Advertisement

ಸಾರ್ಥಕ ಜೀವನಕ್ಕೆ ಅಧ್ಯಾತ್ಮದ ಚಿಂತನೆ ಸಹಕಾರಿ

12:51 PM Jan 23, 2022 | Team Udayavani |

ಸವಣೂರ: ಲೌಕಿಕ ಜಂಜಾಟಗಳಿಂದ ಹೊರಬಂದು ಅಧ್ಯಾತ್ಮದ ಚಿಂತನೆ ಮಾಡಿದಾಗ ಮನುಷ್ಯನ ಭವದ ಬದುಕು ನಿಜ ಸಾರ್ಥಕತೆ ಹೊಂದಲು ಸಾಧ್ಯ ಎಂದು ಧಾರವಾಡದ ಮುರುಘಾ ಮಠದ ಮಲ್ಲಿಕಾರ್ಜುನ ತಿಳಿಸಿದರು. ಪಟ್ಟಣದ ಲಲಾಟೇಶ್ವರ ಮಂಗಲ ಭವನದಲ್ಲಿ ಜರುಗಿದ 182ನೇ ಮಾಸಿಕ ಶಿವಾನುಭವ ಕಾರ್ಯಕ್ರಮ ಹಾಗೂ ಲಿಂ| ಪೂಜ್ಯ ಸಿದ್ಧಲಿಂಗ ಸ್ವಾಮಿಗಳವರ ಮತ್ತು ಲಿಂ| ಪೂಜ್ಯ ಸಂಗನಬಸವ ಸ್ವಾಮಿಗಳ ಸಂಸ್ಮರಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

Advertisement

ಅಖೀಲ ಭಾರತ ಶಿವಾನುಭವ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಅಧ್ಯಾತ್ಮದ ಕುರಿತು ಪರೀಕ್ಷೆ ಬರೆದು ಜ್ಞಾನ ಪ್ರಶಸ್ತಿ ಗಳಿಸುವ ಕಾಲವೊಂದಿತ್ತು. ಆದರೆ ಇಂದಿನ ಡಿಜಿಟಲ್‌ ಯುಗದಲ್ಲಿ ಮೊಬೈಲ್‌, ಟಿವಿ ಸೇರಿದಂತೆ ಎಲೆಕ್ಟ್ರಾನಿಕ ಮಾಧ್ಯಮಗಳಿಗೆ ಜನ ಮಾರುಹೋಗುತ್ತಿದ್ದಾರೆ. ಇದರಿಂದಾಗಿ ಆಧ್ಯಾತ್ಮ ಅಧ್ಯಯನದ ಸಂಸ್ಕೃತಿ ನಶಿಸುತ್ತಿರುವುದು ವಿಷಾದನೀಯ ಎಂದರು.

ಈ ಸಂದರ್ಭದಲ್ಲಿ ಇತ್ತೀಚೆಗೆ ಬಂಕಾಪುರ ದೇಸಾಯಿ ಮಠದಲ್ಲಿ ಕಾರ್ಯಕ್ರಮ ನಡೆಸಿಕೊಟ್ಟ ಕಾರ್ಯಕರ್ತರಿಗೆ ಹಾಗೂ ಸವಣೂರ ತಾಲೂಕು ಕಸಾಪ ನೂತನ ಅಧ್ಯಕ್ಷ ಸಿ.ಎನ್‌. ಪಾಟೀಲ ಹಾಗೂ ನಿಕಟಪೂರ್ವ ಅಧ್ಯಕ್ಷ ಪ್ರಭು ಅರಗೋಳ ಅವರನ್ನು ಕಲ್ಮಠದ ವತಿಯಿಂದ ಗೌರವಿಸಲಾಯಿತು. ನಂತರ ಸೃಜನಿ ನಾಟ್ಯ ಶಾಲೆ ವಿದ್ಯಾರ್ಥಿಗಳಿಂದ ವಚನ ನೃತ್ಯ ಕಾರ್ಯಕ್ರಮ ನಡೆಯಿತು.

ವಿದ್ಯಾಭಾರತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮೋಹನ ಮೆಣಸಿನಕಾಯಿ, ಕರವೇ ತಾಲೂಕು ಘಟಕ ಅಧ್ಯಕ್ಷ ಪರಶುರಾಮ ಈಳಗೇರ, ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರವೀಣ ಚರಂತಿಮಠ, ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ ನಿರ್ದೇಶಕ ಮಲ್ಲಿಕಾರ್ಜುನ ಹಾವಣಗಿ, ಗಿರಿರಾಜ್‌ ಮಾಮ್ಲೆàದೇಸಾಯಿ ಸೇರಿದಂತೆ ಶ್ರೀಮಠದ ಭಕ್ತರು ಇದ್ದರು. ಡಿ.ಎಫ್‌. ಬಿಂದಲಗಿ, ಎಸ್‌.ವಿ. ಹಿರೇಮಠ, ಸಿ.ವಿ. ಗುತ್ತಲ, ವಿದ್ಯಾಧರ ಕುತನಿ ನಿರ್ವಹಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next