ಹೊಸದಿಲ್ಲಿ : ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಸ್ಥಾಪಕ ಹಾಗೂ ಜಾಗತಿಕ ಉಗ್ರನೆಂದು ಘೋಷಿಸಲ್ಪಟಿಟರುವ ಹಾಫೀಜ್ ಸಯೀದ್‌ನನ್ನು ಪಾಕ್ ಸರಕಾರ ನಿಷೇಧಿಸಿರುವ ಪರಿಣಾಮವಾಗಿ ಲಷ್ಕರ್ ಎ ತಯ್ಯಬ ಉಗ್ರ ಸಂಘಟನೆ ಇದೀಗ ಹೋಳಾಗಿದೆ.
ಲಷ್ಕರ್ ಎ ತಯ್ಯಬ ಸಂಘಟನೆಯನ ಸಹ ಸ್ಥಾಪಕನಾಗಿರುವ ಸಯೀದ್ ಜತೆಗಿನ ಸಹ ಸ್ಥಾಪಕ ಮಲಾನಾ ಆಮೀರ್ ಹಂಜಾ ಇದೀಗ ಜೈಶ್ ಎ ಮನ್‌ಕಫ ಎಂಬ ಹೆಸರಿನ ತನ್ನದೇ ಹೊಸ ಉಗ್ರ ಸಂಘಟನೆಯನ್ನು ಸ್ಥಾಪಿಸಿರುವುದಾಗಿ ತಿಳಿದು ಬಂದಿದೆ.
ಪಾಕ್ ಸರಕಾರ ಉಗ್ರ ಸಯೀದ್ ನನ್ನು ನಿಷೇದಿಸಿದ್ದು ಮಾತ್ರವಲ್ಲದ ಆತನ ಸಮೂಹಕ್ಕೆ ಹಣ ಹರಿದು ಬರುತ್ತಿರುವುದನ್ನು ಕೂಡ ತಡೆದಿದೆ. ಹಾಗಾಗಿ ಸಯೀದ್ ಉಗ್ರ ಸಂಘಟನೆಗೆ ಈಗ ಹಣದ ತೀವ್ರ ಕೊರತೆ ಉಂಟಾಗಿದೆ. ಇದರ ಪರಿಣಾವಾಗಿ ಆತ ಸಹಸ್ಥಾಪಕನಾಗಿರುವ ಲಷ್ಕರ್ ಎ ತಯ್ಯಬ ಉಗ್ರ ಸಂಘಟನೆ ಹೋಳಾಗಿದೆ ಎನ್ನಲಾಗಿದೆ.
26/11 ಮುಂಬಯಿ ದಾಳಿಯ ಪ್ರಧಾನ ಸೂತ್ರಧಾರನಾಗಿರುವ ಹಾಫೀಜ್ ಸಯೀದ್‌ನ ಅತ್ಯಂತ ನಿಕಟವರ್ತಿಯಾಗಿದ್ದ ಮೌಲಾನಾ ಆಮಿರ್ ಹಂಜಾ “ಜೈಶ್ ಎ ಮನ್‌ಕಫ’ ಎಂಬ ಹೆಸರಿನ ಹೊಸ ಸಂಘಟನೆ ಸ್ಥಾಪಿಸಿರುವುದು ವಿದೇಶಗಳಿಂದ ಹರಿದು ಬರುವ ಉಗ್ರ ಹಣವನ್ನು ಬಾಚಿಕೊಳ್ಳುವುದಕ್ಕಾಗಿಯೇ ಎನ್ನಲಾಗಿದೆ.
ಹಂಜ ನಿಗೆ ಈ ತನಕ ಸಯೀದ್ ನ ಜಮಾತ್ ಉದ್ ದಾವಾ ಮತ್ತು ಪಾಕಿಸ್ಥಾನದಲ್ಲಿನ ಫಲಾಹ್ – ಎ – ಇನ್‌ಸಾನಿಯತ್ ಉಗ್ರ ಸಂಘಟನೆಗಳಿಂದ ಹಣ ಹರಿದು ಬರುತ್ತಿತ್ತು.