Advertisement
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಡಿ ಇಟ್ಟುಕೊಂಡು ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿಯನ್ನು ಅಂಜಿಸಿ ತಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಜೊತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ ಯತ್ನಾಳ ಮಾಡಿರುವ ಆರೋಪ ನಿರಧಾರ. ಹೊಂದಾಣಿಕೆ ರಾಜಕಾರಣ ಎಂಬುದು ಕಾಂಗ್ರೆಸ್ ನಿಂಘಟಿನಲ್ಲಿಲ್ಲ ಎಂದು ತಿರುಗೇಟು ನೀಡಿದರು
Related Articles
Advertisement
ಮೋದಿ ಸರ್ಕಾರ ಎರಡು ಅವಧಿಗೆ ಅಧಿಕಾರ ನಡೆಸಿ ಈ ಆರು ವರ್ಷಗಳಲ್ಲಿ ಸರ್ಕಾರಿ ಸ್ವಾಮ್ಯದಲ್ಲಿದ್ದ ಬಿಎಸ್‍ಎನ್‍ಎಲ್, ರೈಲ್ವೇ, ವಿಮಾನ ಸೇರಿದಂತೆ ಸರ್ಕಾರಿ ಉದ್ದಿಮೆಗಳನ್ನು ಅಂಬಾನಿ, ಅದಾನಿ ಅವರಂಥ ದೊಡ್ಡ ಉದ್ಯಮಿ ಶ್ರೀಮಂತರಿಗೆ ಖಾಸಗಿಕರಣ ಮಾಡಿದ್ದಾರೆ. ಇದೀಗ ರೈತರ ಹೊಲದ ಮೇಲೆ ಅವರ ಕಣ್ಣು ಬಿದ್ದಿದೆ ಎಂದು ವಾಗ್ದಾಳಿ ನಡೆಸಿದರು.
ಜಿ.ಪಂ. ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಮಾಜಿ ಶಾಸಕರಾದ ವಿಠ್ಠಲ ಕಟಕಧೋಂಡ, ಶರಣಪ್ಪ ಸುಣಗಾರ, ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ, ಹಾಸಿಂಪೀರ ವಾಲೀಕಾರ ಇತರರು ಉಪಸ್ಥಿತರಿದ್ದರು.
20 ರಂದು ಕಾಂಗ್ರೆಸ್‍ನಿಂದ ರಾಜಭವನ ಮುತ್ತಿಗೆ-ಎಸ್.ಆರ್.ಪಾಟೀಲ
ವಿಜಯಪುರ: ಕೃಷಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ಕಾನೂನುಗಳು ರೈತರ ಪಾಲಿಗೆ ಕರಾಳ ಶಾಸನಗಳು. ಈ ಕಾಯ್ದೆಗಳ ಜಾರಿಯನ್ನು ವಿರೋಧಿಸಿ ದೆಹಲಿಯಲ್ಲಿ ರೈತರ ಹೋರಾಟ ಬೆಂಬಲಿಸಿ ಜ.20 ರಂದು ಕೆಪಿಸಿಸಿ ಬೆಂಗಳೂರಿನಲ್ಲಿ ರೈತ ಅಧಿಕಾರ ದಿನಾಚರಣೆ ಮೂಲಕ ಹೋರಾಟ ಹಮ್ಮಿಕೊಂಡಿದೆ. ಸ್ವಾತಂತ್ರ್ಯ ಉದ್ಯಾನವನದಿಂದ ಪಾದಯಾತ್ರೆ ಮೂಲಕ ರಾಜಭವನಕ್ಕೆ ಮುತ್ತಿಗೆ ಹಾಕುವುದಾಗಿ ಮೇಲ್ಮನೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ ತಿಳಿಸಿದರು.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರಾಜ ಅರಸು ಕಾಲದಲ್ಲಿ ಉಳುವವನೇ ಒಡೆಯ ಎಂಬ ಕಾಯ್ದೆಯ ಮೂಲಕ ರೈತರ ಬೆನ್ನಿಗೆ ನಿಂತರೆ, ಮೋದಿ ಹಾಗೂ ಬಿಜೆಪಿ ಸರ್ಕಾರಗಳು ಕೃಷಿಕರಲ್ಲದ ವ್ಯಕ್ತಿ ಕೂಡ ಭೂಮಿ ಖರೀದಿಸಲು ಅವಕಾಶ ನೀಡಿ ಕೃಷಿ ಕ್ಷೇತ್ರವನ್ನು ಶ್ರೀಮಂತರಿಗೆ ಮಾರಲು ಹೊರಟಿದ್ದಾರೆ. ಸರ್ಕಾರಿ ಸ್ವಾಮ್ಯದ ರೈಲ್ವೇ, ವಿಮಾನ ವ್ಯವಸ್ಥೆಯನ್ನು ಖಾಸಗೀಯರಿಗೆ ಮಾರಿರುವ ಮೋದಿ ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಗೆ ಇದೀಗ ರೈತರ ಜಮೀನಿನ ಮೇಲೆ ಕರ್ಣಣು ಬಿದ್ದಿದೆ.
ಕಾರ್ಪೋರೇಟ್ ಪರ ಕಾನೂನು ಜಾರಿಗೊಳಿಸುವ ಮೂಲಕ ರೈತ ವಿರೋಧಿ ಹಾಗೂ ಕರಾಳ ಕಾನೂನು ತಂದಿರುವ ಪ್ರಧಾನಿ ಮೋದಿ ಕಳೆದ ಆರು ವರ್ಷಗಳ ತಮ್ಮ ಎರಡು ಅವಧಿಯ ಸರ್ಕಾರದಲ್ಲಿ ಇಂಥದ್ದನ್ನೇ ಮಾಡಿದ್ದಾರೆ. ನೋಟ್ ಅಮಾನ್ಯೀಕರಣ ಮಾಡಿದರು, ಅವೈಜ್ಞಾನಿ ಜಿಎಸ್‍ಟಿ ಜಾರಿಗೆ ತಂದರು ಎಂದು ವಾಗ್ದಾಳಿ ನಡೆಸಿದರು.