ಮಹಾನಗರ: ಕ್ರೀಡೆಯಿಂದ ಸಂಘಟನೆ ಮತ್ತು ಬಾಂಧವ್ಯ ವೃದ್ಧಿಸಲು ಸಾಧ್ಯ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಜತೆ ಕಾರ್ಯದರ್ಶಿ ಸತೀಶ್ ಅಡಪ್ಪ ಸಂಕಬೈಲು ಅಭಿಪ್ರಾಯಪಟ್ಟರು.
ಬಂಟರ ಸಂಘ ಜಪ್ಪಿನಮೊಗರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇವುಗಳ ಆಶ್ರಯದಲ್ಲಿ ಜರಗಿದ ಗೊಬ್ಬುದ ಪಂತೊ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಇಂತಹ ಕಾರ್ಯಕ್ರಮವನ್ನು ನಿರಂತರವಾಗಿ ಮಾಡಿದರೆ ಯುವಕರು ಸಂಘಟನೆಯತ್ತ ಒಲವು ವ್ಯಕ್ತಪಡಿಸುತ್ತಾರೆ ಎಂದರು.ಕಂರ್ಬಿಸ್ಥಾನ ಶ್ರಿ ವೈದ್ಯನಾಥ ದೈವಸ್ಥಾನದ ಆಡಳಿತ ಮೊಕ್ತೇಸರ ಅನಿಲ್ ಶೆಟ್ಟಿ ಮನ್ಕುತೋಟಗುತ್ತು ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮನಪಾ ಮಾಜಿ ಸದಸ್ಯ ಜೆ. ಸುರೇಂದ್ರ, ಜಪ್ಪಿನಮೊಗರು ಬಂಟರ ಸಂಘದ ಮಾಜಿ ಅಧ್ಯಕ್ಷ ಕೆ. ಜಗದೀಶ್ ಶೆಟ್ಟಿ ಸರ್ವಾಣಿ, ಜಪ್ಪಿನಮೊಗರು ಬಂಟರ ಸಂಘದ ಮಾಜಿ ಅಧ್ಯಕ್ಷ ಜೆ. ಸೀತಾರಾಮ ಶೆಟ್ಟಿ, ಗೌರವ ಸಲಹೆಗಾರ ಕೆ. ಸೀತಾರಾಮ ಶೆಟ್ಟಿ ಕಪಣಮೊಗರುಗುತ್ತು ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆ
ಕ್ರೀಡಾಕೂಟದಲ್ಲಿ ಬಾಲ್ ಪಾಸಿಂಗ್, ಕಪ್ಪೆ ಓಟ, ಸೂಜಿಗೆ ನೂಲು ಹಾಕುವ ಸ್ಪರ್ಧೆ, ಸಂಗೀತ ಕುರ್ಚಿ, ಮೂರು ಕಾಲು ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಅಂದು ಸಂಜೆ ಸಮಾರೋಪದ ಅಧ್ಯಕ್ಷತೆಯನ್ನು ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ| ಶಾಂತರಾಮ ರೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಇಂಟರ್‌ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್‌ನ ಯುವ ವಿಭಾಗದ ಅಧ್ಯಕ್ಷ ದೇವಿಚರಣ್ ಶೆಟ್ಟಿ, ಉದ್ಯಮಿ ಪ್ರದೀಪ್‌ಕುಮಾರ್ ಶೆಟ್ಟಿ ಅಡ್ಯಾರ್, ಪ್ರವೀಣ್‌ಚಂದ್ರ ರೈ, ಅರಸು ಫ್ರೆಂಡ್ಸ್ ಅಸೋಸಿಯೇಶನ್ ಅಧ್ಯಕ್ಷ ದಿವ್ಯರತನ್ ಶೆಟ್ಟಿ, ಜಪ್ಪಿನಮೊಗರು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಉಮೇಶ್ ಅತಿಕಾರಿ, ಕೆ. ಚಂದ್ರಶೇಖರ್ ರೈ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಗುರುರಾಜ್ ಶೆಟ್ಟಿ ಸ್ವಾಗತಿಸಿದರು. ಉಪಾಧ್ಯಕ್ಷ ರಾಜೇಶ್ ಶೆಟ್ಟಿ ಶಬರಿ ವಂದಿಸಿದರು. ಸುಖಲತಾ ಶೆಟ್ಟಿ, ಸತ್ಯಪ್ರಸಾದ್ ಶೆಟ್ಟಿ, ಶಶಿಕಾಂತ್ ಶೆಟ್ಟಿ, ವಿದ್ಯಾ ಎಸ್. ಶೆಟ್ಟಿ, ಸವಿತಾ ಆರ್. ಶೆಟ್ಟಿ ಮತ್ತು ಜಯರಾಮ್ ಶೆಟ್ಟಿ ಸನ್ನಿಧಿ ಸಹಕರಿಸಿದರು. ಕರುಣಾಕರ್ ಶೆಟ್ಟಿ, ಕೃಷ್ಣ ಶೆಟ್ಟಿ ತಾರೆಮಾರ್ ಮತ್ತು ನಿಖೀತಾ ಶೆಟ್ಟಿ ನಿರೂಪಿಸಿದರು.