Advertisement

ಜಕ್ರಿಬೆಟ್ಟು ಸಂಪರ್ಕ ರಸ್ತೆ ಕಾಮಗಾರಿಗೆ ವೇಗ

12:22 AM Apr 23, 2019 | Team Udayavani |

ಬಂಟ್ವಾಳ: ಸುದೀರ್ಘ‌ ಅವಧಿ ಮೂವತ್ತು ವರ್ಷಗಳ ಬಳಿಕ ರಾಷ್ಟ್ರೀಯ ಹೆದ್ದಾರಿ ಬಿ.ಸಿ. ರೋಡ್‌ – ಜಕ್ರಿಬೆಟ್ಟು ಸಂಪರ್ಕದ 3.85 ಕಿ.ಮೀ. ಉದ್ದ ರಸ್ತೆ ವಿಸ್ತರಣೆ, ಉದ್ದೇಶಿತ ಕಾಂಕ್ರೀಟು ಕಾಮಗಾ ರಿಗೆ ರಸ್ತೆ ಬದಿ ಮರಗಿಡ ತೆರವು, ರಸ್ತೆ ನೇರ್ಪು, ವಿದ್ಯುತ್‌ ಸಂಪರ್ಕ ಜಾಲದ ಅಡಚಣೆಗಳ ನಿವಾರಣೆಯೊಂದಿಗೆ ವೇಗ ದೊರಕಿದೆ. ಮಳೆಗಾಲಕ್ಕೆ ಮೊದಲು ಬಿ.ಸಿ. ರೋಡ್‌ ಗಾಣದಪಡು³-ಜಕ್ರಿಬೆಟ್ಟು ಹೆದ್ದಾರಿ ಕಾಮಗಾರಿ ಮುಕ್ತಾಯಕ್ಕೆ ಯೋಜಿಸಿದ್ದು, ಕೆಲಸವನ್ನು ಹಂಚಿಕೊಂಡು ಏಕಕಾಲದಲ್ಲಿ ಎಲ್ಲೆಡೆ ನಡೆಯುತ್ತಿದೆ.

Advertisement

14 ಮೀ. ಅಗಲ
ಬಿ.ಸಿ. ರೋಡ್‌ ತಾಲೂಕು ಕೇಂದ್ರವಾ ಗಿದ್ದು, ನಗರ ವಿಸ್ತಾರವು ಬಿ.ಮೂಡ ಗ್ರಾಮದ ಜಕ್ರಿಬೆಟ್ಟು ಮಣಿಹಳ್ಳ ವರೆಗೆ ಇರುವುದರಿಂದ ನಗರ ವ್ಯಾಪ್ತಿ ತನಕ ರಸ್ತೆ ವಿಭಾಜಕ ಸಹಿತ 14 ಮೀ. ಅಗಲದ ಚತುಷ್ಪಥ ಕಾಂಕ್ರೀಟು ನಡೆಯುವುದು. ರಸ್ತೆ ವಿಸ್ತರಣೆ, ಸಮತಟ್ಟು ಕೆಲಸ, ಅಂತಿಮವಾಗಿ ಮಳೆಗಾಲ ಮುಗಿದ ಬಳಿಕ ಕಾಂಕ್ರೀಟು ಕಾಮಗಾರಿ ನಡೆಯುವುದಾಗಿ ಮಾಹಿತಿ ತಿಳಿಸಿದೆ.

ಜಕ್ರಿಬೆಟ್ಟು ಬಳಿಕ 16 ಕಿ.ಮೀ. ಪುಂಜಾಲಕಟ್ಟೆವರೆಗೆ 10 ಮೀ. ಅಗಲದ ವಿಭಾಜಕವಿಲ್ಲದ ದ್ವಿಪಥ ಡಾಮರು ರಸ್ತೆ ನಿರ್ಮಾಣ ಆಗಲಿದೆ. ಪ್ರಥಮ ಹಂತದಲ್ಲಿ ಬಿ.ಸಿ. ರೋಡ್‌- ಪುಂಜಾಲಕಟ್ಟೆವರೆಗಿನ 19.85 ಕಿ.ಮೀ.ರಸ್ತೆಯನ್ನು 157 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ. 4 ಕಿರು ಸೇತುವೆಗಳು, 65 ಮೋರಿಗಳು ಇದರಲ್ಲಿ ಸೇರಿವೆ. ಈ ಮಳೆಗಾಲಕ್ಕೆ ಮೊದಲು 8 ಕಿ.ಮೀ. ಡಾಮರು ರಸ್ತೆ ಸಹಿತ ಭಂಡಾರಿಬೆಟ್ಟು ಕಿರುಸೇತುವೆ, ಜಕ್ರಿಬೆಟ್ಟು ಮಣಿಹಳ್ಳ ಕಿರು ಸೇತುವೆ ಕಾಮಗಾರಿ ಮುಕ್ತಾಯವಾಗಲಿದೆ. 35 ಮೋರಿಗಳನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

ಗುತ್ತಿಗೆ ನಿರ್ವಾಹಕರ ಪ್ರಕಾರ ಮೇ ತಿಂಗಳ ಒಳಗೆ ಇಲ್ಲಿನ ಎರಡು ಸೇತುವೆಗಳು ಪೂರ್ಣಗೊಳ್ಳಲಿವೆ. ಪುಂಜಾಲಕಟ್ಟೆ ಭಾಗದಿಂದ ಈಗಾಗಲೇ ಡಾಮರು ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ರಸ್ತೆ ಬದಿ ಸಮತಟ್ಟು ಕಾಮಗಾರಿ ನಡೆಸಲಾಗುತ್ತಿದೆ. ಮೋರಿಗಳ ನಿರ್ಮಾಣ ಕಾಮಗಾರಿಯನ್ನು ಮಳೆಗಾಲದಲ್ಲಿಯೂ ಮುಂದುವರಿಸಲು ಉದ್ದೇಶಿಸಲಾಗಿದೆ.

ಪ್ರಯೋಜನಕಾರಿ
ಬಂಟ್ವಾಳ ಪುರಸಭೆಯ ವ್ಯಾಪ್ತಿಯಲ್ಲಿ ಹಾದು ಹೋಗುವ ಬೈಪಾಸ್‌ ರಸ್ತೆ ಎಂದೇ ಜನ ಮನ್ನಣೆ ಪಡೆದಿರುವ ಬಿ.ಸಿ. ರೋಡ್‌ – ಜಕ್ರಿಬೆಟ್ಟು ರಸ್ತೆಯ ಕಾಯಕಲ್ಪದಿಂದ ನಗರದ ಅಂದ ಹೆಚ್ಚಲಿದೆ. ರಸ್ತೆ ವಿಸ್ತರಣೆಯಿಂದ ವ್ಯವಹಾರದ ಅವಕಾಶಗಳು ತೆರೆದುಕೊಳ್ಳಲಿವೆ. ಮುಂದಕ್ಕೆ ಪುರಸಭೆ ನಗರ ವಲಯ ಗ್ರಾಮಾಂತರ ವಲಯ ವಿಂಗಡಣೆ ಮೂಲಕ ಸಮಗ್ರ ಅಭಿವೃದ್ಧಿಯ ಚಿಂತನೆ ಇದರ ಹಿಂದಿದೆ. ಸಂಚಾರದ ಅಡಚಣೆ ನಿವಾರಣೆ, ರಸ್ತೆ ಗುಣಮಟ್ಟ ಮೇಲ್ದರ್ಜೆಗೆ, ನಗರ ಸುತ್ತು ಪ್ರದಕ್ಷಿಣೆಗೆ ಯೋಗ್ಯ ರಸ್ತೆಯಾಗಿ ಸೌಲಭ್ಯಗಳನ್ನು ಪಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next