Advertisement

ದಿನಗೂಲಿ ಮಾಡುತ್ತಿದ್ದ ಚಿನ್ನ ವಿಜೇತನಿಗೆ ಕೇಂದ್ರ ನೆರವು

06:00 AM Jul 25, 2018 | Team Udayavani |

ಹೊಸದಿಲ್ಲಿ: ದೇಶದ ಕ್ರೀಡಾಪಟುಗಳ ದುಃಸ್ಥಿತಿಗೆ ಇದು ಮತ್ತೂಂದು ಉದಾಹರಣೆ. 2008ರಲ್ಲಿ ನಡೆದ ದಕ್ಷಿಣ ಏಶ್ಯ ಗೇಮ್ಸ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದ ಭಾರತದ ಬಿಲ್ಗಾರ ಅಶೋಕ್‌ ಸೊರೆನ್‌ ಈಗ ದಿನಗೂಲಿ ನೌಕರನಾಗಿ ಜೀವನ ಸವೆಸುತ್ತಿದ್ದಾರೆ. ಇವರ ದುಃಸ್ಥಿತಿ  ಕೇಂದ್ರ ಸರ‌ಕಾರದ ಗಮನಕ್ಕೆ ಬಂದ ಕಾರಣ, ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ 5 ಲಕ್ಷ ರೂ. ಪರಿಹಾರ ನೀಡಿದ್ದಾರೆ.

Advertisement

ಪ್ರಸ್ತುತ ಜಾರ್ಖಂಡ್‌ನ‌ ಜಮ್ಶೆಡ್‌ಪುರದಲ್ಲಿರುವ 28 ವರ್ಷದ ಅಶೋಕ್‌ ಸೊರೆನ್‌ ಕೇಂದ್ರ ಸರಕಾರದ ಗ್ರಾಮೀಣ ಉದ್ಯೋಗ ಖಾತ್ರಿಯಡಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಕೇಂದ್ರ ಸರಕಾರದ ನೆರವಿನಿಂದ ಸೊರೆನ್‌ ನಿಟ್ಟುಸಿರು ಬಿಟ್ಟಿದ್ದಾರೆ.

 ಸೊರೆನ್‌ ಜತೆಗೆ ಅರ್ಜುನ ಪ್ರಶಸ್ತಿ ವಿಜೇತ ಬಿಲ್ಗಾರ ಲಿಂಬಾರಾಮ್‌ ಅವರಿಗೂ 5 ಲಕ್ಷ ರೂ. ನೆರವನ್ನು ಕೇಂದ್ರ ನೀಡಿದೆ. ಲಿಂಬಾರಾಮ್‌ ನ್ಯೂರೋಡೀಜನರೇಟಿವ್‌ ಎಂಬ ರೋಗದಿಂದ ಬಳಲುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next