Advertisement

ಒಂದೇ ಸೂರಿನಡಿ ಕ್ರೀಡಾ ಚೈತನ್ಯ!

02:18 PM Dec 03, 2019 | Suhan S |

ಹುಬ್ಬಳ್ಳಿ: ಕಬಡ್ಡಿ, ಕ್ರಿಕೆಟ್‌, ಬ್ಯಾಡ್ಮಿಂಟನ್‌, ಫ‌ುಟ್‌ಬಾಲ್‌, ಶೂಟಿಂಗ್‌ ಹೀಗೆ ವಿವಿಧ ಕ್ರೀಡೆಗಳಿಗೆ ಒಂದೇ ಸೂರಿನಡಿ ತರಬೇತಿ ನೀಡುವ ಉತ್ತರ ಕರ್ನಾಟಕದ ಮೊದಲ ಕ್ರೀಡಾ ಸಮುಚ್ಛಯವೊಂದು ಹುಬ್ಬಳ್ಳಿಯಲ್ಲಿ ತಲೆ ಎತ್ತಿದೆ. ಇಲ್ಲಿನ ಚೈತನ್ಯ ಸ್ಫೋರ್ಟ್ಸ್ ಫೌಂಡೇಶನ್‌ ಇಂತಹ ಸಾಹಸಕ್ಕೆ ಮುಂದಾಗಿದೆ.

Advertisement

ಹೊಸೂರುಉಣಕಲ್ಲ ಒಳರಸ್ತೆಯಲ್ಲಿ ನೂತನ ಕೋರ್ಟ್‌ ಸಂಕೀರ್ಣ ಪಕ್ಕದಲ್ಲಿಯಕಲ್ಲೂರು ಲೇಔಟ್‌ನಲ್ಲಿ ನೂತನ ಕ್ರೀಡಾಸಂಕೀರ್ಣ ನಿರ್ಮಾಣಗೊಳ್ಳುತ್ತಿದ್ದು, ಈಗಾಗಲೇ ಕ್ರಿಕೆಟ್‌ ತರಬೇತಿ ಆರಂಭಗೊಂಡಿದೆ. ಬೆಂಗಳೂರು ಬಿಟ್ಟರೆ ಇಂತಹ ಸೌಲಭ್ಯದ ಸಂಕೀರ್ಣ ಇದಾಗಿದೆ ಎಂಬುದು ಫೌಂಡೇಶನ್‌ನವರ ಅಭಿಪ್ರಾಯ.

32 ಗುಂಟೆಯಲ್ಲಿ ಸಮುತ್ಛಯ: ಕಲ್ಲೂರ ಲೇಔಟ್‌ನಲ್ಲಿ ಸುಮಾರು 32 ಗುಂಟೆ ಜಾಗದಲ್ಲಿ ಈ ಕ್ರೀಡಾ ಸಮುತ್ಛಯ ನಿರ್ಮಾಣಗೊಳ್ಳುತ್ತಿದೆ. ಕ್ರಿಕೆಟ್‌, ವಾಲಿಬಾಲ್‌, ಫುಟಬಾಲ್‌,ಹಾಕಿ, ಟೆನ್ನಿಸ್‌, ಬಾಕ್ಸ್‌ ಕ್ರಿಕೆಟ್‌, ಕಬಡ್ಡಿ, ಶೂಟಿಂಗ್‌, ಜಿಮ್‌, ಶಟಲ್‌ ಬ್ಯಾಡ್ಮಿಂಟನ್‌, ಟೇಬಲ್‌ ಟೆನ್ನಿಸ್‌, ಸಿಂಥೆಟಿಕ್‌ ಟ್ರ್ಯಾಕ್, ಖೋ ಖೋ, ಅಟ್ಯಾಪಟ್ಯಾ, ಯೋಗ, ಅಥ್ಲೆಟಿಕ್ಸ್‌ ಕ್ರೀಡೆಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ.

ಕೆಲವೊಂದು ಕ್ರೀಡೆಗಳಿಗೆ ಆಟ ಆಡಲು ಅವಕಾಶ ನೀಡಲಾಗುತ್ತದೆ. ಬೆಳಗ್ಗೆ 6 ಗಂಟೆಗೆ ಆರಂಭವಾಗುವ ತರಬೇತಿ ರಾತ್ರಿ 10 ಗಂಟೆವರೆಗೂ ನಡೆಯಲಿದೆ. ಪ್ರತಿ ಕ್ರೀಡೆಗೂ ಇಬ್ಬರು ನುರಿತ ತರಬೇತುದಾರರನ್ನು ನೇಮಿಸಲಾಗುತ್ತಿದ್ದು, ತರಬೇತಿ ಪಡೆಯುವವರಿಗೆ ಹೊಂದಿಕೆಯಾಗುವ ಸಮಯಕ್ಕೆ ಅನುಗುಣವಾಗಿ ತರಬೇತಿ ನೀಡಲಾಗುತ್ತದೆ. ಕ್ರೀಡೆಗಳ ಕುರಿತಾಗಿ ಶಾಲಾಕಾಲೇಜುಗಳಿಗೆ ತೆರಳಿ ಜಾಗೃತಿ ಕಾರ್ಯ ಕೈಗೊಳ್ಳಲು ನಿರ್ಧರಿಸಲಾಗಿದೆ.

ಖ್ಯಾತ ಕ್ರೀಡಾಪಟುಗಳಿಗೆ ಆಹ್ವಾನ:ಆಯಾ ಕ್ರೀಡೆಗಳ ಖ್ಯಾತನಾಮರನ್ನು ಆಹ್ವಾನಿಸಿ ಮಕ್ಕಳಿಗೆ ವಿವಿಧ ಕ್ರೀಡೆಗಳ ತರಬೇತಿ ಕೊಡಿಸಲು ಆದ್ಯತೆ ನೀಡಲಾಗುತ್ತದೆ. 15 ದಿನ ಇಲ್ಲವೇತಿಂಗಳಿಗೊಮ್ಮೆ ಖ್ಯಾತನಾಮರು ಆಗಮಿಸಿ ತರಬೇತಿ ನೀಡಲಿದ್ದಾರೆ.

Advertisement

ಮಹಿಳಾ ಹಾಕಿಫ‌ುಟ್‌ಬಾಲ್‌ ತಂಡ: ಚೈತನ್ಯ ನ್ಪೋರ್ಟ್ಸ್ ಅಕಾಡೆಮಿಯಿಂದ ಮಹಿಳಾ ಹಾಕಿ ಹಾಗೂ ಫುಟಬಾಲ್‌ತಂಡವನ್ನು ಸಜ್ಜುಗೊಳಿಸಲು ಎಲ್ಲ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ರಾಜ್ಯ ಹಾಕಿ ತಂಡದ ಮಾಜಿ ನಾಯಕಿ ಕಾವೇರೆಮ್ಮಾ ನೀಲಗುಂದ ಅವರು ತರಬೇತಿ ನೀಡಲಿದ್ದಾರೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದು,

ಅಂತಹವರಿಗೆ ಫೌಂಡೇಶನ್‌ನಿಂದಸೂಕ್ತ ತರಬೇತಿ ನೀಡಲಾಗುವುದು. ಜೊತೆಯಲ್ಲಿಯೇ ಅವರು, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಎಲ್ಲ ತರಬೇತಿ ನೀಡಲಾಗುವುದು. ರಾಜ್ಯ

ಹಾಗೂ ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಕ್ರೀಡಾಪಟುಗಳನ್ನು ಫೌಂಡೇಶನ್‌ನಿಂದ ಕಳುಹಿಸಲು ಯೋಜಿಸಲಾಗಿದೆ. ಈಗಾಗಲೇ ಕ್ರೀಡಾ ಸಮುಚ್ಛಯದಲ್ಲಿ ಹಾಕಿ, ಕ್ರಿಕೆಟ್‌, ಫ‌ುಟ್‌ಬಾಲ್‌ ಮೈದಾನಗಳು ಸಿದ್ಧಗೊಂಡಿವೆ. ಕಬಡ್ಡಿ,ಬ್ಯಾಡ್ಮಿಂಟನ್‌, ಶೂಟಿಂಗ್‌, ಜಿಮ್‌, ಟೇಬಲ್‌ ಟೆನ್ನಿಸ್‌ ಮೈದಾನಗಳ ಸಿದ್ಧತೆ ಸಾಗಿದೆ. ರಣಜಿ ಆಟಗಾರರಾದ ನೀತಿನ್‌ ಬಿಲ್ಲೆ, ಪವನ ದೇಶಪಾಂಡೆ ಸೇರಿದಂತೆ ಹಲವರು ಈಗಾಗಲೇ ಸಮುತ್ಛಯಕ್ಕೆ ಬರುತ್ತಿದ್ದಾರೆ. ಡಿ. 10ರಿಂದ ತರಬೇತಿ ಆರಂಭಗೊಳ್ಳುತ್ತಿದ್ದು, ಕ್ರಿಕೆಟ್‌, ಫುಟ್‌ ಬಾಲ್‌, ಹಾಕಿ ತರಬೇತಿ ನೀಡಲಾಗುತ್ತದೆ.

 

-ಬಸವರಾಜ ಹೂಗಾ

Advertisement

Udayavani is now on Telegram. Click here to join our channel and stay updated with the latest news.

Next