ಕಾಂಗ್ರೆಸ್‌ಗೆ ಎದುರಾಗಿ ಜನಸಂಘ ಬೆಳೆಯುತ್ತಿದ್ದ ಕಾಲ. ಜನಸಂಘದಿಂದ 1957, 62, 67, 72ರಲ್ಲಿ ಸ್ಪರ್ಧಿಸಿ ಸೋತಿದ್ದೇನೆ. ಜನತಾ ಪಾರ್ಟಿಯಿಂದ ಪ್ರಥಮ ಬಾರಿಗೆ ಕಾಂಗ್ರೆಸೇತರ ಶಾಸಕನಾಗಿ 1978 ಮತ್ತು 1983ರಲ್ಲಿ ಗೆದ್ದಿದ್ದೇನೆ. 1984ರಲ್ಲಿ ಲೋಕಸಭೆಗೆ ಸ್ಪರ್ಧಿಸಿ ಸೋತು, 1985 ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿ ಸೋತಿದ್ದೇನೆ. ಬಳಿಕ ವಿರಾಮ ಪಡೆದು 1999ರಲ್ಲಿ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದೇನೆ.
Advertisement
ರಾಜಕೀಯ ಸವಾಲು ಮತ್ತು ಬೆಳವಣಿಗೆ ಹೇಗಿತ್ತು?ಆ ಕಾಲದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆಯ ಕಾಂಗ್ರೆಸೇತರ ಪಕ್ಷವನ್ನು ಬೆಳೆಸುವ ಪ್ರಮುಖ ಉದ್ದೇಶ ದಿಂದಲೇ ಅಷ್ಟೂ ಬಾರಿ ಸ್ಪರ್ಧಿಸಿದ್ದೆ. ಮಂಗಳೂರಿನಲ್ಲಿ ಪ್ರಬಲವಾಗುತ್ತಿದ್ದ ಕಮ್ಯೂನಿಸ್ಟ್ ಪಕ್ಷ, ಭೂ ಸುಧಾರಣೆಯ ಪರ -ವಿರೋಧ, ಜನಸಂಘವು ಬ್ರಾಹ್ಮಣರ ಪಕ್ಷ ಎನ್ನುವ ವಿರೋಧದ ನಡುವೆ ರಾಜಕೀಯ ಅಸ್ತಿತ್ವ, ಬೆಳವಣಿಗೆ ಸವಾಲಾಗಿತ್ತು. ಆಗ ಜನರ ಹೃದಯ ಪ್ರವೇಶಿಸಲು ಸಾಕಷ್ಟು ಪ್ರಯತ್ನ ನಡೆಸಬೇಕಿತ್ತು. ನಮ್ಮಂಥವರು ಹಳ್ಳಿಹಳ್ಳಿಗಳಲ್ಲಿ ನಡೆಸಿದ ಯತ್ನ ಇಂದು ಫಲ ನೀಡುತ್ತಿದೆ.
ಆಗಲೂ 10-15 ಸಾವಿರ ರೂ. ಖರ್ಚಾಗುತ್ತಿತ್ತು. ಸ್ಪರ್ಧಿಸುವ ಸಂದರ್ಭ ಹಿತಚಿಂತಕರೇ ಸಹಾಯ ಮಾಡುತ್ತಿದ್ದರು. ನನ್ನ ಕಾರನ್ನು ಪ್ರಚಾರಕ್ಕೆ, ಜನರ ಬಳಿಗೆ ಹೋಗಲು ಬಳಸುತ್ತಿದ್ದೆ. ಬಹಿರಂಗ ಸಾರ್ವಜನಿಕ ಸಭೆಯೂ ನಡೆಯುತ್ತಿತ್ತು. ಆಗ ಈಗಕ್ಕೆ ಇರುವ ವ್ಯತ್ಯಾಸವೇನು ?
ಆಗ ರಾಜಕೀಯಕ್ಕೆ ಮತ್ತು ಸ್ಪರ್ಧಿಸುವವರಲ್ಲಿ ಒಂದು ಸಿದ್ಧಾಂತ ಇತ್ತು. ಜನಸಂಘ, ಜನತಾ ಪಕ್ಷ ಹಾಗೂ ಬಿಜೆಪಿ ಆ ನೆಲೆಯಲ್ಲಿ ಕಾರ್ಯನಿರ್ವಹಿಸಿದ್ದರಿಂದ ಮತ್ತು ಅಂದು ಅನೇಕ ಮುಖಂಡರು ತೋರಿದ ಶ್ರಮ ಇಂದು ಗೆಲುವಿನ ರೂಪದಲ್ಲಿದೆ. ಇಂದು ಒಟ್ಟು ರಾಜಕೀಯ ವ್ಯವಸ್ಥೆಯಲ್ಲಿ ಸ್ವಹಿತಾಸಕ್ತಿಗೆ ಹೆಚ್ಚಿನ ಪ್ರಾಮುಖ್ಯ ಇದೆ. ಇಡೀ ಸಮಾಜದಲ್ಲಿ ಮೌಲ್ಯಾಧಾರಿತ ರಾಜಕಾರಣ ಕಡಿಮೆಯಾಗುತ್ತಿದೆ.
Related Articles
ನಾನು ಶಾಸಕನಾಗಿದ್ದ ಸಮಯದಲ್ಲಿ ಸರಕಾರದಿಂದ ಸಾಕಷ್ಟು ಫಂಡ್ ಸಿಗುತ್ತಿರಲಿಲ್ಲ. ಆದರೂ ಅಭಿವೃದ್ಧಿಯ ದೃಷ್ಟಿಯಿಂದ ಅನೇಕ ಕಾಮಗಾರಿಗಳನ್ನು ನಡೆಸಿದ್ದೇನೆ. ಪುತ್ತೂರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದು ಇದರಲ್ಲಿ ಪ್ರಮುಖವಾದುದು.
Advertisement
ರಾಜಕೀಯ ಜೀವನದ ಬಗ್ಗೆ ತೃಪ್ತಿ ಇದೆಯೇ ?ರಾಜಕೀಯದ ಎಲ್ಲ ಪಟ್ಟುಗಳಲ್ಲಿ ತೊಡಗಿಸಿಕೊಂಡು ನೈಜ ಜಾತ್ಯತೀತ ನೆಲೆಯಲ್ಲಿ ಕೆಲಸ ಮಾಡಿದ, ರಾಷ್ಟ್ರೀಯತೆಯ ಪರಿಕಲ್ಪನೆಗಾಗಿ ಹೋರಾಟ ನಡೆಸಿದ ಖುಷಿ ಇದೆ. ಈ ನಿಟ್ಟಿನಲ್ಲಿ ಹಂತ ಹಂತವಾಗಿ ಯಶಸ್ಸು ಪಡೆದ ತೃಪ್ತಿ ಇದೆ. ರಾಜೇಶ್ ಪಟ್ಟೆ