Advertisement

ನಾನ್‌ವೆಜ್‌ ಪ್ರಿಯರಿಗೆ ಸ್ಪೈಸಿ ಖಾದ್ಯ

10:00 PM Oct 11, 2019 | mahesh |

ಮಂಗಳೂರು ಎಂದಾಗ ನೆನಪಾಗುವುದು ಇಲ್ಲಿನ ವಿಶೇಷ ಆಹಾರ ಪದ್ಧತಿ. ಸಸ್ಯಾಹಾರ ಹಾಗೂ ಮಾಂಸಾಹಾರ ಎರಡೂ ರೀತಿಯ ಆಹಾರ ಶೈಲಿಯಲ್ಲಿ ಮಂಗಳೂರು ವಿಭಿನ್ನವಾಗಿ ಗುರುತಿಸಿಕೊಳ್ಳುತ್ತದೆ. ಕರಾವಳಿಗರಂತೂ ಮಾಂಸಾಹಾರ ಪ್ರಿಯರು. ಕೋರಿರೊಟ್ಟಿ, ಮೀನಿನ ಖಾದ್ಯಗಳಿಗೆ ಮಂಗಳೂರು ಫೇಮಸ್‌.

Advertisement

ಚಿಕನ್‌ ಘೀ ರೋಸ್ಟ್‌
ಬೇಕಾಗುವ ಸಾಮಗ್ರಿ
ಕೋಳಿ ಮಾಂಸ: ಒಂದು ಕೆ.ಜಿ.
ನಿಂಬೆ ರಸ: ಸ್ವಲ್ಪ
ಮೊಸರು: ಒಂದು ಚಮಚ
ಅರಿಶಿನ : ಕಾಲು ಸ್ಪೂನ್‌
ಖಾರದ ಪುಡಿ: ಒಂದು ಚಮಚ
ಮೆಂತ್ಯೆ: ಕಾಲು ಚಮಚ
ಕರಿ ಮೆಣಸು: ಅರ್ಧ ಚಮಚ
ಜೀರಿಗೆ: ಮೂರು ಚಮಚ
ಕೊತ್ತಂಬರಿ: ಹತ್ತು ಚಮಚ
ಕೆಂಪು ಮೆಣಸು: 25
ಬೆಲ್ಲ: ಸ್ವಲ್ಪ
ಹುಣಸೆ, ಕರಿಬೇವು: ಸ್ವಲ್ಪ
ಶುಂಠಿ ಪೇಸ್ಟ್‌ ಒಂದು ಚಮಚ
ಬೆಳ್ಳುಳ್ಳಿ: ಎರಡು
ರುಚಿಗೆ ತಕ್ಕಷ್ಟು ಉಪ್ಪು ಮತ್ತು ತುಪ್ಪ.

ಮಾಡುವ ವಿಧಾನ
ಮೊದಲು ಒಂದು ಪಾತ್ರೆಗೆ ಸ್ವಲ್ಪ ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಅರಿಶಿನ, ಮೆಣಸಿನ ಪುಡಿ, ಮೊಸರು, ಲಿಂಬೆರಸ ಬಳಿಕ ತೊಳೆದ ಕೋಳಿಮಾಂಸ ಹಾಕಿ ಮಿಶ್ರಣ ಮಾಡಿ ಅರ್ಧ ಗಂಟೆ ನೆನೆಯಲು ಬಿಡಿ.
ಅನಂತರ ಗ್ಯಾಸ್‌ ಉರಿಸಿ ಒಂದು ಬಾಣಲೆ ಇಟ್ಟು ಅದಕ್ಕೆ ಬೆಳ್ಳುಳ್ಳಿ, ಮೆಂತೆ, ಕರಿಮೆಣಸು, ಜೀರಿಗೆ , ಕೊತ್ತಂಬರಿ ಹಾಗೂ ಕೆಂಪು ಮೆಣಸು ಹಾಕಿ ಚೆನ್ನಾಗಿ ಹುರಿದು ತಣ್ಣಗಾಗಲು ಬಿಡಿ. ಬಳಿಕ ಅದನ್ನು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ,. ಅನಂತರ ಅದೇ ಮಿಕ್ಸಿ ಜಾರಿಗೆ ಸ್ವಲ್ಪ ಬೆಲ್ಲ, ಹುಣಸೆ ,ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಅನಂತರ ಒಂದು ಬಾಣಲೆಗೆ ತುಪ್ಪ ಹಾಕಿ ಅದು ಬಿಸಿಯಾದ ಮೇಲೆ ಮಿಶ್ರಣ ಮಾಡಿ ನೆನೆಯಲು ಇಟ್ಟ ಕೋಳಿಮಾಂಸ ಹಾಕಿ ಚೆನ್ನಾಗಿ ರೋಸ್ಟ್‌ ಫ್ರೈ ಮಾಡಿ ಒಂದು ಪ್ಲೇಟ್‌ನಲ್ಲಿ ತೆಗೆದಿಟ್ಟುಕೊಳ್ಳಿ. ಅದೇ ಬಾಣಲೆಗೆ ತುಪ್ಪ ಹಾಕಿ ರುಬ್ಬಿಟ್ಟ ಮಸಾಲೆ ಹಾಗೂ ಸ್ವಲ್ಪ ನೀರು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ ಅನಂತರ ಅದಕ್ಕೆ ಫ್ರೈ ಮಾಡಿದ ಕೋಳಿಮಾಂಸ ಹಾಕಿ ಮಿಕ್ಸ್‌ ಮಾಡಿ ಬೇಯಿಸಿ.
ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಕರಿಬೇವು ಫ್ರೈ ಮಾಡಿ ಅದನ್ನು ಬೇಯುತ್ತಿರುವ ಚಿಕನ್‌ಗೆ ಹಾಕಿ ಬಳಿಕ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಚಿಕನ್‌ à ರೋಸ್ಟ್‌ ಸವಿಯಲು ಸಿದ್ಧ. ಇಲ್ಲಿ ಗ್ರೇವಿ ಇಷ್ಟಪಡುವವರು ಗ್ರೇವಿಯಾಗಿಯೂ ಬಳಸಬಹುದು.

ಬಂಗುಡೆ ಮಸಾಲ ಫ್ರೈ
ಬೇಕಾಗುವ ಸಾಮಗ್ರಿ
ಬಂಗುಡೆ : ಎಂಟು
ಈರುಳ್ಳಿ : ಎರಡು
ಶುಂಠಿ: ಸ್ವಲ್ಪ
ಬೆಳ್ಳುಳ್ಳಿ: ಹನ್ನೆರಡು ಎಸಳು
ಕೊತ್ತಂಬರಿ: ಮೂರು ಚಮಚ
ಕರಿಮೆಣಸು: ಎರಡು ಚಮಚ
ಕೆಂಪು ಮೆಣಸು: ಮೂವತ್ತು
ಟೊಮೇಟೋ: ಒಂದು
ಕರಿಬೇವು: ಸ್ವಲ್ಪ
ಅರಿಶಿನ: ಅರ್ಧ ಚಮಚ
ಸಾಸಿವೆ: ಒಂದು ಚಮಚ
ಜೀರಿಗೆ: ಒಂದು ಚಮಚ
ಓಂ ಕಾಳು: ಒಂದು ಚಮಚ
ವಿನೆಗರ್‌ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಎಣ್ಣೆ.

Advertisement

ಮಾಡುವ ವಿಧಾನ
ಮೊದಲಿಗೆ ಒಂದು ಬಾಣಲೆ ಸ್ಟವ್‌ ಮೇಲಿಟ್ಟು ಬಿಸಿಯಾದ ಬಳಿಕ ಕೆಂಪು ಮೆಣಸು, ಕರಿಮೆಣಸು, ಕೊತ್ತಂಬರಿ, ಜೀರಿಗೆ , ಓಂಕಾಳು ಹಾಕಿ ಚೆನ್ನಾಗಿ ಫ್ರೈ ಮಾಡಿ . ತಣ್ಣಗಾಗಲು ಬಿಡಿ. ಅನಂತರ ಹುರಿದಿಟ್ಟ ಎಲ್ಲ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ ನೀರನ್ನು ಸೇರಿಸದೆ ಪೌಡರ್‌ ಮಾಡಿಕೊಂಡು ಅದಕ್ಕೆ ಅರಿಶಿನ , ಬೆಳ್ಳುಳ್ಳಿ, ಶುಂಠಿ, ಟೊಮೇಟೊ, ಈರುಳ್ಳಿ, ವಿನೆಗರ್‌ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ, ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಅದಕ್ಕೆ ಸಾಸಿವೆ, ಕರಿಬೇವು ಹಾಕಿ ಫ್ರೈ ಮಾಡಿ. ಬಳಿಕ ರುಬ್ಬಿಟ್ಟ ಮಸಾಲೆ ಸೇರಿಸಿ ಒಂದು ಲೋಟ ನೀರು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಸಾಲವನ್ನು ಚೆನ್ನಾಗಿ ಬೇಯಿಸಿ ತೆಗೆದಿಡಿ. ಅನಂತರ ಒಂದು ಪ್ಯಾನ್‌ ನಲ್ಲಿ ಎಣ್ಣೆ ಹಾಕಿ ಬೇಯಿಸಿದ ಮಸಾಲ ಹಾಕಿ ನಂತರ ಅದಕ್ಕೆ ಬಂಗುಡೆ ಮೀನನ್ನು ಸೇರಿಸಿ ಮಸಾಲೆಯನ್ನು ಮೀನಿನ ಮೇಲೆ ಚೆನ್ನಾಗಿ ಸವರಿ . ಬಳಿಕ ಮುಚ್ಚಳ ಮುಚ್ಚಿ 10 ನಿಮಿಷ ಚೆನ್ನಾಗಿ ಬೇಯಿಸಿ ಮುಚ್ಚಳ ತೆಗೆದು ಮೀನನ್ನು ಮಗುಚಿ ಹಾಕಿ ಮತ್ತೆ 3 ನಿಮಿಷ ಬೇಯಿಸಿದರೆ ಬಂಗುಡೆ ಮಸಾಲ ಫ್ರೈ ಸವಿಯಲು ಸಿದ್ಧ


ಸಿಗಡಿ ಫ್ರೈ

ಬೇಕಾಗುವ ಸಾಮಗ್ರಿ
ಸಿಗಡಿ: ಅರ್ಧ ಕೆ.ಜಿ.
ಈರುಳ್ಳಿ: ಎರಡು
ಖಾರದ ಪುಡಿ: 1 ಚಮಚ
ಅರಿಶಿನ ಪುಡಿ : 1 ಚಮಚ
ಜೀರಿಗೆ ಪುಡಿ: ಅರ್ಧ ಚಮಚ
ಧನಿಯಾ ಪುಡಿ: 1 ಚಮಚ
ಕರಿಮೆಣಸಿನ ಪುಡಿ: 1 ಚಮಚ
ಹಸಿ ಮೆಣಸಿನಕಾಯಿ: 2
ಕರಿಬೇವು, ಕೊತ್ತಂಬರಿ ಸೊಪ್ಪು³
ಉಪ್ಪು: ರುಚಿಗೆ ತಕ್ಕಷ್ಟು
ನಿಂಬೆಹಣ್ಣು: 1
ಕಾರ್ನ್ಫ್ಲೋರ್‌: 1 ಚಮಚ
ಮೈದಾ: 1ಚಮಚ
ಗರಂ ಮಸಾಲ ಪುಡಿ: ಅರ್ಧ ಚಮಚ
ಮೊಟ್ಟೆ: ಒಂದು
ಎಣ್ಣೆ

ಮಾಡುವ ವಿಧಾನ
ಒಂದು ಪಾತ್ರೆ ಯಲ್ಲಿ ಸಿಗಡಿಗೆ ಸ್ವಲ್ಪ ಉಪ್ಪು, ಅರಿಶಿನ ಹಾಕಿ, ಅನಂತರ ಮೊಟ್ಟೆ , ಮೈದಾ ಹಿಟ್ಟು, ಖಾರದ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ , ಕರಿ ಮೆಣಸಿನ ಪುಡಿ, ಗರಂ ಮಸಾಲೆ ಪುಡಿ ಹಾಕಿ ಮಿಕ್ಸ್‌ ಮಾಡಿ 2 ನಿಮಿಷ ನೆನೆ ಯಲು ಬಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಬಳಿಕ ನೆನೆಸಿದ ಸಿಗಡಿಯನ್ನು ಒಂದೊಂದಾಗಿ ಫ್ರೈ ಮಾಡಿ ತೆಗೆದಿಡಿ. ಇನ್ನೊಂದು ಬಾಣ ಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಮೇಲೆ ಹೆಚ್ಚಿದ ಈರುಳ್ಳಿ , ಹಸಿಮೆಣಸಿನ ಕಾಯಿ, ಶುಂಠಿ ಬೆಳ್ಳುಳ್ಳಿ ಪೆಸ್ಟ್‌ , ಗರಂ ಮಸಾಲೆ , ಕಾಳು ಮೆಣಸಿನ ಪುಡಿ, ಹಾಕಿ ಚೆನ್ನಾಗಿ ಫ್ರೈ ಮಾಡಿ ನಂತರ ಸಿಗಡಿ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಸಿಗಡಿ ಫ್ರೈ ಸವಿಯಲು ಸಿದ್ದ.


ಬೊಂಡಾಸ್‌ ಫ್ರೈ

ಬೇಕಾಗುವ ಸಾಮಗ್ರಿ
ಬೊಂಡಾಸ್‌: ಅರ್ಧ ಕೆ.ಜಿ.
ಅರಿಶಿನ: ಅರ್ಧ ಚಮಚ
ಮೆಣಸಿನ ಪುಡಿ: ಒಂದು ಚಮಚ
ಗರಂ ಮಸಾಲ: ಅರ್ಧ ಚಮಚ
ನಿಂಬೆ ರಸ: ಒಂದು ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್‌: ಒಂದು ಚಮಚ
ಈರುಳ್ಳಿ: ಒಂದು
ಹಸಿಮೆಣಸು: 2 ಕರಿಬೇವು, ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ
ಮೊದಲು ಪಾತ್ರೆಯಲ್ಲಿ ಅರಿಶಿನ, ಮೆಣಸಿನ ಪುಡಿ, ಗರಂ ಮಸಾಲೆ , ನಿಂಬೆರಸ , ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಗೂ ಉಪ್ಪು ಹಾಕಿ ಮಿಕ್ಸ್‌ ಮಾಡಿ ಅದಕ್ಕೆ ಬೊಂಡಾಸ್‌ ಮೀನು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ ಅರ್ಧ ಗಂಟೆ ನೆನೆಯಲು ಬಿಡಿ. ಅನಂತರ ಒಂದು ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿ ಮಿಕ್ಸ್‌ ಮಾಡಿಟ್ಟ ಬೊಂಡಾಸ್‌ ಹಾಕಿ ಚೆನ್ನಾಗಿ ಫ್ರೈ ಮಾಡಿ. ಬಳಿಕ ಒಂದು ಬಾಣಲೆ ಇಟ್ಟು ಅದು ಬಿಸಿಯಾದ ಮೇಲೆ ಸ್ವಲ್ಪ ಎಣ್ಣೆ, ಈರುಳ್ಳಿ, ಶುಂಠಿ, ಕಾಯಿ ಮೆಣಸು ಕರಿಬೇವು ಹಾಕಿ ಚೆನ್ನಾಗಿ ಫ್ರೈ ಮಾಡಿ, ಅನಂತರ ಇದಕ್ಕೆ ಫ್ರೈ ಮಾಡಿಟ್ಟುಕೊಂಡಿರುವ ಬೊಂಡಾ ಸ್‌ ಹಾಕಿ 5 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿದರೆ ಬೊಂಡಾಸ್‌ ಫ್ರೈ ಸವಿಯಲು ಸಿದ್ಧ.

ಕೆಎಫ್ಸಿ ಚಿಕನ್‌ ಪಾಪ್‌ ಕಾರ್ನ್
ಬೇಕಾಗುವ ಸಾಮಗ್ರಿ
ಅರ್ಧ ಕೆಜಿ ಬೋನ್‌ಲೆಸ್‌ ಚಿಕನ್‌ (ತೆಳ್ಳಗೆ ಚಿಕ್ಕ ಚಿಕ್ಕದಾಗಿ ಕಟ್‌ ಮಾಡಿ ಚೆನ್ನಾಗಿ ತೊಳೆದಿಟ್ಟುಕೊಳ್ಳಿ)
ಮೈದಾ ಹಿಟ್ಟು: 1 ಕಪ್‌
ಕಾರ್ನ್ಫ್ಲೋರ್‌: ಅರ್ಧ ಕಪ್‌
ಪೆಪ್ಪರ್‌: ಎರಡು ಟೀ ಸ್ಪೂನ್‌
ಮೊಟ್ಟೆ: ಒಂದು
ಶುಂಟಿ ಬೆಳ್ಳುಳ್ಳಿ ಪೇಸ್ಟ್‌: 1 ಟೇಬಲ್‌ ಸ್ಪೂನ್‌
ಖಾರದ ಪುಡಿ: 1 ಟೀ ಸ್ಪೂನ್‌
ಡಾರ್ಕ್‌ ಸೋಯಾ ಸಾಸ್‌: ಅರ್ಧ ಟೀ ಸ್ಪೂನ್‌
ವಿನೆಗರ್‌: ಅರ್ಧ ಟೀ ಸ್ಪೂನ್‌
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ

ಮಾಡುವ ವಿಧಾನ
ಬೌಲ್‌ವೊಂದಕ್ಕೆ ಚಿಕನ್‌ ಹಾಕಿ ಅದಕ್ಕೆ ಸ್ವಲ್ಪ ಕಾರ್ನ್ಫ್ಲೋರ್‌, ಅರ್ಧ ಟೀ ಸ್ಪೂನ್‌ ಕಾಳುಮೆಣಸಿನ ಪುಡಿ, ಅರ್ಧ ಟೀ ಸ್ಪೂನ್‌ ಖಾರದ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ರುಚಿಗೆ ತಕ್ಕಷ್ಟು ಉಪ್ಪು, ಒಂದು ಮೊಟ್ಟೆ ಹಾಕಿ ಎಲ್ಲವನ್ನು ಮಿಶ್ರಣ ಮಾಡಿ. ಉಪ್ಪು, ಖಾರ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ಆನಂತರ ಅರ್ಧ ಸ್ಪೂನ್‌ನಷ್ಟು ಡಾರ್ಕ್‌ ಸೋಯಾ ಸಾಸ್‌, ಅರ್ಧ ಟೀ ಸ್ಪೂನ್‌ ವಿನೆಗರ್‌ ಹಾಕಿ ಮತ್ತೆ ಎಲ್ಲವನ್ನು ಮಿಶ್ರಣ ಮಾಡಿ ಎರಡು ಗಂಟೆ ಕಾಲ ಹಾಗೆಯೇ ಬಿಡಿ. ಬಳಿಕ ಇನ್ನೊಂದು ಪ್ಲೇಟ್‌ಗೆ ಉಳಿದಿರುವ ಕಾರ್ನ್ ಫ್ಲೋರ್‌ ಮತ್ತು ಒಂದು ಕಪ್‌ ಮೈದಾ ಹುಡಿ, ಖಾರದ ಪುಡಿ, ಉಪ್ಪು ಹಾಕಿ ಮಿಶ್ರಣ ಮಾಡಿಕೊಳ್ಳಿ. ಎಣ್ಣೆ ಕಾಯಲು ಇಡಿ. ಆನಂತರ ನೆನೆದಿರುವ ಚಿಕನ್‌ನ್ನು ಇದರಲ್ಲಿ ಮಿಶ್ರಣ ಮಾಡಿ ಎಣ್ಣೆಗೆ ಹಾಕಿ ಎಂಟು ನಿಮಿಷ ಕಾಯಿಸಿ. ಶುಚಿ ರುಚಿಯಾದ ಚಿಕನ್‌ ಪಾಪ್‌ಕಾರ್ನ್ ತಿನ್ನಲು ರೆಡಿಯಾಗುತ್ತದೆ.

-   ರಂಜಿನಿ ಅಮೀನ್‌
-   ಪೂರ್ಣಿಮಾ, ಪರ್ಕಳ

Advertisement

Udayavani is now on Telegram. Click here to join our channel and stay updated with the latest news.

Next