Advertisement

ಮದುವೆ ಮೆರವಣಿಗೆಯಲ್ಲಿ ಕುಣಿಯುತ್ತಿದ್ದವರ ಮೇಲೆ ಹರಿದ ಕಾರು: ಇಬ್ಬರು ಮೃತ್ಯು

04:26 PM Feb 16, 2023 | Team Udayavani |

ಗುಜರಾತ್:‌  ಮದುವೆ ಮೆರವಣಿಗೆಯಲ್ಲಿ ಡ್ಯಾನ್ಸ್‌ ಮಾಡುತ್ತಿದ್ದವರ ಕಾರು ಹರಿದು ಇಬ್ಬರು ಮೃತಪಟ್ಟಿರುವ ಘಟನೆ ಗುಜರಾತ ನ ಮಹಿಸಾಗರ ಜಿಲ್ಲೆಯ ಬಾಲಸಿನೋರ್ ನಲ್ಲಿ ಬುಧವಾರ ರಾತ್ರಿ (ಫೆ.15 ರಂದು) ನಡೆದಿದೆ.

Advertisement

ಬಲಸಿನೋರ್‌ನ ಪೆಟ್ರೋಲ್ ಪಂಪ್‌ ಬಳಿ ಮದುವೆಯ ಮೆರವಣಿಗೆ ಸಾಗುತ್ತಿತ್ತು. ಸಂಭ್ರಮದಲ್ಲಿದ್ದವರಿಗೆ ಮುಂದೆ ಏನಾಗುತ್ತದೆ ಎನ್ನುವುದರ ಬಗ್ಗೆ ಕಿಂಚಿತ್ತೂ ಅರಿವೂ ಕೂಡ ಇರಲಿಲ್ಲ. ಕುಣಿದು ಕುಪ್ಫಳಿಸುತ್ತಿದ್ದ ಜನರಿಗೆ ಅದೊಂದು ಅಪಘಾತ ಸಂಭ್ರಮದ ನೆನಪನ್ನೇ ಹೋಗಲಾಡಿಸಿದೆ.

ವೇಗವಾಗಿ ಬಂದ ಕಾರು ಕುಣಿಯುತ್ತಿದ್ದವರ ಮೇಲೆ ಹರಿದಿದೆ. ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 20 ಕ್ಕೂ ಅಧಿಕ ಮಂದಿ ಘಟನೆಯಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮತ್ತೊಬ್ಬರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪಕ್ಕದಲ್ಲಿದ್ದ ಸಿಸಿಟಿವಿ ದೃಶ್ಯವನ್ನು ಆಧಾರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next