Advertisement

ರೈಲು ನಿಲ್ದಾಣದಲ್ಲಿ ಸೋಂಕು ನಿರೋಧಕ ಔಷಧ ಸಿಂಪಡಿಸಿ

08:51 PM Mar 18, 2020 | Lakshmi GovindaRaj |

ಮೈಸೂರು: ಕೊರೊನಾ ವೈರಸ್‌ ಸೋಂಕು ಹರಡದಂತೆ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೊಳ್ಳಲಾಗಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣಾ ಗಾರ್ಗ್‌ ಅವರು ತಮ್ಮ ಸಹೋದ್ಯೋಗಿ ಅಧಿಕಾರಿಗಳೊಂದಿಗೆ ಬುಧವಾರ ಪರಿಶೀಲಿಸಿದರು.

Advertisement

ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿ ಅತಿ ಹೆಚ್ಚು ಬಳಸುವ, ಮುಟ್ಟುವ ಸ್ಥಳಗಳನ್ನು ಆಗಿಂದಾಗ್ಗೆ ಸೋಂಕು ನಿರೋಧಕ ಔಷಧಗಳಿಂದ ಸಿಂಪಡಿಸಬೇಕೆಂದು ಸೂಚಿಸಿದರು. ಅಲ್ಲದೇ ರೈಲು ನಿಲ್ದಾಣದ ಪ್ರವೇಶ ದ್ವಾರ ಮತ್ತು ಹೊರಗೆ ಹೋಗುವ ದ್ವಾರಗಳು,

ಕಾಲು ಮೇಲ್ಸೇತುವೆ ( ಫ‌ುಟ್‌ ಓವರ್‌ ಬ್ರಿಡ್ಜಸ್‌), ಎಸ್ಕಲೇಟರ್‌ಗಳು, ಲಿಫ್ಟ್ಗಳು, ಟಿಕೆಟ್‌ ಬುಕ್‌ ಮಾಡುವ ಹಾಗೂ ರಿಸವೇರ್ಶನ್‌ ಕಚೇರಿಗಳಲ್ಲಿನ ಸೂಕ್ತ ಸ್ಥಳಗಳಲ್ಲಿ ರೈಲು ನಿಲ್ದಾಣದಲ್ಲಿರುವ ಕೋವಿದ್‌-19 ಸಹಾಯ ಕೇಂದ್ರ ಇರುವ ಬಗ್ಗೆ ಮಾರ್ಗದರ್ಶನ ಫ‌ಲಕಗಳನ್ನು ಅಳವಡಿಸಬೇಕೆಂದು ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಸಲಹೆ ನೀಡಿದರು.

ಜತೆಗೆ ಪ್ರಯಾಣಿಕರನ್ನು ಕರೆದೊಯ್ಯುವ ಎಲ್ಲಾ ಬೋಗಿಗಳ ಹೊರ ಮತ್ತು ಒಳಾವರಣ, ಗಾಜಿನ ಕಿಟಕಿಗಳು, ಬಾಗಿಲುಗಳನ್ನು ಸೋಂಕು ನಿರೋಧಕ ಔಷಧ ಬಳಸಿ ಆಗಿಂದಾಗ್ಗೆ ಸ್ವತ್ಛ‚ಗೊಳಿಸಬೇಕು ಎಂದು ಮೆಕಾನಿಕಲ್‌ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ರೈಲು ಪ್ರಯಾಣಿಕರಲ್ಲಿ ಕೊರೊನಾ ವೈರಸ್‌ ಸೋಂಕಿನ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಕುರಿತು ಸ್ಥಳೀಯ ಭಾಷೆಗಳಲ್ಲಿ ಕರಪತ್ರಗಳ ಮೂಲಕ ತಿಳಿಸಿಕೊಡಬೇಕು.

ಸಾರ್ವಜನಿಕ ಧ್ವನಿ ವರ್ಧಕಗಳ ಮೂಲಕ ಪ್ರಯಾಣಿಕರಿಗೆ ಎಚ್ಚರ ನೀಡಬೇಕೆಂದರು. ನಂತರ ಅಶೋಕಪುರಂನಲ್ಲಿರುವ ಮಲ್ಟಿ ಡಿಸಿಪ್ಲನರಿ ತರಬೇತಿ ಕೇಂದ್ರದಲ್ಲಿ ಕೊರೊನಾ ಕ್ವಾರಂಟೈನ್‌ ಸೌಲಭ್ಯವನ್ನು ಪರಿಶೀಲಿಸಿದರು.

Advertisement

ಪ್ಲ್ರಾಟ್‌ಫಾರಂ ಟಿಕೆಟ್‌ ದರ 50 ರೂ.ಗೆ ಏರಿಕೆ: ರೈಲು ನಿಲ್ದಾಣಗಳ ಪ್ಲಾಟ್‌ಫಾರಂಗಳಲ್ಲಿ ಹೆಚ್ಚಿನ ಜನಸಂದಣಿಯನ್ನು ತಪ್ಪಿಸುವ ಸಲುವಾಗಿ ಭಾರತೀಯ ರೈಲ್ವೆ ಮಂಡಳಿಯ ನಿರ್ದೇಶನದಂತೆ ಮೈಸೂರು, ಹಾಸನ, ಶಿವಮೊಗ್ಗ ಮತ್ತು ದಾವಣಗೆರೆ ರೈಲು ನಿಲ್ದಾಣಗಳಲ್ಲಿನ ಪ್ಲ್ರಾಟ್‌ ಫಾರಂ ಟಕೆಟ್‌ ಬೆಲೆಯನ್ನು 10 ರೂ.ನಿಂದ 50 ರೂ.ಗೆ ಹೆಚ್ಚಿಸಿ ತಕ್ಷಣದಿಂದಲೇ ಜಾರಿಗೆ ತರಲಾಗಿದೆ ಎಂದು ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next