Advertisement

ಮಾನಸಿಕ ಬೆಳವಣಿಗೆಗೆ ಕ್ರೀಡೆ ಅವಶ್ಯ

12:31 PM May 11, 2019 | Team Udayavani |

ತುಮಕೂರು: ಮನುಷ್ಯನ ಮಾನಸಿಕ, ನೈತಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಗೆ ಕ್ರೀಡೆಗಳು ಸಹಾಯಕ ಎಂದು ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್‌.ಸಿದ್ದೇಗೌಡ ಹೇಳಿದರು.

Advertisement

ತುಮಕೂರು ವಿವಿ ಪರೀಕ್ಷಾ ಭವನ ದಲ್ಲಿ ನಡೆದ ಸ್ನಾತಕೋತ್ತರ ಅಂತರ ವಿಭಾಗ ಕ್ರೀಡಾಕೂಟ ಸಮಾರೋಪ ಹಾಗೂ ವಿಶ್ವ ರೆಡ್‌ಕ್ರಾಸ್‌ ದಿನ ಉದ್ಘಾ ಟಿಸಿದ ಅವರು ಮಾತನಾಡಿ, ಮನುಷ್ಯ ನಿಗೆ ಆರೋಗ್ಯವೇ ಭಾಗ್ಯ. ಸಮರ್ಥ ಜೀವನದಲ್ಲಿ ಆರೋಗ್ಯಕ್ಕೆ ಪ್ರಮುಖ ಸ್ಥಾನವಿದೆ. ದೇಹಕ್ಕೂ ಮನಸ್ಸಿಗೂ ಸಂಬಂಧವಿದೆ. ಯಾವುದೇ ಒಂದಕ್ಕೆ ತೊಂದರೆಯಾದರೂ ನಮ್ಮ ಎಲ್ಲಾ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ. ಕ್ರೀಡೆಗಳು ದೇಹ ಮತ್ತು ಮನಸ್ಸನ್ನು ಸದೃಢವಾಗಿಸಲು ಸಹಾಯಕ. ಅಲ್ಲದೆ, ಕ್ರೀಡೆಗಳು ಸಮಾನತೆ ಭಾವನೆ ಮೂಡಿ ಸುತ್ತವೆ. ರಕ್ತದಾನಕ್ಕಿಂತ ಮಹಾದಾನ ಮತ್ತೂಂದಿಲ್ಲ ಎಂದರು.

ಆರೋಗ್ಯದತ್ತ ಗಮನ ನೀಡಿ: ಕಲ್ಬುರ್ಗಿ ವಿಶ್ವವಿದ್ಯಾಯಲದ ಪ್ರಭಾರ ಕುಲಪತಿ ಡಾ.ಪ್ರತಾಪ್‌ ಸಿಂಗ್‌ ತಿವಾರಿ ಮಾತ ನಾಡಿ, ರೆಡ್‌ ಕ್ರಾಸ್‌ ಸಂಸ್ಥೆ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವ ಹಿಸುತ್ತಿದೆ. ಮಹಾಯುದ್ಧಗಳ ಸಮಯ ದಲ್ಲಿ ಗಾಯಾಳುಗಳಿಗೆ ಸೇವೆ ಮಾಡಿದೆ. ಪ್ರತಿಯೊಬ್ಬರು ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕು. ಲವಲವಿಕೆಯಿಂದ ಇದ್ದಷ್ಟು ಆರೋಗ್ಯ ಹೆಚ್ಚುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತುಮ ಕೂರು ವಿವಿ ಕುಲಸಚಿವ ಪ್ರೊ.ಕೆ.ಎಂ. ಗಂಗಾ ನಾಯಕ್‌, ಮೌಲ್ಯಮಾಪನ ಕುಲ ಸಚಿವ ಪ್ರೊ.ಕೆ.ಜಿ.ಸುರೇಶ್‌, ಹಣಕಾಸು ಅಧಿಕಾರಿ ಪ್ರೊ.ಪರಮಶಿವಯ್ಯ, ಯುವ ರೆಡ್‌ ಕ್ರಾಸ್‌ ಘಟಕದ ನೋಡಲ್ ಅಧಿಕಾರಿ ಪ್ರೊ.ಕೆ.ಜೆ.ಪರಶುರಾಮ, ಸಹಾಯಕ ಕಾರ್ಯಕ್ರಮ ಅಧಿಕಾರಿ ಎಂ.ಹೇಮಂತ್‌, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಸಂಯೋಜಕ ಆರ್‌. ಸುದೀಪ್‌ ಕುಮಾರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next