Advertisement

ಕೇರಳ ರಾಜ್ಯಪಾಲರ ಬೆಂಗಾವಲು ಕಾರಿಗೆ ಢಿಕ್ಕಿ ಹೊಡೆದ ಕಾರು; ಇಬ್ಬರ ಬಂಧನ

05:49 PM Jul 29, 2023 | Team Udayavani |

ನೋಯ್ಡಾ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಶುಕ್ರವಾರ ರಾತ್ರಿ ನೋಯ್ಡಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ದೆಹಲಿಗೆ ತೆರಳುತ್ತಿದ್ದಾಗ ಅವರ ಬೆಂಗಾವಲು ವಾಹನಕ್ಕೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಘಟನೆ ನಡೆದಿದೆ.

Advertisement

ಉತ್ತರ ಪ್ರದೇಶ ಪೊಲೀಸರು ಬೆಂಗಾವಲು ಪಡೆಗೆ ನುಗ್ಗಿದ ಇಬ್ಬರನ್ನು ಬಂಧಿಸಿದ್ದಾರೆ ಮತ್ತು ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ, ಇಬ್ಬರೂ ನಿದ್ರಾಹೀನ ಸ್ಥಿತಿಯಲ್ಲಿದ್ದರು.

ಇದನ್ನೂ ಓದಿ:2047ಕ್ಕೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಲು… : ನಿರ್ಮಲಾ ಸೀತಾರಾಮನ್

ವೇಗವಾಗಿ ಬಂದ ವಾಹನ ರಾಜ್ಯಪಾಲರ ಬೆಂಗಾವಲು ವಾಹನಕ್ಕೆ ಎರಡು ಬಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಭಾಗಿಯಾಗಿದೆ ಎನ್ನಲಾದ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಇಬ್ಬರು ಆರೋಪಿಗಳನ್ನು ಗಾಜಿಯಾಬಾದ್ ನಿವಾಸಿಗಳಾದ ಗೌರವ್ ಸೋಲಂಕಿ ಮತ್ತು ಮೋನು ಕುಮಾರ್ ಎಂದು ಗುರುತಿಸಲಾಗಿದೆ.

Advertisement

ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ನೋಯ್ಡಾದ ಸೆಕ್ಟರ್ 77ನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next