Advertisement

ಮುಂದಿನ ವಾರದಿಂದ ಮಾರುಕಟ್ಟೆಯಲ್ಲಿ ಸ್ಫುಟ್ನಿಕ್ ಲಸಿಕೆ ಲಭ್ಯ: ಡಾ.ವಿಕೆ ಪೌಲ್

05:41 PM May 13, 2021 | Team Udayavani |

ನವದೆಹಲಿ: ರಷ್ಯಾದ ಕೋವಿಡ್ ಲಸಿಕೆ ಸ್ಫುಟ್ನಿಕ್ v ಭಾರತಕ್ಕೆ ತಲುಪಿದ್ದು, ಮುಂದಿನ ವಾರದಿಂದ ಈ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್ ಗುರುವಾರ(ಮೇ 13) ತಿಳಿಸಿದ್ದಾರೆ. ಈಗಾಗಲೇ ಭಾರತಕ್ಕೆ ಮೊದಲ ಹಂತದ ಸ್ಫುಟ್ನಿಕ್ ಲಸಿಕೆ ಬಂದಿದ್ದು, ಇನ್ನಷ್ಟು ಲಸಿಕೆ ರಷ್ಯಾದಿಂದ ಬರಲಿದೆ ಎಂದು ವರದಿ ಹೇಳಿದೆ.

Advertisement

ಇದನ್ನೂ ಓದಿ:ಪಾಸಿಟಿವ್‌ ಬಂದ 1 ಗಂಟೆಯೊಳಗೆ ಹೋಂ ಐಸೊಲೇಷನ್‌ ಆದವರಿಗೆ ಮೆಡಿಕಲ್‌ ಕಿಟ್‌ : ಅಶ್ವತ್ಥನಾರಾಯಣ

ಜುಲೈನಿಂದ ಭಾರತದಲ್ಲಿಯೇ ಸ್ಫುಟ್ನಿಕ್ v ಲಸಿಕೆ ಉತ್ಪಾದನೆಯಾಗಲಿದೆ. ಭಾರತ 15.6 ಕೋಟಿ ಡೋಸ್ ಗಳಷ್ಟು  ಸ್ಫುಟ್ನಿಕ್ ಲಸಿಕೆ ಉತ್ಪಾದಿಸುವ ಗುರಿ ಹೊಂದಿದೆ. ರಷ್ಯಾದ ಸ್ಫುಟ್ನಿಕ್ ಲಸಿಕೆಗೆ ಡಾ.ರೆಡ್ಡೀಸ್ ಲ್ಯಾಬೋರೇಟರಿ ಭಾರತದ ಪಾಲುದಾರ ಸಂಸ್ಥೆಯಾಗಿದೆ.

ನಾವು ಮುಂದಿನ ಐದು ತಿಂಗಳಲ್ಲಿ 2 ಬಿಲಿಯನ್ ಡೋಸ್ ಸ್ಫುಟ್ನಿಕ್ ಲಸಿಕೆಯನ್ನು ಭಾರತದಲ್ಲಿ ತಯಾರಿಸಲಿದ್ದೇವೆ ಎಂದು ಡಾ.ವಿ.ಕೆ.ಪೌಲ್ ವಿಶ್ವಾಸವ್ಯಕ್ತಪಡಿಸಿದ್ದಾರೆ. ರಷ್ಯಾದ ಸ್ಫುಟ್ನಿಕ್ v ಲಸಿಕೆ ತುರ್ತು ಬಳಕೆಗೆ ಈಗಾಗಲೇ ಔಷಧ ನಿಯಂತ್ರಕ ಮಂಡಳಿ ಅನುಮತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next