Advertisement

ನೌಕರರ ಮಾನಸಿಕ ನೆಮ್ಮದಿಗೆ ಕ್ರೀಡಾಕೂಟ ಸಹಕಾರಿ

04:50 PM Mar 27, 2022 | Team Udayavani |

ಕಾರಟಗಿ: ದೈಹಿಕ ಮತ್ತು ಮಾನಸಿಕ ವೃದ್ಧಿಯ ಜೊತೆ ಜೊತೆಗೆ ಎಲ್ಲರೊಂದಿಗೆ ವಿಶ್ವಾಸ, ಪ್ರೀತಿ, ಸ್ನೇಹ ವೃದ್ಧಿಗೂ ಕ್ರೀಡಾಕೂಟಗಳು ಸಹಕಾರಿಯಾಗಿವೆ ಎಂದು ರಾಜ್ಯ ಸರ್ಕಾರಿ ನೌಕರರ ತಾಲೂಕು ಘಟಕದ ತಾಲೂಕಾಧ್ಯಕ್ಷ ಸರ್ದಾರ್‌ ಅಲಿ ಹೇಳಿದರು.

Advertisement

ಪಟ್ಟಣದ ಸರಕಾರಿ ಪಪೂ ಕಾಲೇಜ್‌ ಆವರಣದ ಶ್ರೀ ಸಿದ್ದೇಶ್ವರ ರಂಗಮಂದಿರದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೈನಂದಿನ ಕೆಲಸ ಕಾರ್ಯಗಳಲ್ಲಿ ನಿರತರಾಗಿರುವ ಸರಕಾರಿ ನೌಕರರ ಮಾನಸಿಕ ನೆಮ್ಮದಿಗೆ ಕ್ರೀಡಾಕೂಟ ಪ್ರಮುಖ ಪಾತ್ರವಹಿಸುತ್ತವೆ. ಅಲ್ಲದೇ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಪ್ರತಿಯೊಬ್ಬರಿಗೂ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಸರಕಾರಿ ನೌಕರರ ಕಾರ್ಯಚಟುವಟಿಕೆಗಳನ್ನು ನಡೆಸಲು ಭವನ ಅಗತ್ಯವಾಗಿದ್ದು, ಸುಸಜ್ಜಿತವಾದ ಭವನ ನಿರ್ಮಾಣಕ್ಕೆ ಶಾಸಕರು ಸಕಲ ನೆರವು ನೀಡುವುದಾಗಿ ವಾಗ್ಧಾನ ಮಾಡಿದ್ದಾರೆ. ಆದಷ್ಟು ಬೇಗ ಅದಕ್ಕೊಂದು ಅಂತಿಮ ರೂಪು ನೀಡಲಿದ್ದಾರೆ ಎಂದರು.

ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಸರ್ಕಾರಿ ನೌಕರರ ಸಂಘದ ಗೌರವ ಸಲಹೆಗಾರರಾದ ಡಾ| ವೆಂಕಟೇಶ ದೇಶಪಾಂಡೆ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ವಿವಿಧ ಸಂಘ-ಸಂಸ್ಥೆಗಳ ಗಣ್ಯರಿಗೆ ನೌಕರರ ಸಂಘದಿಂದ ಗೌರವಿಸಿ, ಸನ್ಮಾನಿಸಲಾಯಿತು. ಕ್ರಿಕೆಟ್‌, ವಾಲಿಬಾಲ್‌, ಖೋಖೋ, ಥ್ರೋಬಾಲ್‌ ಆಟಗಳಿಗೆ ಚಾಲನೆ ದೊರೆಯಿತು.

Advertisement

ಇನ್ನುಳಿದಂತೆ ವೈಯುಕ್ತಿಕ ಆಟಗಳಲ್ಲಿ ಭಾಗವಹಿಸುವವರು ನೇರವಾಗಿ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ನೌಕರರ ಸಂಘದ ತಾಲೂಕು ಕಾರ್ಯದರ್ಶಿ ತಿಮ್ಮಣ್ಣ ನಾಯಕ್‌ ಹೇಳಿದರು.

ಸಂಘದ ರಾಜ್ಯ ಪರಿಷತ್‌ ಸದಸ್ಯ ರಮೇಶ ಇಲ್ಲೂರು, ಗೌರವ ಸಲಹೆಗಾರ ಶ್ಯಾಮಸುಂದರ್‌ ಇಂಜಿನಿ, ಹಿರಿಯ ಉಪಾಧ್ಯಕ್ಷೆ ಶಂಕ್ರಮ್ಮ, ಕ್ರೀಡಾ ಕಾರ್ಯದರ್ಶಿ ಶ್ರೀಕಾಂತ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚನ್ನಬಸಪ್ಪ ವಕ್ಕಳದ, ದೈಹಿಕ ಶಿಕ್ಷಕರ ಸಂಘದ ಯಮನಪ್ಪ, ಕಸಾಪ ತಾಲೂಕಾಧ್ಯಕ್ಷ ಶರಣಪ್ಪ ಕೋಟ್ಯಾಳ, ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಉಮೇಶ ಮರ್ಲಾನಹಳ್ಳಿ, ಅಮರೇಶ ಮೈಲಾಪುರ, ಪರುಶರಾಮ ಗಡ್ಡಿ, ದ್ಯಾಮಣ್ಣ ಬೆನಕಟ್ಟಿ, ಸಿದ್ದು ವಳಕಲದಿನ್ನಿ, ವೀರನಗೌಡ ಹಣವಾಳ, ಪರುಶರಾಮ ಗಡ್ಡಿ, ದ್ಯಾಮಣ್ಣ ಬೆನಕಟ್ಟಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next