Advertisement

ಕೋವಿಡ್‌ ಪರೀಕ್ಷೆ ತ್ವರಿತಗೊಳಿಸಿ: ಡೀಸಿ ರವಿ

10:11 AM Jul 19, 2020 | Suhan S |

ಚಾಮರಾಜನಗರ: ಕಂಟೈನ್ಮೆಂಟ್‌ ಝೋನ್‌ಗಳಲ್ಲಿ ಗುರುತಿಸಿರುವ ಕೋವಿಡ್‌ ದೃಢೀಕೃತ ವ್ಯಕ್ತಿ ಸಂಪರ್ಕಿತರು ಹಾಗೂ ಇತರೆ ಎಲ್ಲಾ ವಿಶೇಷ ವರ್ಗದವರ ಗಂಟಲು ದ್ರವ ಮಾದರಿ ಪರೀಕ್ಷೆ ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್‌.ರವಿ ಸೂಚಿಸಿದರು.

Advertisement

ಕೋವಿಡ್‌-19 ನಿಯಂತ್ರಣದ ನೋಡಲ್‌ ಅಧಿಕಾರಿಗಳ ಆನ್‌ಲೈನ್‌ ಸಭೆಯಲ್ಲಿ ಮಾತನಾಡಿ, ದೃಢೀಕೃತ ಪ್ರಕರಣಗಳ ಸಂಖ್ಯೆಗೆ ಅನುಗುಣವಾಗಿ ಕಂಟೈನ್ಮೆಂಟ್‌ ಝೋನ್‌ ಗಳು ಇವೆ. ಇಲ್ಲಿನ ಸೋಂಕಿತರ ಸಂಪರ್ಕಕ್ಕೆ ಬರಬಹುದಾದ ವ್ಯಕ್ತಿಗಳ ಗಂಟಲು ದ್ರವ ಮಾದರಿ ಸಂಗ್ರಹಿಸ ಬೇಕು. ಪರೀಕ್ಷೆ ನಡೆಸಿ ಶೀಘ್ರ ವರದಿ ನೀಡಬೇಕು ಎಂದರು.

ಗಂಟಲು ದ್ರವ ಮಾದರಿ ಕೇಂದ್ರಗಳಲ್ಲಿ ಪ್ರತಿದಿನ ಎಷ್ಟು ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗುತ್ತಿದೆ? ಪ್ರಯೋಗಾಲಯಕ್ಕೆ ಗಂಟಲು ದ್ರವ ಮಾದರಿ ತಲುಪಿದೆಯೇ ಎಂಬ ಬಗ್ಗೆ ಸಂಬಂಧಪಟ್ಟ ನೋಡಲ್‌ ಅಧಿಕಾರಿ ಖಚಿತ ಪಡಿಸಿಕೊಳ್ಳಬೇಕು. ಪರೀಕ್ಷೆಗೆ ಒಳಪಡಿಸಿರುವ ಬಗ್ಗೆ ಪರಿಶೀಲಿಸಬೇಕು. ಕೋವಿಡ್‌ ಸೆಂಟರ್‌, ಆಸ್ಪತ್ರೆಯಲ್ಲಿ ಗುಣಮಟ್ಟದ ಊಟ ಉಪಹಾರಕ್ಕೆ ಕೊರತೆ ಬರದಂತೆ ಗಮನಹರಿಸಬೇಕು. ಇತರೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಯಾವುದೇ ಲೋಪಕ್ಕೆ ಅವಕಾಶವಾಗದಂತೆ ಎಚ್ಚರವಹಿಸ ಬೇಕು ಎಂದರು.

ಎಡೀಸಿ ಆನಂದ್‌, ಎಎಸ್ಪಿ ಅನಿತಾ ಬಿ. ಹದ್ದಣ್ಣನವರ್‌, ಎಸಿ ನಿಖೀತಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ.ಸಿ.ರವಿ, ಜಿಲ್ಲಾ ಸರ್ವೆಲೆನ್ಸ್‌ ಅಧಿಕಾರಿ ಡಾ.ನಾಗರಾಜು, ವೈದ್ಯಕೀಯ ಕಾಲೇಜಿನ ಡೀನ್‌ ಡಾ.ಸಂಜೀವ್‌ ಇತರೆ ನೋಡೆಲ್‌ ಅಧಿಕಾರಿಗಳು ಭಾಗವಹಿಸಿದ್ದರು.

ರ್ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ ಕಿಟ್‌ ಬಳಕೆ :  ಕಂಟೈನ್ಮೆಂಟ್‌ ಝೋನ್‌ಗಳಲ್ಲಿ ಯಾವುದೇ ಸಮಸ್ಯೆ ಕಂಡುಬರದಂತೆ ಕಾರ್ಯನಿರ್ವಹಿಸಬೇಕು. ಇನ್ಸಿಡೆಂಟ್‌ ಕಮಾಂಡರ್‌ಗಳು ಭೇಟಿ ನೀಡಿ ಅಗತ್ಯ ಔಷಧ, ದೈನಂದಿನ ವಸ್ತುಗಳು ಒದಗಿಸುತ್ತಿರುವ ಬಗ್ಗೆ ಪರಿಶೀಲಿಸಬೇಕು. ಹೆಚ್ಚಿನ ಸಹಾಯಕ್ಕಾಗಿ ಗ್ರಾಮ, ನಗರ, ಸ್ಥಳೀಯ ಸಂಸ್ಥೆಯಲ್ಲಿ ರಚಿಸಿರುವ ಟಾಸ್ಕ್ ಫೋರ್ಸ್‌ ಸಹಕಾರ ಪಡೆಯಬೇಕು. ಕೋವಿಡ್‌ -19ರ ಪ್ರಕರಣ ಶೀಘ್ರ ಪತ್ತೆಹಚ್ಚಲು ಒಂದು ಸಾವಿರ ರ್ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ ಕಿಟ್‌ ನೀಡಲಾಗಿದೆ. ಮನೆಮನೆಗೆ ತೆರಳಿ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವಂತೆ ತುರ್ತು ಪ್ರಕರಣಗಳಿಗೆ ರ್ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ ಕಿಟ್‌ ಮೂಲಕ ಪರೀಕ್ಷೆಗೆ ಒಳಪಡಿಸಬೇಕು. ಐಎಲ್‌ಐ ಸಾರಿ ಪ್ರಕರಣಗಳು ವಿಶೇಷ ವರ್ಗದ ಆರೋಗ್ಯ ಕಾಳಜಿ ವ್ಯಕ್ತಿಗಳಿಗೆ ಟೆಸ್ಟ್‌ ಕಿಟ್‌ ಬಳಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ರವಿ ತಿಳಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next