Advertisement

ಕಣ್ಣೀರಿಗೆ ಕರಗದ ಅಧಿಕಾರಿಗಳ ಮನ

06:00 AM Jun 06, 2018 | |

ಬೆಂಗಳೂರು: ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಕ್ರೀಡಾ ಕೋಟಾದಿಂದ ಕಬಡ್ಡಿ, ಚೆಸ್‌, ನೆಟ್‌ಬಾಲ್‌ ಸೇರಿದಂತೆ 20ಕ್ಕೂ ಹೆಚ್ಚು ಕ್ರೀಡೆಗಳಿಗೆ ರಾಜ್ಯ ಕ್ರೀಡಾ ಇಲಾಖೆ ಕೊಕ್‌ ನೀಡಿದ ಬೆನ್ನಲ್ಲೇ ಕ್ರೀಡಾಪಟುಗಳು ಮಂಗಳವಾರ ಬೆಂಗಳೂರಿನ ಮಲ್ಲೇಶ್ವರಂನ ಸಿಇಟಿ ಕಚೇರಿ ಎದುರು ಬೃಹತ್‌ ಪ್ರತಿಭಟನೆ ನಡೆಸಿದರು. 

Advertisement

ನೊಂದ ಕ್ರೀಡಾಪಟುಗಳು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಿಇಟಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬೆಳಗ್ಗೆ ಆರಂಭವಾದ ಪ್ರತಿಭಟನೆ ಸಂಜೆಯಾಗುತ್ತಿದ್ದಂತೆ ತೀವ್ರವಾಯಿತು. ಇದೇ ವೇಳೆ ಸ್ಥಳಕ್ಕೆ ಬಂದ ಸಿಇಟಿ ಸಾರ್ವಜನಿಕ ಸಂಪರ್ಕಾಧಿಕಾರಿ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು. ಆದರೆ ಕ್ರೀಡಾ ಇಲಾಖೆ ಅಥವಾ ಸಿಇಟಿಯ ಅಧಿಕಾರಿಗಳಾಗಲಿ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಬರಲಿಲ್ಲ ಎಂದು ಸಂಕಷ್ಟಕ್ಕೆ ಸಿಲುಕಿರುವ ಕ್ರೀಡಾಪಟುವಿನ ಪೋಷಕರು ದೂರಿದ್ದಾರೆ.

ಏನಿದು ಘಟನೆ?: ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಪ್ರತಿಭಾವಂತ ಕ್ರೀಡಾಪಟುಗಳಿಗೆ ಕ್ರೀಡಾ ಕೋಟಾದಿಂದ ಸಡಿಲಿಕೆ ಇರುತ್ತದೆ. ಭಾರತ ಸರಕಾರದ ಪ್ರಕಾರ 52 ಕ್ರೀಡೆಗಳಿಗೆ ಅಧಿಕೃತವಾಗಿ ಮಾನ್ಯತೆ ನೀಡಲಾಗಿದೆ. ಆದರೆ ಇದರಲ್ಲಿ ಒಲಿಂಪಿಕ್ಸ್‌ ಮಾನ್ಯತೆ ಹೊಂದಿರುವ ಕ್ರೀಡೆಗಳು 32 ಮಾತ್ರ. ಈ 32 ಕ್ರೀಡೆಗಳಿಗೆ ಮಾತ್ರ ಸಿಇಟಿಯಲ್ಲಿ ಕ್ರೀಡಾ ಕೋಟಾ ನೀಡಲಾಗುತ್ತದೆ ಎಂದು ರಾಜ್ಯ ಕ್ರೀಡಾ ಇಲಾಖೆ ಮೇ 22ರಂದು ಸುತ್ತೋಲೆ ಹೊರಡಿಸಿತ್ತು. ಇದರ ಪ್ರತಿ ಉದಯವಾಣಿಗೆ ಮೊದಲೇ ಲಭ್ಯವಾಗಿತ್ತಲ್ಲದೆ ಕ್ರೀಡಾಪಟುಗಳ ಸಂಕಷ್ಟದ ಕುರಿತಂತೆ ಜೂ.4ರಂದೆ ವರದಿ ಮಾಡಿತ್ತು. ಕ್ರೀಡಾ ಇಲಾಖೆಯ ಈ ನಿಯಮದಿಂದಾಗಿ ಗ್ರಾಮೀಣ ಕ್ರೀಡೆ ಕಬಡ್ಡಿ, ಖೋ-ಖೋ, ಚೆಸ್‌, ಟೆನಿಕಾಯ್‌r, ದೇಹದಾಡ್ಯì ಸ್ಪರ್ಧೆ, ಅಟ್ಯಾಪಟ್ಯಾ ಸೇರಿದಂತೆ 20ಕ್ಕೂ ಹೆಚ್ಚು ಕ್ರೀಡೆಗಳಲ್ಲಿ ಭವಿಷ್ಯ ಕಂಡುಕೊಂಡಿದ್ದ ಕ್ರೀಡಾಪಟುಗಳು ಸಿಇಟಿಯಲ್ಲಿ ಮೀಸಲಾತಿ ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿದ್ದರು.

ಸಂಪರ್ಕಕ್ಕೆ ಸಿಗದ ಅಧಿಕಾರಿಗಳು!
ಕ್ರೀಡಾಪಟುಗಳು ಪ್ರತಿಭಟನೆ ನಡೆಸುತ್ತಿದ್ದರೆ ಅತ್ತ ಕ್ರೀಡಾ ಇಲಾಖೆ ಅಧಿಕಾರಿಗಳು ನಾಪತ್ತೆಯಾಗಿದ್ದರು. ದೂರವಾಣಿ ಮೂಲಕ ಉದಯವಾಣಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನ ನಡೆಸಿತು. ಆದರೆ ಅಧಿಕಾರಿ ಗಳಿಂದ ಮತ್ತೂಮ್ಮೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next