Advertisement

ವಿಶ್ವಕ್ಕೆ ಅಧ್ಯಾತ್ಮ ಹೇಳಿ ಕೊಟ್ಟ ದೇಶ ಭಾರತ: ಶಾಸಕ ನಡಹಳ್ಳಿ

05:07 PM Jun 26, 2018 | |

ತಾಳಿಕೋಟೆ: ಜಗತ್ತಿಗೆ ಆರೋಗ್ಯ, ಔಷಧ ವಿದ್ಯೆ ಜೊತೆಗೆ ಅಧ್ಯಾತ್ಮಿಕ ಸೂತ್ರ ಹೇಳಿ ಕೊಟ್ಟ ದೇಶ ಭಾರತ ಎಂದು ಮುದ್ದೇಬಿಹಾಳ ಶಾಸಕ ಎ.ಎಸ್‌. ಪಾಟೀಲ (ನಡಹಳ್ಳಿ) ಹೇಳಿದರು.

Advertisement

ಶಿವಶಕ್ತಿ ಮಹಿಳಾ ಯೋಗಾಶ್ರಮದ ವತಿಯಿಂದ ಖಾಸ್ಗತೇಶ್ವರ ಯಾತ್ರಾ ಭವನದಲ್ಲಿ ಏರ್ಪಡಿಸಿದ್ದ ಮಹಿಳೆಯರ ಆರೋಗ್ಯ, ಸ್ವದೇಶಿ ವಸ್ತು ಬಳಕೆಯ ಲಾಭ ಮತ್ತು ಯೋಗ ಮಾಹಿತಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾಳಿಕೋಟೆಯಲ್ಲಿ ಈಗಾಗಲೇ 3 ಸಲ ಮಹಿಳೆಯರಿಂದ ಸನ್ಮಾನ ದೊರೆತಿದೆ. ಈ ಎಲ್ಲ ತಾಯಂದಿರರ ಆಶೀರ್ವಾದ ಇನ್ನು ಮುಂದೆಯೂ ನನ್ನ ಮೇಲಿರಲಿ ಎಂದರು.

ಋಷಿ ಮುನಿಗಳು, ಕೂಲಿಕಾರರು ದೈಹಿಕವಾಗಿ ದಂಡನೆ ದುಡಿಮೆಯಲ್ಲಿ ಇರುವುದರಿಂದ ಯೋಗದ ಶಕ್ತಿ ಅವರಲ್ಲಿ ಬರುತ್ತದೆ. ಯೋಗದ ಅಭ್ಯಾಸ ಮಾನಸಿಕವಾಗಿ ತಕ್ಕಂತವರ ದೇಹದ ದಂಡನೆಗೆ ಅಗತ್ಯವಾಗಿರುತ್ತದೆ. ವಯೋಮಿತಿ ಅನುಗುಣವಾಗಿ ಯೋಗದ ವಿಷಯ ಅರಿತುಕೊಂಡು ನಡೆಯಬೇಕೆಂದರು.

ನರೇಂದ್ರ ಮೋದಿ ಅವರು ಯೋಗ ಕುರಿತು ಆಚರಣೆಗೆ ಮುಂದಾಗಿದ್ದು ದೇಶಕ್ಕೆ ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಯೋಗ ಕುರಿತು ಪ್ರಚಾರ ಮಾಡಬೇಕು. ಯೋಗದಿಂದ ಮಾನಸಿಕ ಒತ್ತಡಗಳು ದೂರವಾಗುತ್ತವೆ ಎಂದು ಹೇಳಿದ ಶಾಸಕರು, ಮಹಿಳೆಯರು ಕೇವಲ ಮನೆ ಕೆಲಸಕ್ಕೆ ಸೀಮಿತವಾಗದೇ ಸಮಾಜಮುಖೀ ಕಾರ್ಯದಲ್ಲಿ ತೊಡಬೆಕೆಂದ ಅವರು. ತಾಳಿಕೋಟೆ ಭಾಗದಲ್ಲಿ ಜನತೆಗೆ 24 ಗಂಟೆ ವಿದ್ಯುತ್‌ ಹಾಗೂ ಕುಡಿಯುವ ನೀರಿನ ತೊಂದರೆಯಾಗದಂತೆ ಮಾಡುತ್ತೇನೆಂದು ನುಡಿದರು.

ಸಾನ್ನಿಧ್ಯ ವಹಿಸಿದ್ದ ಬರಣಾಪುರ ಸಿದ್ದಾರೂಢ ಮಠದ ಯೋಗೇಶ್ವರಿ ಮಾತಾಜಿ ಮಾತನಾಡಿ, ದೇಹ ಮನಸು ಸಮತೋಲನವಾಗಿಟ್ಟುಕೊಳ್ಳಬೇಕು. ಅದರಲ್ಲಿ ಉಸಿರಾಡಿಸುವ ಉಸಿರು ಎಂಬುದು ಬಹಳ ಸಮತೋಲನವಾಗಿರಬೇಕು. ಯೋಗ ಎಂಬುದು ಉಸಿರಾಟದ ಕಡೆಗೆ ಗಮನ ಹರಿಸಬೇಕೆಂಬುದಾಗಿದೆ. ಹಿಂದಿನ ಕಾಲದಲ್ಲಿ ಮಹಿಳೆಯರು ಬೀಸುವುದು ಕುಟ್ಟುವ ಕಾರ್ಯದಲ್ಲಿ ಹೆಚ್ಚಾಗಿ ಇರುತ್ತಿದ್ದರಿಂದ ಅಡುಗೆ ಮನೆಯಲ್ಲಿಯೇ ಯೋಗ ಎಂಬುದಿತ್ತು.

Advertisement

ಇಂದಿನ ಕಾಲದಲ್ಲಿ ಮಿಕ್ಷರ್‌ ಗ್ರ್ಯಾಂಡರ್‌, ಮಷಿನರಿಗಳ ಮೇಲೆ ಅವಲಂಬಿತರನ್ನಾಗಿ ಮಾಡಿವೆ. ಏನೇ ಇರಲಿ ಉಸಿರು ತೆಗೆದುಕೊಳ್ಳುವುದರೊಂದಿಗೆ ಬಿಡುವುದರೊಂದಿಗೆ ನಾನೇ ನಾನಾಗಿದ್ದೀನಿ ಎಂಬ ನಿದ್ದೆ ಮಾಡಿದರೆ ಆರೋಗ್ಯವಂತರಾಗಿ ಬಾಳಲು ಸಾಧ್ಯ ಎಂದರು. ಮುದ್ದೇಬಿಹಾಳ ಮಹಿಳಾ ಒಕ್ಕೂಟದ ಅಧ್ಯಕ್ಷೆ ಗಿರಿಜಾ ಕಡಿ ಮಾತನಾಡಿ, ಶಿವಶಕ್ತಿ ಮಹಿಳಾ ಯೋಗಾಶ್ರಮದ ಸಂಸ್ಥಾಪಕಿ ಸುರೇಖಾ ಸಾಲಂಕಿ ಉಚಿತ ಯೋಗ ಶಿಕ್ಷಣ ನೀಡುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಯೋಗದಿಂದ ಸರ್ವ ರೋಗ ದೂರವಾಗುತ್ತವೆ. ಮಹಿಳೆಯರಿಗೆ ಜೀವನದಲ್ಲಿ ಏನಾದರೂ ಸಾಧಿಸುತ್ತೇನೆಂಬ ಛಲವಿರಬೇಕ ಎಂದರು.

ಶಿವಶಕ್ತಿ ಮಹಿಳಾ ಯೋಗಾಶ್ರಮದ ಸಂಸ್ಥಾಪಕಿ ಸುರೇಖಾ ಸಾಲಂಕಿ ಅಧ್ಯಕ್ಷತೆ ವಹಿಸಿದ್ದರು. ರೇಣುಕಾ ಕಾಜೋಳ ಪ್ರಾಸ್ತಾವಿಕ ಮಾತನಾಡಿದರು. ಶಿವಶರಣೆ ಸಂಗೀತಾ, ನೀಲಮ್ಮ ವಿರಕ್ತಮಠ, ಶಾರದಾದೇವಿ ಮಹಿಳಾ ಮಂಡಳ ಅಧ್ಯಕ್ಷೆ ಶಾಂತಾಬಾಯಿ ನೂಲಿಕರ, ಯೋಗ ಶಿಕ್ಷಕ ಶಾಂತಗೌಡ ನಾವದಗಿ, ಗಣ್ಯರಾದ ವಾಸುದೇವ ಹೆಬಸೂರ, ಮಹೇಶ ಸರಶೆಟ್ಟಿ, ಪತಂಜಲಿ ಮಹಿಳಾ ಘಟಕದ ಸುಮಾ ಹಿರೇಮಠ, ಅನ್ನಪೂರ್ಣಾ ಸಾಲಂಕಿ, ಶಿಲ್ಪಾ ಹಿರೇಮಠ, ಪಾರ್ವತಿ ನಾವದಗಿ, ಅಕ್ಷತಾ ಕುಲಕರ್ಣಿ, ಗೀತಾ ಉಬಾಳೆ, ಸುರೇಖಾ ಬಿಳೇಭಾವಿ, ಮನಸ್ವಿ ಸಾಲಂಕಿ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next