ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ರೈಲು ಮಾರ್ಗ ನಿರ್ಮಾಣಕ್ಕೆ ವೇಗ ಕೊಡಬೇಕೆಂದು ಒತ್ತಾಯಿಸಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಸದಸ್ಯರು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.
Advertisement
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕರಾಡ-ನಿಪ್ಪಾಣಿ- ಬೆಳಗಾವಿ ಮತ್ತು ಶೇಡಬಾಳ-ಅಥಣಿ-ವಿಜಯಪೂರ ಹೀಗೆ ರೈಲು ಯೋಜನೆಗಳು 2010-2011 ರಲ್ಲಿ ಸಮೀಕ್ಷೆಯಾಗಿ ಅನುಮೋದನೆ ಸಹ ಯುಪಿಎ ಸರಕಾರದಲ್ಲಿ ದೊರಕಿದೆ. ಆದರೆ ದಶಕಗಳು ಕರೆದರೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಇನ್ನೂ ಕಾಮಗಾರಿ ಆರಂಭವಾಗಿಲ್ಲ ಮತ್ತು ಕುಡಚಿ-ಬಾಗಲಕೋಟ ರೈಲುಮಾರ್ಗದ ಕಾಮಗಾರಿ ದಶಕಗಳಿಂದ ಆಮೆ ಗತಿಯಲ್ಲಿ ಸಾಗುತ್ತಲಿದೆ. ಈ ಕುರಿತು ಸಾಕಷ್ಟು ಸಲ ಈ ಭಾಗದ ಜನರು ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಕಲಾವಂತ, ಕುಮಾರ ನಂದಿ, ರಾಜು ಸೊಲ್ಲಾಪುರೆ, ಅಶ್ವತ ಮಾಳಕರಿ, ಮಹೇಂದ್ರ ಕರ್ನೂರೆ, ರಾಜು ಕೋಟಗಿ ಹಾಗೂ ಅನೇಕರು ಇದ್ದರು.