Advertisement

ಸ್ಪೀಡ್‌ ಲವರ್‌ಗಳ ಮುದ್ದಿನ ಡಾರ್ಲಿಂಗ್‌ ರೋಡ್‌ಸ್ಟರ್‌

08:20 AM Nov 18, 2017 | |

ಹೊಸದಿಲ್ಲಿ: ಇಂಧನ ಆಮದಿಗೆ ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನೆಗೆ ಒತ್ತು ನೀಡಿರುವ ಈ ಹೊತ್ತಿನಲ್ಲಿ ಟೆಸ್ಲಾ ಕಾರು ತಯಾರಿಕಾ ಕಂಪೆನಿ, ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನೆಯಲ್ಲಿ ಹೊಸ ಆವಿಷ್ಕಾರ ಮಾಡಿದೆ.

Advertisement

ಈ ಕಾರಿನ ಹೆಸರು ಶೈನಿ ರೋಡ್‌ಸ್ಟರ್‌. ನ್ಪೋರ್ಟ್ಸ್ ಮಾದರಿಯದ್ದು. ನಾಲ್ವರು ಪ್ರಯಾಣಿಕರಿಗೆ ಇದರಲ್ಲಿ ಅವಕಾಶವುಂಟು. ಇದರ ಗರಿಷ್ಠ ವೇಗ ಗಂಟೆಗೆ 400 ಕಿ.ಮೀ., 1.9 ಸೆಕೆಂಡ್‌ಗಳಲ್ಲಿ ಶೂನ್ಯದಿಂದ 100 ಕಿ.ಮೀ.ವರೆಗೆ ಪಿಕಪ್‌ ತೆಗೆದುಕೊಳ್ಳುತ್ತದೆ. 200 ಕಿ.ವ್ಯಾಟ್‌ ಬ್ಯಾಟರಿ ಹೊಂದಿದ್ದು, ಒಮ್ಮೆ ಚಾರ್ಜ್‌ ಮಾಡಿದ್ರೆ 1000 ಕಿ.ಮೀ.ವರೆಗೆ ಪ್ರಯಾಣಿಸಬಹುದು.  2020ರಲ್ಲಿ ಇದು ಮಾರುಕಟ್ಟೆಗೆ ಬರಲಿದೆ. 

ಚೀನ ಕಾರಿಗೆ ಸಡ್ಡು!: ಎಲೆಕ್ಟ್ರಿಕ್‌ ಕಾರುಗಳ ಹೈ ಸ್ಪೀಡ್‌, ಫಾಸ್ಟ್‌ ಪಿಕಪ್‌ ವಿಚಾರದಲ್ಲಿ ಸದ್ಯಕ್ಕೆ ದಾಖಲೆ ಸ್ಥಾಪಿಸಿರುವುದು ಚೀನದ “ನಿಯೋ ಇಪಿ 9′. ಇದು, ಗಂಟೆಗೆ 310 ಕಿ.ಮೀ. ವೇಗದಲ್ಲಿ ಓಡಬಲ್ಲದು. ಇದರಲ್ಲಿ ಇಬ್ಬರ ಪ್ರಯಾಣಕ್ಕೆ ಮಾತ್ರ ಅವಕಾಶ. ಈ ಎಲ್ಲದರಲ್ಲೂ ರೋಡ್‌ಸ್ಟರ್‌ ಮುಂದಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next