Advertisement
ತಮ್ಮ ಇಂದಿನ ಪತ್ರಿಕಾಗೋಷ್ಠಿಯಲ್ಲಿ ಮೂವರು ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣವನ್ನು ವಿಧಾನಸಭಾಧ್ಯಕ್ಷರು ಇತ್ಯರ್ಥಗೊಳಿಸಿರುವುದಾಗಿ ತಿಳಿಸಿದರು. ಆ ಮೂಲಕ ಕಾಂಗ್ರೆಸ್ ಪಕ್ಷದ ಅತೃಪ್ತ ಶಾಸಕರಾಗಿರುವ ಆರ್. ಶಂಕರ್, ರಮೇಶ್ ಜಾರಕಿಹೊಳಿ ಮತ್ತು ಮಹೆಶ್ ಕುಮಟಳ್ಳಿ ಅವರ ಶಾಸಕತ್ವವನ್ನು ಅನರ್ಹಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ. ಈ ಅನರ್ಹತೆ 15ನೇ ವಿಧಾನಸಭೆ ಅಸ್ತಿತ್ವದಲ್ಲಿ ಇರುವವರೆಗೆ ಈ ಅನರ್ಹತೆ ಊರ್ಜಿತದಲ್ಲಿರಲಿದೆ ಎಂಬುದನ್ನೂ ಸ್ಪೀಕರ್ ಅವರು ಸ್ಪಷ್ಟಪಡಿಸಿದ್ದಾರೆ.
Related Articles
Advertisement
ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು:– ರಾಜೀನಾಮೆಯನ್ನು ಸಲ್ಲಿಸಿರುವ ಇನ್ನುಳಿದ ಅತೃಪ್ತ ಶಾಸಕರ ರಾಜೀನಾಮೆ ವಿಚಾರವನ್ನು ಕೆಲವೇ ದಿನಗಳಲ್ಲಿ ನಿರ್ಧರಿಸಲಿದ್ದೇನೆ ಎಂದು ಹೆಳಿದ ಸ್ಪೀಕರ್ ರಮೇಶ್ ಕುಮಾರ್. – ಗೋಕಾಕ್ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿ ಹೊಳಿ ಮತ್ತು ಅಥಣಿ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್ ಕುಮಟಹಳ್ಳಿ ಅವರ ಶಾಸಕತ್ವವೂ ಅನರ್ಹಗೊಂಡಿದೆ. – 3 ವರ್ಷ 10 ತಿಂಗಳ ಕಾಲ ಆರ್ ಶಂಕರ್ ಅನರ್ಹಗೊಂಡಿದ್ದಾರೆ. 2023 ಮೇ ತಿಂಗಳವರೆಗೆ ಶಂಕರ್ ಅವರ ಅನರ್ಹತೆ ಊರ್ಜಿತದಲ್ಲಿರುತ್ತದೆ. – ಅನರ್ಹಗೊಂಡಿರುವ ಶಾಸಕರು ಸುಪ್ರೀಂಕೋರ್ಟ್ ನ ಮೊರೆ ಹೋಗಲು ಸ್ವತಂತ್ರರಿದ್ದಾರೆ. – ರಾಜೀನಾಮೆ ನೀಡಿರುವ ಶಾಸಕರು ತಮ್ಮ ರಾಜೀನಾಮೆಯನ್ನು ವಾಪಾಸು ಪಡೆದುಕೊಂಡರೆ ಅವರ ಅನರ್ಹತೆಯ ವಿಚಾರದ ಕುರಿತು ಮಾತನಾಡಲು ಒಪ್ಪದ ಸ್ಪೀಕರ್. – ಶಾಸಕರೊಬ್ಬರಿಗೆ ತಮ್ಮ ಪಕ್ಷದ ನಿರ್ಧಾರಗಳ ಕುರಿತಾಗಿ ಭಿನ್ನಾಭಿಪ್ರಾಯಗಳಿದ್ದಲ್ಲಿ ಅದನ್ನು ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸಬೇಕು. – ಇದು ಶರದ್ ಯಾದವ್ ಪ್ರಕರಣದಲ್ಲೇ ಸಾಬೀತಾಗಿದೆ. ಶರದ್ ಯಾದವ್ ಅವರು ಆರ್.ಜೆ.ಡಿ. ಪಕ್ಷದ ವೇದಿಕೆಯಲ್ಲಿ ಕಾಣಿಸಿಕೊಂಡ ಕಾರಣಕ್ಕಾಗಿ ಅವರ ಜೆಡಿಯು ಪಕ್ಷದಿಂದ ಉಚ್ಛಾಟನೆಗೊಳ್ಳುತ್ತಾರೆ. – ಅತೃಪ್ತ ಶಾಸಕರು ಕರ್ನಾಟಕ ವಿಧಾನ ಸಭಾ ನಿಯಮಾವಳಿಗೆ ಅನುಗುಣವಾಗಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿರಲಿಲ್ಲ. – ಬಳಿಕ ಅವರೆಲ್ಲಾ ವಿಶೇಷ ವಿಮಾನದಲ್ಲಿ ಮುಂಬಯಿಯಿಂದ ಆಗಮಿಸಿ ನನ್ನ ಎದುರಿನಲ್ಲೇ ಸರಿಯಾದ ಮಾದರಿಯಲ್ಲಿ ತಮ್ಮ ರಾಜೀನಾಮೆ ಪತ್ರವನ್ನು ಮರಳಿ ಸಲ್ಲಿಸಿದ್ದಾರೆ. 1. ಆರ್. ಶಂಕರ್ ಶಾಸಕತ್ವ ಅನರ್ಹ
ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ (KPJP) ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದ ಆರ್. ಶಂಕರ್. ಬಳಿಕ ಆರ್. ಶಂಕರ್ ಅವರು ತಮ್ಮ ಕೆ.ಪಿ.ಜೆ.ಪಿ. ಪಕ್ಷವನ್ನು ಕಾಂಗ್ರೆಸ್ ಪಕ್ಷವನ್ನು ವಿಲೀನಗೊಳಿಸಿದ್ದರು. ಇದೀಗ ಅವರು ತಮ್ಮ ರಾಜೀನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದರು. ಬಳಿಕ ಶಂಕರ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದರು. ಅವರ ರಾಜೀನಾಮೆಯನ್ನು ಪರಿಶೀಲಿಸಿದ ಬಳಿಕ ಆರ್. ಶಂಕರ್ ಅವರ ಶಾಸಕತ್ವವನ್ನುಈಗ ಪಕ್ಷಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ವಿಧಾನಸಭಾದ್ಯಕ್ಷರು ಅನರ್ಹಗೊಳಿಸಿದ್ದಾರೆ. 3 ವರ್ಷ 10 ತಿಂಗಳ ಕಾಲ ಆರ್ ಶಂಕರ್ ಅನರ್ಹಗೊಂಡಿದ್ದಾರೆ.