Advertisement

ಕ್ರೀಡಾ ದಿನ ಆಚರಣೆ

07:32 PM Aug 31, 2020 | Suhan S |

ಶಿವಮೊಗ್ಗ: ಇಂದು ಭಾರತದೆಲ್ಲೆಡೆ ರಾಷ್ಟ್ರೀಯ ಕ್ರೀಡಾದಿನವನ್ನು ಆಚರಿಸಲಾಗುತ್ತಿದೆ. ಅದಕ್ಕೆ ಕಾರಣ ಮೇಜರ್‌ ಧ್ಯಾನ್‌ಚಂದ್‌.ಧ್ಯಾನ್‌ ಚಂದ್‌ ಎಂಬ ಧ್ರುವತಾರೆ ಈಗ ಬದುಕಿದ್ದರೆ ಭಾರತದಲ್ಲಿ ಕ್ರೀಡಾ ಜಗತ್ತನ್ನು, ಜಾಹೀರಾತು ಜಗತ್ತನ್ನು ಆಳುತ್ತಿರುವ ಕ್ರಿಕೆಟ್‌ ಪಟುಗಳು ಕೂಡ ಹಿಂದೆ ಸರಿಯುವಂತಹ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿ ಇರುತ್ತಿರಲಿಲ್ಲ. ಒಲಂಪಿಕ್‌ನಲ್ಲಿ ಕಂಚಿನ ಪದಕವೋ, ಬೆಳ್ಳಿಯ ಪದಕವೋ ಬಂದರೆ ಮುಂದಿನ ಒಲಂಪಿಕ್‌ವರೆಗೂ ಸಂಭ್ರಮಿಸುತ್ತೇವೆ. ಹೀಗಿರುವಾಗ ಸ್ವಾತಂತ್ರ್ಯ ಪೂರ್ವದಲ್ಲೇ ಭಾರತಕ್ಕೆ ಒಂದಲ್ಲ ಎರಡಲ್ಲ ಸತತ ಮೂರು ಒಲಂಪಿಕ್‌ಗಳಲ್ಲಿ ಚಿನ್ನ ಗೆದ್ದು ಕೊಟ್ಟ ಧ್ಯಾನ್‌ಚಂದ್‌ರ ಸಾಧನೆ ಸಾಧಾರಣವಲ್ಲ ಎಂದು ಶಾಲೆಯ ದೈಹಿಕ ಶಿಕ್ಷಕರಾದ ನಾಗರಾಜ ಅವರು ಧ್ಯಾನ್‌ಚಂದ್‌ ಅವರ ಗುಣಗಾನ ಮಾಡಿದರು.

Advertisement

ಪಿಇಎಸ್‌ ಪಬ್ಲಿಕ್‌ ಶಾಲಾ ಆವರಣದಲ್ಲಿ ಆಚರಿಸಿದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು ಉಪಪ್ರಾಂಶುಪಾಲರು, ಶಿಕ್ಷಕರು ಇದ್ದರು.

…………………………………………………………………………………………………………………………………………………

ಡಿಎಸ್‌ಎಸ್‌ ಶಾಖೆ ಉದ್ಘಾಟನೆ : ಭದ್ರಾವತಿ: ದಲಿತರ ಮೇಲಿನ ದೌರ್ಜನ್ಯ ತಡೆಯಲು ಪ್ರೊ| ಕೃಷ್ಣಪ್ಪನವರು ಹುಟ್ಟುಹಾಕಿದ ದಲಿತ ಸಂಘರ್ಷ ಸಮಿತಿ  ಹೆಮ್ಮರವಾಗಿ ಎಲ್ಲೆಡೆ ಬೆಳೆದಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್‌ ವಾದ)ಜಿಲ್ಲಾ ಪ್ರಧಾನ ಸಂಚಾಲಕ ಟಿ.ಎಚ್‌. ಹಾಲೇಶಪ್ಪ ಹೇಳಿದರು.

ಶುಕ್ರವಾರ ತಾಲೂಕಿನ ಅರಬಿಳಚಿ ಗ್ರಾಮದಲ್ಲಿ ಸಮಿತಿಯ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು. ಪ್ರೊ| ಕೃಷ್ಣಪ್ಪನವರ ಹೋರಾಟದ ಫಲವಾಗಿ ಪಿಟಿಸಿಎಲ್‌ ಕಾಯ್ದೆ, ಫೋಕ್ಸೊ ಕಾಯ್ದೆಯಂತಹ ಮಹತ್ತರವಾದ ಕಾಯ್ದೆಗಳು ರೂಪುಗೊಂಡು ಜಾರಿಗೆ ಬರಲು ಸಾಧ್ಯವಾಯಿತು ಎಂದರು. ಜಿಲ್ಲಾ ಸಂಘಟನಾ ಸಂಚಾಲಕ ಎಂ. ಪಳನಿರಾಜ್‌, ಶಿವಕುಮಾರ್‌ ಆಸ್ತಿ, ಆನಂದಪ್ಪ, ಸಂಘದ ಪ್ರಧಾನ ಕಾರ್ಯದರ್ಶಿ ವೀರೇಶ್‌, ಸೂಗೂರು ಪರಮೇಶ್‌, ಜಿಲ್ಲಾ ಸಮಿತಿ ಸಂಚಾಲಕ ಕೆಂಚಪ್ಪ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next