ಹನುಮಸಾಗರ: ಬೇವಿನ ಮರದಿಂದ ಹಾಲು ಸೋರುತ್ತಿದ್ದು, ಜನಮರುಳೋ ಜಾತ್ರೆ ಮರುಳೋ ಎಂಬಂತೆ ಮರಕ್ಕೆ ಪೂಜೆ ಸಲ್ಲಿಸುತ್ತಿರುವುದು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಅಂಠರಟಾಣ ಗ್ರಾಮ ಪಂಚಾಯತ ವ್ಯಾಪ್ತಿಯ ಪೂರ್ತಗೇರಿ ಗ್ರಾಮದ ರೈತರೊಬ್ಬರ ಜಮಿನಿನಲ್ಲಿರುವ ಬೇವಿನ ಮರದಲ್ಲಿ ಬಿಳಿ ಹಾಲು ಜಿನುಗುತ್ತಿರುವುದನ್ನು ಜನತೆ ಪವಾಡವೆಂದೇ ನಂಬುತ್ತಿದ್ದಾರೆ.
ಸ್ಥಳೀಯ ಸ್ವಾಮಿಗಳ ಸೂಚನೆಯ ಮೇರಿಗೆ ಪ್ರತಿ ಶುಕ್ರವಾರ ವಿಶೇಷ ಪೂಜೆ : ಕಳೆದ 15 ದಿನಗಳಿಂದ ನಿರಂತರವಾಗಿ ರೈತ ನಿಂಗಪ್ಪ ವಜ್ಜಲ ಇವರ ಜಮೀನಿನಲ್ಲಿರುವ ಬೇವಿನ ಮರದಿಂದ ಹಾಲಿನಂತ ನೊರೆ ಬರುತ್ತಿದ್ದು ಈ ನೊರೆ ಮೊದಲು ಮರದ ಮೇಲ್ಬಾಗದಿಂದ ಸುರಿಯುತ್ತಿತ್ತು ಬಳಿಕ ಕ್ರಮೇಣ ಮರದ ಮದ್ಯಭಾಗದಿಂದ ಬರುತ್ತಿದೆ ಇದರಿಂದ ಆತಂಕಗೊಂಡ ಸ್ಥಳಿಯ ಸ್ವಾಮಿಜಿಯವರನ್ನು ಕರೆ ತಂದು ತೊರಿಸಿದಾಗ ಅವರು ದೇವರ ಪವಾಡ ಇದು ನೀವು ಪ್ರತಿ ದಿನವಲ್ಲದೇ ಹೋದರು ಕೊನೆ ಪಕ್ಷ ಪ್ರತಿ ಶುಕ್ರವಾರಕ್ಕೊಮ್ಮ ವಿಶೇಷ ಪೂಜೆ ಸಲ್ಲಿಸಿ ವಿಶೇಷ ಪೂಜೆ ಮಾಡಿ ನಮಗೆ ಯಾವೂದೇ ಕೇಡು ಆಗದೇ ನಮ್ಮ ಇಷ್ಟಾರ್ಥ ನೇರವೇರಲಿ ಪ್ರಾರ್ಥಿಸಿಕೊಳ್ಳಿ ಎಂದು ಸೂಚಿಸಿದ ಹಿನ್ನಲೆಯಲ್ಲಿ ನಾವೂ ಗಿಡಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಿದ್ದೇವೆ .
ಆತಂಕದಲ್ಲಿ ಜಮೀನಿನ ರೈತ : ಕಳೆದ 15 ದಿನಗಳಿಂದ ಬೇವಿನ ಮರದಿಂದ ಹಾಲಿನ ನೊರೆ ಬರುವುದು ಮಾತ್ರ ನಿಲ್ಲದಿರುವುದು ನಿಜಕ್ಕೂ ನಮ್ಮಲ್ಲಿ ಭಯ ಆವರಿಸಿದೆ ಯಾರಿಗೆ ಇದನ್ನು ತೊರಿಸಬೇಕು ಎನ್ನುವ ಚಿಂತೆ ಕಾಡುತ್ತಿದೆ ಮತ್ತು ಇದನ್ನು ನೊಡಲು ಗ್ರಾಮದವರು ಹಾಗೂ ಸುತ್ತಮುತ್ತಲಿನವರು ಪ್ರತಿದಿನ ನಮ್ಮ ಹೊಲಕ್ಕೆ ಬಂದುಹೋಗುತ್ತರೆ ಎಂದು ಆತಂಕದಿಂದ ಹೇಳಿದರು.
ಬಾಟಲಿಯಲ್ಲಿ ಹಾಲಿನ ನೊರೆ : ಕೆಲವರು ಬೆವಿನ ಮರದಿಂದ ಬೀಳುವ ಹಾಲಿನ ನೊರೆಯನ್ನು ಬಾಟಲಿಯಲ್ಲಿ ಪ್ರಸಾದದಂತೆ ತುಂಬಿಸಿಕೊಂಡು ಹೊಗುತ್ತಾರೆ ಮತ್ತು ಅವರನ್ನು ಕೇಳಿದರೆ ನಮಗೆ ಔಷದಿಗೆ ಬೇಕು ಎಂದು ಹೇಳುತ್ತಿರುವುದು ನಮಗೆ ಮತ್ತಷ್ಟು ಭಯ ಮೂಡಿಸಿದೆ ಎನ್ನುತ್ತಾರೆ ರೈತ ನಿಂಗಪ್ಪ ವಜ್ಜಲ
ಬೇವಿನ ಮರದಲ್ಲಿ ರಸಾಯಣಿಕ ಕ್ರೀಯೆಯಿಂದಾಗಿ ಗಿಡಗಳಿಗೆ ಗಾಯವಾದಾಗ ಬಿಳಿ ದ್ರವ ಸುರಿಯೋದು ಸಹಜ ಆದರೇ ಜನ ಮಾತ್ರ ಇದನ್ನು ತಿಳಿಯದೇ ದೇವರು ಮುನಿಸಿಕೊಂಡಿದ್ದನೆ ಎಂದು ನಂಬಿ ಗಿಡಗಳಿಗೆ ಪೂಜೆ, ಪುನಸ್ಕಾರಗಳನ್ನು ಮಾಡುತ್ತಿರುವುದು ವಿಪರ್ಯಾಸ ಮತ್ತು ನಾನು ಹೊಲಕ್ಕೆ ಬೇಟಿ ನೀಡಿ ರೈತನಿಗೆ ತಿಳಿ ಹೇಳುತ್ತೇನೆ.
-ಶಿವಶಂಕರ ರ‍್ಯಾವಣಿಕಿ ಉಪ ವಲಯ ಅರಣ್ಯಾಧಿಕಾರಿ ಕುಷ್ಟಗಿ.