Advertisement
ದೇಶದ ಅನ್ನದಾತ ತಾನು ಬೆಳೆದ ಉತ್ಪನ್ನಗಳನ್ನು ತಾನೇ ಮಾರಾಟ ಮಾಡಲು ಅನುಕೂಲಕರ ವಾತಾವರಣ ಸೃಷ್ಟಿಸಲು ಕೇಂದ್ರ ಜಾರಿಗೊಳಿಸಿದ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಗಳ (ಎಪಿಎಂಸಿ ಕಾಯ್ದೆ) ಎರಡೂ ಸದನದಲ್ಲಿ ಮಂಡನೆಯಾಗಿ ಕಾಯ್ದೆಯಾಗಿ ರೂಪುಗೊಂಡಿರುವುದು ಸ್ವಾಗತಾರ್ಹವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
Related Articles
Advertisement
ರಫ್ತಿಗೂ ಒತ್ತು: ಕೃಷಿ ರಫ್ತಿಗೂ ಮಸೂದೆ ಒತ್ತು ನೀಡಲಿದೆ. ಶೇ.86ರಷ್ಟು ಸಣ್ಣ ವರ್ಗದ ರೈತರಿದ್ದಾರೆ. ಒಮ್ಮೆ ಇವರಿಗೆ ಯಾವುದೇ ಕಾಯ್ದೆ ಮೂಲಕ ತಾವು ಬೆಳೆದ ಬೆಳೆಯ ನ್ಯಾಯಯುತ ಬೆಲೆ ಬಗ್ಗೆ ಮುಂಚಿತವಾಗಿ ಮಾಹಿತಿ ದೊರೆತರೆ ಲಾಭದ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗಿದೆ ಎಂದು ತಿಳಿಸಿದರು.
ಆಧುನಿಕ ಕೃಷಿಗೆ ಸಹಕಾರಿ: ಆಧುನಿಕ ತಂತ್ರಜ್ಞಾನ ಬಳಸಿ, ಬೆಳೆ ಬೆಳೆಯಲು ಮಸೂದೆ ಸಹಕಾರಿ ಅಲ್ಲದೆ, ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೆ ದೊಡ್ಡ ವ್ಯಾಪಾರಿಗಳು ಹಾಗೂ ರಫ್ತುದಾರರನ್ನು ತಲುಪಲು ಮಸೂದೆ ನೆರವಾಗಲಿದೆ. ಕೃಷಿ ವಲಯದಲ್ಲಿ ಸ್ವಾತಂತ್ರ್ಯ ತರುವಲ್ಲಿ ಕೃಷಿ ವಲಯದ ಮೂಲ ಸೌಕರ್ಯ ಅಭಿವೃದ್ಧಿ, ಹೂಡಿಕೆ, ಸೆಳೆಯುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಹೇಳಿದರು.
ನಷ್ಟ ಭರಿಸುವ ಜವಾಬ್ದಾರಿ: ಬೆಳೆ ಖರೀದಿಸುವ ಬಂಡವಾಳಶಾಹಿಗಳು ಅಗತ್ಯವಿರುವ ಯಂತ್ರೋಪಕರಣಗಳನ್ನು ರೈತರಿಗೆ ಒದಗಿಸಬೇಕು. ರೈತರಿಗೆ ಸೂಕ್ತ ತಾಂತ್ರಿಕ ಸಲಹೆ,ಬೆಳೆ ನಾಶವಾದಲ್ಲಿ ಪೂರ್ಣ, ನಷ್ಟ ಭರಿಸುವ ಜವಾಬ್ದಾರಿ ಬಂಡವಾಳಶಾಹಿಗಳ ಮೇಲೆ ಇರುತ್ತದೆ. ಎಪಿಎಂಸಿಯಲ್ಲದೆ, ಬೇರೆ ಕಡೆ ರೈತರ ವ್ಯಾಪಾರಕ್ಕೂಈಕಾಯ್ದೆಯಿಂದ ರಕ್ಷಣೆ ಸಿಗುವುದಲ್ಲದೆ, ರೈತರ ಉತ್ಪನ್ನಗಳಿಗೆ ನಿಶ್ಚಿತ ಲಾಭ ಸಿಗಲು ಕೇಂದ್ರ ಸರ್ಕಾರ ರೈತಪರ ಕಾಯ್ದೆ ಜಾರಿಗೊಳಿಸಿರುವುದು ರೈತರಿಗೆ ತುಂಬಾ ಅನುಕೂಲವಾಗಿದೆ ಎಂದು ಹೇಳಿದರು.
ಬಂಡವಾಳಶಾಯಿ, ದಲ್ಲಾಳಿಗಳಿಂದ ಗೊಂದಲ: ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಕೆ.ಎಸ್ .ನಂಜುಂಡೇಗೌಡ ಮಾತನಾಡಿ, ಎಪಿಎಂಸಿ ಕಾಯ್ದೆ ಜಾರಿಗೊಳಿಸದಂತೆ ಬಂಡವಾಳಶಾಯಿಗಳು ಹಾಗೂ ದಲ್ಲಾಳಿಗಳು ರೈತರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಕಾಯ್ದೆಯಲ್ಲಿ ಏನೆಲ್ಲಾ ಇದೆ ಎಂಬ ಬಗ್ಗೆ ರೈತರಿಗೆ ಅರಿವು ಇಲ್ಲವಾಗಿದೆ. ನೂತನ ಎಪಿಎಂಸಿ ಕಾಯ್ದೆಯಿಂದಾಗಿ ರೈತರು ಬಹಳಷ್ಟು ಅನುಕೂಲ ಪಡೆಯಬಹುದಾಗಿದೆ. ಆನ್‌ಲೈನ್ ನಲ್ಲಿ ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಅವಕಾಶ ಇದೆ ಎಂದರು.
ಆಲೆಮನೆಗಳನ್ನು ಸದೃಢತೆ ಅಗತ್ಯ: ಗುಡಿ ಕೈಗಾರಿಕೆಗೆ ಆದ್ಯತೆ ನೀಡುವ ಸಲುವಾಗಿ ಆತ್ಮನಿರ್ಭರ ಯೋಜನೆಯಲ್ಲಿ ಇತ್ತೀಚೆಗೆ ಸಹಕಾರ ಸಚಿವರು ಜಿಲ್ಲೆಯ ಆಲೆಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಲೆಮನೆಗಳಿಗೆ ಆದ್ಯತೆ ನೀಡುವ ಅಗತ್ಯವಿದೆ. 4ರಿಂದ 5 ಲಕ್ಷ ರೂ. ಸಾಲ ಸೌಲಭ್ಯ ನೀಡಿ ಆಲೆ ಮನೆಗಳನ್ನು ಪುನಶ್ಚೇತನ ಗೊಳಿಸಿ, ರೈತರ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸಬೇಕಾಗಿದೆ. ಈ ಬಗ್ಗೆ ಸಂಬಂಸಿದ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು. ಮುಖಂಡ ಜೋಗಿಗೌಡ, ಮಾಧ್ಯಮ ಪ್ರಮುಖ್ ನಾಗಾನಂದ ಹಾಜರಿದ್ದರು.