೆ ಸೇರಿದ ಸ್ಥಳದಲ್ಲಿ ಮನೆ ಕಟ್ಟಿ ವಾಸ ಮಾಡುತ್ತಿರುವ ಕುಟುಂಬಕ್ಕೆ ಆ ಸ್ಥಳವನ್ನು ಹಕ್ಕು ಪತ್ರ ಮೂಲಕ ಒದಗಿಸುವ ಯೋಜನೆ ಇದಾಗಿದೆ. 

ಉದಾಹರಣೆಗೆ ಎಂಬತ್ತು ವರ್ಷಗಳಿಂದ ಮನೆ ಇದ್ದರೂ ಜಾಗ ಇನ್ಯಾರದೋ ಆದ ಕಾರಣ, ಹಕ್ಕುಪತ್ರ ಇಲ್ಲದೆ ಸರಕಾರದ ಸವಲತ್ತು ಗಳಿಂದ ವಂಚಿತಗೊಂಡಿರುವ ಬ್ರಹ್ಮನಗರ ಕಾಲನಿಯಲ್ಲಿರುವ 50ಕ್ಕೂ ಅಧಿಕ ಕುಟುಂಬಗಳಿಗೆ ಈ ಹೊಸ ಯೋಜನೆ ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು.

5,459 ಅರ್ಜಿ ವಿತರಣೆ
94ಸಿಗೆ ಸಂಬಂಧಿಸಿ ತಾಲೂಕಿನಲ್ಲಿ 9,643 ಅರ್ಜಿ ಬಂದಿದ್ದು, ಅದರಲ್ಲಿ 5,459 ಫಲಾನುಭವಿಗೆ ಹಕ್ಕುಪತ್ರ ವಿತರಿಸಲಾಗಿದೆ. ಜನಸಂಪರ್ಕ ಸಭೆ ಯಲ್ಲಿ 876 ಮಂದಿಗೆ ಹಕ್ಕುಪತ್ರ ವಿತರಿ ಸಲಾಗಿದೆ. ಬಡಗನ್ನೂರು ಹಾಗೂ ಪಾಣಾಜೆ ವ್ಯಾಪ್ತಿಯ ಫ‌ಲಾನುಭವಿಗಳಿಗೆ ಪಂಚಾಯತ್‌ ಮಟ್ಟದಲ್ಲೇ ಹಕ್ಕುಪತ್ರ ವಿತರಿಸಲಾಗುತ್ತದೆ. ಅರ್ಜಿ ಸಲ್ಲಿ ಸಲು ಬಾಕಿ ಇರುವವರಿಗೆ ಇನ್ನೆರಡು ತಿಂಗಳು ಅವಕಾಶ ಇದ್ದು, ಪ್ರಯೋಜನ ಪಡೆದು ಕೊಳ್ಳು ವಂತೆ ಶಾಸಕಿ ಮನವಿ ಮಾಡಿದರು.

ಸ್ವತಃ ಬಡ ಕುಟುಂಬದಿಂದ ಬಂದಿ ರುವ ಸಿ.ಎಂ. ಸಿದ್ದರಾಮಯ್ಯ ರಾಜ್ಯ ದಲ್ಲಿ  ಪ್ರತಿಯೊಬ್ಬರು ಹಕ್ಕುಪತ್ರ ಹೊಂದಿರ ಬೇಕು ಎಂಬ ಕಾಳಜಿ ಹೊಂದಿದ್ದಾರೆ. ಹಾಗಾಗಿ ಅಧಿಕಾರಕ್ಕೆ ಬಂದ ತತ್‌ಕ್ಷಣವೇ ಅವರು 94ಸಿ ಹಾಗೂ 9ಸಿಸಿ ಯೋಜನೆ ಅನುಷ್ಠಾನಿಸಿದ್ದರು ಎಂದು ಅವರು ಹೇಳಿದರು.

Advertisement

ಗ್ರಾ.ಪಂ. ವ್ಯಾಪ್ತಿಯಲ್ಲಿ ವಿತರಣೆ
94ಸಿ, ಅಕ್ರಮ-ಸಕ್ರಮ ಯೋಜ ನೆಯ ಹಕ್ಕುಪತ್ರಗಳನ್ನು 15 ದಿನಗಳ ಅನಂತರ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿತರಿ  ಸಲಾಗುವುದು. ಪ್ರಮುಖ ಅಧಿ ಕಾರಿಗಳು, ಆಯಾ ವಾರ್ಡ್‌ ವ್ಯಾಪ್ತಿಯ ಜನಪ್ರತಿನಿಧಿಗಳು ಹಾಗೂ ಶಾಸಕರ ಉಪಸ್ಥಿತಿಯಲ್ಲಿ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ಇದರಿಂದ ಜನರ ತಾ| ಕೇಂದ್ರಕ್ಕೆ ಅಲೆದಾಟ ತಪ್ಪಲಿದೆ ಎಂದು ನುಡಿದರು.

ಪುತ್ತೂರು ಉಪ ವಿಭಾಗದ ಸಹಾ ಯಕ ಆಯುಕ್ತ ರಘುನಂದನ್‌ ಮೂರ್ತಿ ಮಾತನಾಡಿ, ತಾ|ನ ಗ್ರಾಮ ಗಳನ್ನು 2 ಹಂತದಲ್ಲಿ ವಿಭಜಿಸಿ ತಿಂಗಳೊಳಗೆ ಹಕ್ಕುಪತ್ರ ವಿತರಣೆ ಪೂರ್ಣಗೊಳಿಸಬೇಕು ಎಂದು ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಿದರು. 

ಮೊದಲ ಹಂತದಲ್ಲಿ 18 ಹಾಗೂ 2ನೇ ಹಂತದಲ್ಲಿ 26 ಗ್ರಾಮ ಗಳನ್ನು ಆಯ್ದುಕೊಂಡು, ಹಕ್ಕುಪತ್ರ ವಿತರಿಸಲಾಗುವುದು ಎಂದು ಅವರು ವಿವರಿಸಿದರು.

ಜು. 17: ಖಾತೆ ಬಗ್ಗೆ  ಪ್ರಸ್ತಾವನೆ
ನಗರದಲ್ಲಿ ಖಾತೆ ನೀಡುವುದರಿಂದ ಉದ್ಭವಿಸಿರುವ ಸಮಸ್ಯೆಗಳ ಬಗ್ಗೆ ಜನಸಂಪರ್ಕ ಸಭೆಯಲ್ಲಿ ವಿಷಯ ಪ್ರಸ್ತಾವಿಸಲಾಯಿತು. 

ಪೌರಾಯುಕ್ತೆ ರೂಪಾ ಶೆಟ್ಟಿ ಅವರು ಖಾತೆ ನೀಡಲು ಇರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಆದರೆ ಪುತ್ತೂರಿನಲ್ಲಿ ಮಾತ್ರ ಇಂತ‌ಹ ಸಮಸ್ಯೆ ಇದೆ. ಇದನ್ನು ಶಾಸಕರ ಉಪಸ್ಥಿತಿಯಲ್ಲಿ ಬಗೆಹರಿಸು ವಂತೆ ಇಬ್ರಾಹಿಂ ಗೋಳಿಕಟ್ಟೆ ಮೊದಲಾದವರು ವಿನಂತಿಸಿದರು. 

ಇದಕ್ಕೆ ಉತ್ತರಿಸಿದ ಶಾಸಕಿ, ಖಾತೆ ಸ್ಥಗಿತದಿಂದ ಉಂಟಾದ ಗಂಭೀರ ಸಮಸ್ಯೆ ಗಮನಕ್ಕೆ ಬಂದಿದೆ. ಜು. 17ರಂದು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಜತೆ ಮಾತನಾಡುತ್ತೇನೆ. ಮುಖ್ಯಮಂತ್ರಿ, ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ನಿಮ್ಮ ಬೇಡಿಕೆಗೆ ಸ್ಪಂದನೆ ನೀಡುವುದಾಗಿ ಭರವಸೆ ನೀಡಿದರು.

ತಾ.ಪಂ. ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ದಿವ್ಯಾ ಪುರುಷೋತ್ತಮ, ಸುಜಾತ ಕೃಷ್ಣ, ಪುಡಾ ಅಧ್ಯಕ್ಷ ಕೌಶಲ್‌ ಪ್ರಸಾದ್‌ ಶೆಟ್ಟಿ, ತಹಶೀಲ್ದಾರ್‌ ಅನಂತಶಂಕರ, ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್‌, ಪೌರಾಯುಕ್ತೆ ರೂಪಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಉಪ ತಹಶೀಲ್ದಾರ್‌ ಶ್ರೀಧರ್‌ ಸ್ವಾಗತಿಸಿ, ನಿರೂಪಿಸಿದರು.

ನಗರಸಭೆ ಆಡಳಿತ ವಿರುದ್ಧ
ಶಾಸಕಿ ಅಸಮಾಧಾನ?

ಖಾತೆ ಕುರಿತಂತೆ ಚರ್ಚೆ ತೀವ್ರವಾದ ಸಂದರ್ಭ ಪ್ರತಿಕ್ರಿಯಿಸಿದ ಶಾಸಕಿ, ಖಾತೆ ನೀಡುವುದನ್ನು ಸ್ಥಗಿತಗೊಳಿಸಿ ಹೊರಡಿಸಿದ ಸುತ್ತೋಲೆ ಕ್ಯಾಬಿನೆಟ್‌ ತೀರ್ಮಾನ ಅಲ್ಲ. ಅದು ಇಲಾಖಾಧಿಕಾರಿಗಳು ಹೊರಡಿಸಿರುವುದು. ಹಾಗಾಗಿ ಅಧಿಕಾರಿಗಳ ಗಮನಕ್ಕೆ ತಂದು ಅಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದರು. ಆದರೆ ಇಲ್ಲಿನವರನ್ನು  ದೇವರೇ ಸರಿಪಡಿಸಬೇಕು ಎಂದು ನಗರಸಭೆ ಆಡಳಿತ ವಿರುದ್ಧ ಶಾಸಕಿ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು ಕಂಡು ಬಂತು.

ತುಂಬಿ ತುಳುಕಿದ ಸಭಾಂಗಣ
ಇದೇ ಮೊದಲ ಬಾರಿಗೆ ಎನ್ನುವಂತೆ ಜನಸಂಪರ್ಕ ಸಭೆಯಲ್ಲಿ ಸಭಾಂಗಣ ಪೂರ್ಣ ಪ್ರಮಾಣದಲ್ಲಿ ಭರ್ತಿ ಆಗಿತ್ತು. ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ಎಲ್ಲ ಗ್ರಾಮಗಳಿಂದ ಹಕ್ಕುಪತ್ರಕ್ಕಾಗಿ ಜನರು ಆಗಮಿಸಿದ್ದು ಇದಕ್ಕೆ ಕಾರಣವಾಗಿತ್ತು. ಶಾಸಕಿ ನಿರ್ಗಮನದ ಅನಂತರವೂ ಸಭೆಯಲ್ಲಿ ಜನರು ಹಾಜರಿದ್ದದ್ದು ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next