Advertisement

ಸ್ನೇಹ ಜೀವಿಗೆ ಭಾವಪೂರ್ಣ ಶ್ರದ್ಧಾಂಜಲಿ

12:59 PM Jul 28, 2017 | |

ಕಲಬುರಗಿ: ಮಾಜಿ ಮುಖ್ಯಮಂತ್ರಿ ಎನ್‌. ಧರ್ಮಸಿಂಗ್‌ ಹಠಾತ್‌ ನಿಧನಕ್ಕೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಾಂಗ್ರೆಸ್‌ ಕಾರ್ಯಕರ್ತರು, ಅಭಿಮಾನಿಗಳು ದಿಗ್ಬ್ರಮೆ ವ್ಯಕ್ತಪಡಿಸಿ ಕಂಬನಿ ಮಿಡಿದಿದ್ದಾರೆ.

Advertisement

ಗಣ್ಯರ ಸಂತಾಪ: ಧರ್ಮಸಿಂಗ್‌ ನಿಧನಕ್ಕೆ ಕಾಂಗ್ರೆಸ್‌ ಸಂಸದೀಯ ನಾಯಕ ಹಾಗೂ ಬಹುಕಾಲದ ಒಡನಾಡಿಯಾಗಿರುವ ಲೋಕಸಭಾ ಸದಸ್ಯ ಡಾ|
ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಗೆಳೆಯನ ಅಗಲಿಕೆ ವಿಷಯ ತಿಳಿದು ಕಣ್ಣೀರು ಹರಿಸಿದ್ದಾರೆ. ನಾವಿಬ್ಬರೂ ಸುಮಾರು 50 ವರ್ಷಗಳಿಂದ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದೇವೆ. ಅವರು ನಿಧನರಾಗಿದಾರೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅವರ ಅಗಲಿಕೆಯಿಂದ ಕುಟುಂಬದಲ್ಲಿ ದೊಡ್ಡಣ್ಣನನ್ನು ಕಳೆದುಕೊಂಡಷ್ಟು ಆಘಾತವಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.

ಮಾಲೀಕಯ್ಯ ವಿ. ಗುತ್ತೇದಾರ್‌ ಸಂತಾಪ: ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ವಿ. ಗುತ್ತೇದಾರ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ದೊಡ್ಡಪ್ಪಗೌಡ ಪಾಟೀಲ-ಕೇದಾರಲಿಂಗಯ್ಯ ಹಿರೇಮಠ ಶೋಕ: ಜೇವರ್ಗಿ ಮತಕ್ಷೇತ್ರದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜೆಡಿಎಸ್‌ ಧುರೀಣ ಕೇದಾರಲಿಂಗಯ್ಯ ಹಿರೇಮಠ ಅವರು, ಧರ್ಮಸಿಂಗ್‌ ಹಾಗೂ ತಾವು ರಾಜಕೀಯವಾಗಿ ವಿರೋಧಿಯಾಗಿದ್ದರೂ ವೈಯಕ್ತಿಕವಾಗಿ ಯಾವುದೇ ದ್ವೇಷವಿರಲಿಲ್ಲ. ಮುತ್ಸದ್ದಿಯನ್ನು ಕಳೆದುಕೊಂಡಂತಾಗಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.

ಸಮಾಜದ ವತಿಯಿಂದ ಸಂತಾಪ: ಧರ್ಮಸಿಂಗ್‌ ನಿಧನದ ಹಿನ್ನೆಲೆಯಲ್ಲಿ ರಜಪೂತ ಜಿಲ್ಲಾ ಸಮಾಜದ ವತಿಯಿಂದ ಎರಡು ನಿಮಿಷಗಳ ಮೌನಾಚರಣೆ
ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರತಾಪಸಿಂಗ್‌ ತಿವಾರಿ, ಕಿಶೋರಸಿಂಗ್‌, ಪ್ರಮೋದ ತಿವಾರಿ, ನವೀನ ಆವಸ್ತಿ, ರಾಜೇಶ ಪಾಂಡೆ, ರಾಜೀವ ಶುಕ್ಲಾ, ಎನ್‌.ಕೆ.ಸಿಂಗ್‌, ಸುದೀಪ ಮಿಶ್ರಾ, ಮದನ ತಿವಾರಿ ಮುಂತಾದವರಿದ್ದರು. 

Advertisement

ಆರ್‌.ಎನ್‌. ಶಾಲೆಯಲ್ಲಿ ಶ್ರದ್ಧಾಂಜಲಿ: ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ನಿಧನ ಸುದ್ದಿ ಗೊತ್ತಾಗುತ್ತಿದ್ದಂತೆ ಶಂಕರಸಿಂಗ್‌ ಸ್ಮರಣಾರ್ಥ ಆರ್‌.ಎನ್‌. ಸಿಬಿಎಸ್‌ಸಿ ಶಾಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಪ್ರೇರಣೆ ನೀಡಿದ ಧರ್ಮಸಿಂಗ್‌ ಅವರ ನಿಧನವು ತುಂಬಲಾರದ ಹಾನಿ ತಂದಿದೆ ಎಂದು ಕಿಶೋರಸಿಂಗ್‌ ದುಃಖೀಸಿದರು.

ಗಣ್ಯರ ಶೋಕ: ರಾಜ್ಯಸಭಾ ಸದಸ್ಯ ಡಾ| ಬಸವರಾಜ ಪಾಟೀಲ ಸೇಡಂ, ಮಾಜಿ ಸಚಿವ ವೈಜನಾಥ ಪಾಟೀಲ, ಮಾಜಿ ಸಚಿವ ಬಾಬುರಾವ್‌ ಚವ್ಹಾಣ, ಮಾಜಿ ಶಾಸಕ ಶಶೀಲ ನಮೋಶಿ, ಮಾಜಿ ಜಿಪಂ ಅಧ್ಯಕ್ಷ ಅಂಬಾರಾಯ ಅಷ್ಟಗಿ, ಡಾ| ವಿಕ್ರಮ ಪಾಟೀಲ, ಆಲ್‌ ಇಂಡಿಯಾ ಬಂಜಾರಾ ಸೇವಾ ಸಂಘದ ರಾಜ್ಯಾಧ್ಯಕ್ಷ ಸುಭಾಷ ರಾಠೊಡ, ಆಮ್‌ ಆದ್ಮಿ ಪಕ್ಷ ಜೇವರ್ಗಿ ತಾಲೂಕಾ ಸಂಚಾಲಕ ಈರಣ್ಣಗೌಡ ಪಾಟೀಲ ಗುಳಾಳ, ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ರಾಜ್ಯಾಧ್ಯಕ್ಷ ಡಾ| ಅಲ್ಲಮಪ್ರಭು ಗುಡ್ಡ, ಜಿಲ್ಲಾ ಜೆಡಿಎಸ್‌ ನ ಜಿಲ್ಲಾಧ್ಯಕ್ಷ ಬಸವರಾಜ ತಡಕಲ್‌, ಕೇದಾರಲಿಂಗಯ್ಯ
ಹಿರೇಮಠ, ಡಿ.ಜಿ. ಸಾಗರ, ನಾಸೀರ ಹುಸೇನ ಉಸ್ತಾದ, ದೇವೇಗೌಡ ತೆಲ್ಲೂರ, ಮುಕ್ರಮಖಾನ್‌, ಚಂದ್ರಶೇಖರ ಪಾಟೀಲ ಹಳ್ಳಿಸಲಗರ, ಶೇಖ್‌ ಫರೀದ್‌, ಸುರೇಶ ಭರಣಿ, ಮನೋಹರ ಪೋದ್ದಾರ, ದಿಲೀಪ ಹೊಡಲ್ಕರ್‌, ಡಾ| ಕೇಶವ ಕಾಬಾ, ಮಹಿಮೂದ ಖುರೇಷಿ, ಮಾಣಿಕ ಶಹಾಪೂರಕರ, ಪ್ರಕಾಶ ಖಡಕೆ, ಶಂಕರ ಕಟ್ಟಿಸಂಗಾವಿ, ಶಿವಾನಂದ ದ್ಯಾಮಗೊಂಡ, ಮಲ್ಲಿಕಾರ್ಜುನ ಕುಸ್ತಿ, ಎಸ್‌.ಕೆ.ಹೇರೂರ, ಸಂತೋಷ ತೆಲ್ಲೂರ, ದೇವಾ 
ಹಸನಾಪೂರ, ಮಂಜೂರ ಪಟೇಲ್‌, ಶಿವಲಿಂಗಪ್ಪ ಪಾಟೀಲ, ಜ್ಯೋತಿ ಕುಲಕರ್ಣಿ, ಮೊಹ್ಮದ ಅಲಿ, ಬಾಬು ಗಾರಂಪಳ್ಳಿ, ರಾಘವೇಂದ್ರ ಕೆರಮಗಿ, ಪ್ರವೀಣ ಜಾಧವ, ತಾರಾನಾಥ ಆನೂರ, ಶರಣಿ ಬಿರಾದಾರ, ಮಹಾನಂದಾ ಪಡಶೆಟ್ಟಿ, ಸಿದ್ದು ಮಾವನೂರ, ಸಮೀರ ಬಾಗಬಾನ, ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರ ಸಿಂಪಿ, ಕೆ.ಎಂ.ಮಠ, ದೌಲತ್‌ರಾಯ ಮಾಲಿಪಾಟೀಲ, ಡಾ| ವಿಜಯಕುಮಾರ ಪರುತೆ,
ಸಿ.ಎಸ್‌.ಪಾಟೀಲ, ಕರ್ನಾಟಕ ರಾಜ್ಯ ಜಲಮಂಡಳಿ ನೌಕರರ ಸಂಘದ ಅಧ್ಯಕ್ಷ ರಮೇಶಕುಮಾರ ರಾವೂರ, ಎಂ.ಎ. ಖಾಲಿಫ್‌, ಖಜಾಂಚಿ ಭಜರಂಗ ಗಾಯಕವಾಡ ಹಾಗೂ ಸಮಸ್ತ ಜಲಮಂಡಳಿ ನೌಕರರು ಹಾಗೂ ಕಲಬುರಗಿಯ ಪಾಲಿಕೆ ಮಾಜಿ ಸದಸ್ಯ ಅರುಣ ಕುಮಾರ ಓಝಾ ಶೋಕ ವ್ಯಕ್ತಪಡಿಸಿದ್ದಾರೆ.

ಶಹಾಬಾದ: ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಜಿ. ರಾಮಕೃಷ್ಣ, ನಗರದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಾ| ರಶೀದ್‌ ಮರ್ಚಂಟ್‌, ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮರತೂರ, ವಿಜಯಕುಮಾರ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ ಹಿರೇಮಠ, ಸಾಹೇಬಗೌಡ ಬೋಗುಂಡಿ, ವಾಡಿ-ಶಹಾಬಾದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಷಮ್‌ ಖಾನ್‌, ಶರಣಗೌಡ  (ಗೋಳಾ), ಅಜಿತ್‌ಕುಮಾರ ಪಾಟೀಲ, ಮಹೇಶ ಧರಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಚವ್ಹಾಣ ಸಂತಾಪ ವ್ಯಕ್ತಪಡಿಸಿದ್ದಾರೆ. 

ಆಳಂದ: ಮಾಜಿ ಮುಖ್ಯಮಂತ್ರಿ ಎನ್‌. ಧರ್ಮಸಿಂಗ್‌ ಅವರ ನಿಧನಕ್ಕೆ ಶಾಸಕ ಬಿ.ಆರ್‌. ಪಾಟೀಲ, ಜಿಲ್ಲಾ ಕೃಷಕ ಸಮಾಜ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ, ಮಾಜಿ ಶಾಸಕ ಸುಭಾಷ ಗುತ್ತೇದಾರ, ಹಿರಿಯ ಸಿದ್ಧಣ್ಣ ಮಾಸ್ತರ ಶೇಗಜಿ, ಎಪಿಎಂಸಿ ಅಧ್ಯಕ್ಷ ಶರಣು ಭುಸನೂರ, ಕೆಪಿಸಿಸಿ ಕೆಎಂಪ್‌ ನಿರ್ದೇಶಕ ಈರಣ್ಣ ಝಳಕಿ ಸಂತಾಪ ಸೂಚಿಸಿದ್ದಾರೆ. ಕಾಂಗ್ರೆಸ್‌ ಕಿಸಾನ್‌ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ಲೋಹಾರ, ಜೆಡಿಎಸ್‌ ಮುಖಂಡ ಸೂರ್ಯಕಾಂತ ಎಸ್‌. ಕೊರಳ್ಳಿ, ತಾಪಂ ಮಾಜಿ ಅಧ್ಯಕ್ಷ ಬಸವರಾಜ ಪವಾಡಶೆಟ್ಟಿ, ಬ್ಲಾಕ್‌ ಅಧ್ಯಕ್ಷ ಮೊಹ್ಮದ್‌ ಮೊಕದೊಮ ಕಾಲೇಮಿರ್‌ ಅನ್ಸಾರಿ ಸಂತಾಪ  ವ್ಯಕ್ತಪಡಿಸಿದ್ದಾರೆ.

ಅಫಜಲಪುರ: ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಅವರ ನಿಧನಕ್ಕೆ ತಾಲೂಕಿನ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಶಾಸಕ ಮಾಲೀಕಯ್ಯ ಗುತ್ತೇದಾರ, ಜಿಪಂ ಮಾಜಿ ಅಧ್ಯಕ್ಷ ನಿತೀನ್‌ ಗುತ್ತೇದಾರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿಶ್ವನಾಥ ರೇವೂರ, ಮಕೂºಲ್‌ ಪಟೇಲ್‌, ಪಪ್ಪು ಪಟೇಲ್‌, ರಜಾಕ್‌ ಪಟೇಲ್‌, ಬಿ.ವೈ. ಪಾಟೀಲ, ಶಿವಪುತ್ರಪ್ಪ ಕರೂರ, ಮಲ್ಲಿನಾಥ ಪಾಟೀಲ, ಕಲ್ಯಾಣರಾವ ಬಿರಾದಾರ, ಸಿದ್ದು ಸಾಲಿಮನಿ, ತಾಪಂ ಅಧ್ಯಕ್ಷೆ ರುಕ್ಮಿàಣಿ ಜಮಾದಾರ, ಪುರಸಭೆ ಅಧ್ಯಕ್ಷ ಶರಣಪ್ಪ ಗುಡ್ಡಡಗಿ, ಬಿಜೆಪಿ ಮಾಜಿ ಶಾಸಕ ಎಂ.ವೈ. ಪಾಟೀಲ ಹಾಗೂ ಮಾಶಾಳ ಜಿಪಂ ಸದಸ್ಯ ಅರುಣಗೌಡ ಪಾಟೀಲ, ಬೀರಣ್ಣ ಕಲ್ಲೂರ, ಗೌಡಪ್ಪಗೌಡ ಬಿರಾದಾರ, ತಾಲೂಕು ಬಿಜೆಪಿ ಅಧ್ಯಕ್ಷ ಸೂರ್ಯಕಾಂತ ನಾಕೇದಾರ ಸಂತಾಪ ಸೂಚಿಸಿದ್ದಾರೆ.

ಶಹಾಬಾದ: ನಗರದ ಎಬಿಎಲ್‌ ಜನರಲ್‌ ವರ್ಕರ್ ಯೂನಿಯನ್‌ ವತಿಯಿಂದ ಜಿಇ ಕಾರ್ಖಾನೆ ಮುಂಭಾಗದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಬಿಎಲ್‌ ಜನರಲ್‌ ವರ್ಕರ್ ಯೂನಿಯನ್‌ (ಐಎನ್‌ ಟಿಯುಸಿ) ಅಧ್ಯಕ್ಷ ಅಶೋಕ ಘೂಳಿ, ಯೂನಿಯನ್‌ ಮುಖಂಡರಾದ ಸುಧಾಕರ, ಸೂರ್ಯಕಾಂತ,
ನಾಗೇಂದ್ರ ನಾಟೇಕಾರ, ಜಾನ್‌, ದೇವೆಂದ್ರ, ಶಿವಾಜಿ, ಮಲ್ಲಿಕಾರ್ಜುನ, ಭರತ್‌, ರವೀಂದ್ರ, ಕಲ್ಯಾಣಿ, ಬಸವರಾಜ, ಗುಂಡಪ್ಪ ಪೂಜಾರಿ, ವೈಜನಾಥ, ಸಂಜೀವ ಕುಸಾಳೆ, ಅಬ್ದುಲ್‌ ನಾವೀದ್‌, ಕಮಲಾಬಾಯಿ, ಅಂಜನಾಬಾಯಿ, ಮಮತಾ, ಶಾಂತಾಬಾಯಿ, ಶಬ್ಬಿರ್‌, ಮುರಶದ್‌ ಇದ್ದರು.
ಸಂತಾಪ: ಐಟಿ-ಬಿಟಿ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ, ಪಾಷಾ ಪಟೇಲ್‌, ಮುನ್ನಾ ಪಟೇಲ್‌, ಸುರೇಶ ಮೆಂಗನ್‌, ಪಿ.ಎಸ್‌. ಕೊಕಟನೂರ್‌, ಬಾಬಾ ಪಟೇಲ್‌, ಮಲ್ಲಿಕಾರ್ಜುನ ಜಲಂದರ್‌ ಮತ್ತಿತರರು ಶೋಕ ವ್ಯಕ್ತಪಡಿಸಿದ್ದಾರೆ.

ವಾಡಿ: ಮಾಜಿ ಮುಖ್ಯಮಂತ್ರಿ ದಿ. ಎನ್‌. ಧರ್ಮಸಿಂಗ್‌ ಅವರ ನಿಧನಕ್ಕೆ ಇಲ್ಲಿನ ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸೈಯ್ಯದ್‌ ಮಹೆಮೂದ್‌ ಸಾಹೇಬ, ಕಾಂಗ್ರೆಸ್‌ ಹಿರಿಯ ಮುಖಂಡ ಟೋಪಣ್ಣ ಕೋಮಟೆ ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಶಂಕ್ರಯ್ಯಸ್ವಾಮಿ ಮದರಿ, ಚಂದ್ರಸೇನ ಮೇನಗಾರ, ಮುಖಂಡರಾದ ಇಂದ್ರಜೀತ ಸಿಂಗೆ, ದೇವಿಂದ್ರ ಕರದಳ್ಳಿ, ಸೂರ್ಯಕಾಂತ ರದ್ದೇವಾಡಿ, ಶೇಖಪ್ಪ ಹೇರೂರ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

ಚಿತ್ತಾಪುರ: ಅಖೀಲ ಕರ್ನಾಟಕ ಪ್ರಿಯಾಂಕ್‌ ಖರ್ಗೆ ಅಭಿಮಾನಿ ಬಳಗದ ವತಿಯಿಂದ ಮಾಜಿ ಮುಖ್ಯಮಂತ್ರಿ ಎನ್‌. ಧರ್ಮಸಿಂಗ್‌ ಅವರ ನಿಧನದ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಲಾಯಿತು. ವಿನ್ನುಕುಮಾರ ಜೆ.ಡಿ, ರವಿಸಾಗರ ಹೊಸಮನಿ, ರಾಜಶೇಖರ ಹಿರೇಮಠ, ಮಲ್ಲಿಕಾರ್ಜುನ ಹೂಗಾರ, ಚಂದ್ರು ನಾಟೀಕಾರ, ಮಹೇಶ, ಅರುಣ, ರಾಜು, ಜಗನ್ನಾಥ ಇದ್ದರು. 

ಗಣ್ಯರ ಶೋಕ
ಮಾಜಿ ಮುಖ್ಯಮಂತ್ರಿ ಎನ್‌. ಧರ್ಮಸಿಂಗ್‌ ನಿಧನಕ್ಕೆ ಹೈದ್ರಾಬಾದ್‌ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಸಚಿವ ವೈಜನಾಥ ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಮಾಜಿ ಸಚಿವರಾದ ಶರಣಬಸಪ್ಪ ದರ್ಶನಾಪುರ, ಸುನೀಲ ವಲ್ಲಾಪುರೆ, ಮಾಜಿ ಶಾಸಕ ಎಂ.ವೈ.ಪಾಟೀಲ ಹಾಗೂ ಮುಂತಾದವರು ತಮ್ಮ ವ್ಯಕ್ತಪಡಿಸಿದ್ದಾರೆ. ವಿಧಾನಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭಾಗಣ್ಣಗೌಡ ಪಾಟೀಲ ಸಂಕನೂರ, ಕಲಬುರಗಿ ದಕ್ಷಿಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನೀಲಕಂಠರಾವ್‌ ಮೂಲಗೆ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸಿದ್ರಾಮರೆಡ್ಡಿ ಪಾಟೀಲ, ಮಾಜಿ ಅಧ್ಯಕ್ಷ ಸೋಮಶೇಖರ ಗೋನಾಯಕ, ಮುಖಂಡರಾದ ಮಲ್ಲಿನಾಥ ಪಾಟೀಲ ಸೊಂತ, ವೈಜನಾಥ ತಡಕಲ್‌, ಅಂಬಾರಾಯ ಅಷ್ಟಗಿ, ಜಿಲ್ಲಾ ಪಂಚಾಯತ್‌ ಸದಸ್ಯರಾದ ಶರಣಗೌಡ ಪಾಟೀಲ
ಸೇರಿದಂತೆ ಹಲವರು ತಮ್ಮ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂತಾಪ
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮಾಜಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ರ ನಿಧನ ಪ್ರಯುಕ್ತ ಸಂತಾಪ ಸೂಚನಾ ಸಭೆ ಏರ್ಪಡಿಸಲಾಗಿತ್ತು. ಕುಲಪತಿ ಪ್ರೊ| ಎಚ್‌. ಎಂ.ಮಹೇಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ| ಚಂದ್ರಕಾಂತ ಎಂ. ಯಾತನೂರ ಎನ್‌.ಧರ್ಮಸಿಂಗ್‌ ಕುರಿತು ತಮ್ಮ ಬಾಲ್ಯದ ದಿನದಿಂದ ಇತ್ತೀಚೆಯ ವರೆಗಿನ ಕೆಲವು ಘಟನೆಗಳನ್ನು ನೆನಪಿಸಿಕೊಂಡರಲ್ಲದೆ, ಅವರ  ಧೀಮಂತ ವ್ಯಕ್ತಿತ್ವ, ಕರ್ನಾಟಕ ರಾಜ್ಯದ, ಅದರಲ್ಲಿ ಮುಖ್ಯವಾಗಿ ಹೈದ್ರಾಬಾದ ಕರ್ನಾಟಕ ಪ್ರದೇಶದ ಅಭಿವೃದ್ಧಿಯಲ್ಲಿ ಅವರ ಮಹತ್ವದ
ಪಾತ್ರದ ಕುರಿತು ಮಾತನಾಡಿದರು. ನಂತರ ಕುಲಪತಿ ಪ್ರೊ| ಎಚ್‌.ಎಂ.ಮಹೇಶ್ವರಯ್ಯ ಧರ್ಮಸಿಂಗ್‌ರ ಕೊಡುಗೆ ಕೊಂಡಾಡಿದರು.

ವಿಶ್ವವಿದ್ಯಾಲಯದ ಎಲ್ಲಾ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೊನೆಯಲ್ಲಿ ಎರಡು ನಿಮಿಷಗಳ ಕಾಲ ಮೌನಾಚರಣೆ ಆಚರಿಸುವ ಮೂಲಕ ಮೃತರ ಆತ್ಮಕ್ಕೆ ಶಾಂತಿಯನ್ನು ಲಭಿಸಲೆಂದು ಭಗವಂತನಲ್ಲಿ ಕೋರಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next