Advertisement

ವೆಂಕಟರಮಣನಿಗೆ ವಿಶೇಷ ಪೂಜೆ

12:25 PM Dec 19, 2018 | Team Udayavani |

ಕೆ.ಆರ್‌.ಪುರ: ವೈಕುಂಠ ಏಕಾದಶಿ ಪ್ರಯುಕ್ತ ಕೆ.ಆರ್‌.ಪುರದ ವಿವಿಧಡೆ ದೇವಸ್ಥಾನಗಳಲ್ಲಿ ಮುಂಜಾನೆಯಿಂದಲೆ ವಿಶೇಷ ಪೂಜೆ ಕೈಂಕರ್ಯಗಳು ನೇರವೆರಿದವು. ದೇಗುಲಕ್ಕೆ ಬೆಳಗಿನ ಚಳಿಯನ್ನು ಲೆಕ್ಕಿಸದೆ ನಾನಾ ಕಡೆಗಳಿಂದ ಭಕ್ತ ಸಾಗರ ಹರಿದುಬಂದಿತ್ತು.

Advertisement

ಇಲ್ಲಿನ ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ಇತಿಹಾಸ ಪ್ರಸಿದ್ಧ ಶ್ರೀಕೋಟೆ ವೆಂಕಟರಮಣಸ್ವಾಮಿ ಹಾಗೂ ನೂರಾರು ವರ್ಷಗಳ ಇತಿಹಾಸ ಹೊಂದಿರುವ  ರಾಮಮೂರ್ತಿನಗರದ ಲಕ್ಷ್ಮೀವೆಂಕಟೇಶ್ವರ ದೇವಸ್ಥಾಗಳಲ್ಲಿ ವೈಕುಂಠ ಏಕಾದಶಿಯ ಅಂಗವಾಗಿ ದೇವರಿಗೆ ಮುಂಜಾನೆಯೇ ವಿಶೇಷ ಪೂಜೆ, ಪಂಚಾಮೃತಾಭಿಷೇಕ, ಹೂವಿನ ಅಲಂಕಾರ, ದೇವರಿಗೆ ಕವಚಧಾರಣೆ, ಅಷ್ಟಾವಧಾನ ಸೇವೆ, ಶಾತ್ತುಮೊರೆ,ಮಹಾ ಮಂಗಳಾರತಿ ನಡೆಸಲಾಯಿತು.

ಶ್ರೀಕೋಟೆ ವೆಂಕಟರಮಣಸ್ವಾಮಿ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷ ಎಲ್‌. ಮುನಿಸ್ವಾಮಿ ಮಾತನಾಡಿ, ವೈಕುಂಠ ಏಕಾದಶಿ ಪ್ರಯುಕ್ತ ಮಹಾವಿಷ್ಣು ಉತ್ತರ ದ್ವಾರದ ಮೂಲಕ ಮುಕ್ಕೊಟಿ ದೇವತೆಗಳಿಗೆ ದರ್ಶನ ನೀಡುತ್ತಾನೆ ಎನ್ನುವ ನಂಬಿಕೆ ಇದೆ. ವೈಕುಂಠ ಬಾಗಿಲನ್ನು ಸ್ವರ್ಗದ ಬಾಗಿಲು ಎಂದು ಕರೆಯಲಾಗುತ್ತದೆ ಆದ್ದರಿಂದ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಮಾಡಲಾದ ಏಳು ಮಹಾದ್ವಾರಗಳ ಮೂಲಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ವಿವಿಧ ಕಡೆಗಳಿಂದ ದೇಗುಲಕ್ಕೆ ಆಗಮಿಸಿದ್ಧ ಭಕ್ತರು ಭಕ್ತರು ಸರತಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಭಕ್ತಾದಿಗಳಿಗೆ ಮಜ್ಜಿಗೆ, ಪಾನಕ ಹಾಗೂ ಲಾಡುಗಳನ್ನು ವಿತರಿಸಲಾಯಿತು. ಕೀರ್ತನೆ, ಭಜನೆ ಸೇರಿದಂತೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Advertisement

Udayavani is now on Telegram. Click here to join our channel and stay updated with the latest news.

Next