Advertisement

ಸೋಂಕು ನಿವಾರಕ ಔಷಧ ಸಿಂಪಡಿಸುವುದರಿಂದ ವೈರಸ್ ನಾಶವಾಗುವುದಿಲ್ಲ: WHO

08:41 AM May 18, 2020 | Mithun PG |

ಜಿನಿವಾ: ಹಲವು ದೇಶಗಳಲ್ಲಿ ಕೋವಿಡ್ -19 ಹೊಡೆದೋಡಿಸಲು ಬೀದಿ ಬೀದಿಗಳಲ್ಲಿ, ಸೋಂಕುನಿವಾರಕ ಔಷಧ ಸಿಂಪಡಿಸಲಾಗುತ್ತಿದ್ದು, ಇದರಿಂದ ವೈರಸ್ ನಾಶವಾಗುವುದಿಲ್ಲ ಬದಲಾಗಿ ಆರೋಗ್ಯದ ಮೇಲೆ ಈ ಔಷಧಗಳು  ಗಂಭೀರ ಪರಿಣಾಮ ಬೀರುತ್ತದೆ ಎಂದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಸಿದೆ.

Advertisement

ವೈರಸ್ ಪ್ರಭಾವವನ್ನು ಕಡಿಮೆಮಾಡಲು ರಸ್ತೆಯ ಬದಿಗಳಲ್ಲಿ, ಮಾರುಕಟ್ಟೆಗಳಲ್ಲಿ ಈ ರೀತಿ ಔಷಧ ಸಿಂಪಡಿಸುವುದರಿಂದ (ಫ್ಯುಮಿಗೇಷನ್)  ಯಾವುದೇ ಪ್ರಯೋಜನವಿಲ್ಲ. ಯಾಕೆಂದರೇ ಈ ರೀತಿಯ ಸೋಂಕು ನಿವಾರಕಗಳು ಸ್ವಚ್ಚತೆಯಿಲ್ಲದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು WHO ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮಾತ್ರವಲ್ಲದೆ ಈ ರಾಸಾಯನಿಕ ಔಷಧಗಳು ಎಲ್ಲಾ ಪ್ರದೇಶಗಳಲ್ಲೂ ಒಂದೇ ರೀತಿಯ ಪ್ರಭಾವ ಬೀರುತ್ತದೆಯೆಂಬುದನ್ನು ಊಹಿಸಲು ಸಾಧ್ಯವಿಲ್ಲ. ಯಾವುದೇ ದಾಖಲೆಗಳಲ್ಲೂ ಔಷಧ ಸಿಂಪಡಿಸುವುದರಿಂದ ವೈರಸ್ ಸಾಯುತ್ತದೆ ಎಂಬ ಮಾತಿಗೆ ನಿದರ್ಶನವಿಲ್ಲ. ಇದರಿಂದ ಮಾನವನಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ  ಸಮಸ್ಯೆಯಾಗುವುದೇ ಹೊರತು ವೈರಸ್ ತನ್ನ ಪ್ರಭಾವ ಬೀರುವುದು ಕಡಿಮೆಯಾಗುವುದದಿಲ್ಲ  ಎಂದು ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next