Advertisement

ಮಳೆಗಾಗಿ ಬೋರ್ಗಲ್‌ಗೆ ನೀರು ಸುರಿದು ಪೂಜೆ

02:28 PM Jul 05, 2020 | Suhan S |

ಬ್ಯಾಡಗಿ: “ಬೋರ್ಗಲ್‌ ಮೇಲೆ ನೀರು ಸುರಿದಂತೆ’ ಎಂದು ನಿರರ್ಥಕ ಕೆಲಸಗಳಿಗೆ ಬಳಸುವ ವಾಕ್ಯವೊಂದಿದೆ. ಆದರೆ ಸಕಾಲಕ್ಕೆ ಮಳೆಯಾಗದೇ ಪಟ್ಟಣದ ರೈತರು ಶನಿವಾರ ಕೆಸಿಸಿ ಬ್ಯಾಂಕ್‌ ಬಳಿಯಿರುವ ಬೋರ್ಗಲ್‌ಗೆ ನೀರು ಸುರಿದು ಪೂಜೆ ಸಲ್ಲಿಸಿದ ಪ್ರಸಂಗ ನಡೆದಿದೆ.

Advertisement

ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ಆರ್ಭಿಟಿಸಿದ್ದ ಮಳೆ ಮೇ ಮತ್ತು ಜೂನ್‌ ತಿಂಗಳಲ್ಲಿ ಬಿತ್ತನೆಗೆ ಚಾಲನೆ ನೀಡಿತ್ತು. ಆದರೆ ಬಿತ್ತನೆ ಕಾರ್ಯ ಮುಗಿದ ಬಳಿಕ ಮುಂಗಾರು ಕೈ ಕೊಟ್ಟ ಹಿನ್ನೆಲೆಯಲ್ಲಿ ತಾಲೂಕಿನ ರೈತರು ಕಾಂಗಾಲಾಗಿದ್ದರು. ಬಿತ್ತನೆ ಬೀಜ ಅರ್ಧ ಹಸಿಯಿಂದ ಮೊಳಕೆಯೊಡೆಯದೇ ಹಾಗೆಯೇ ಉಳಿದಿದ್ದು, ಇಂತಹ ಸಂದರ್ಭದಲ್ಲಿ ಮಳೆ ಕೈಕೊಟ್ಟಲ್ಲಿ ಬಹಳ ತೊಂದರೆ ಎದುರಿಸಬೇಕಾಗುತ್ತದೆ. ಇದರಿಂದ ಮುಂದೆ ಒಂದು ವೇಳೆ ಮಳೆಯಾದರೂ ಸಹ ಹುಟ್ಟುವ ಬೀಜ ತನ್ನ ಎಂದಿನ ಶಕ್ತಿ ಕಳೆದುಕೊಳ್ಳುತ್ತದೆ. ಹೀಗಾಗಿ ಜೂನ್‌ ತಿಂಗಳು ಕಳೆದ ಬಳಿಕ ಮಳೆಗಾಗಿ ದೇವರ ಪ್ರಾರ್ಥನೆ ಅನಿವಾರ್ಯವಾಗಿತ್ತು. ಪಟ್ಟಣದ ಬಾಲಮುತ್ತೆ$çದೆಯರು ಪಟ್ಟಣದ ಹೊಂಡದಲ್ಲಿನ 101 ಬಿಂದಿಗೆಗಳಲ್ಲಿ ನೀರು ತಂದು ಬೋರ್ಗಲ್‌ (ಚತುರ್ಮುಖ ಬ್ರಹ್ಮ) ದೇವರಿಗೆ ಅಭಿಷೇಕ ಮಾಡಿದರು. ಇದರಿಂದ ಈ ಪೂಜಾ ವಿಧಾನದ ಬಳಿಕ ಸಂಜೆ ಸಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು ಕಾಕತಾಳೀಯ. ಕೃಷಿಕ ಸಮಾಜದ ಅಧ್ಯಕ್ಷ ಗಂಗಣ್ಣ ಎಲಿ, ರೈತ ಮುಖಂಡರಾದ ಚಿಕ್ಕಪ್ಪ ಛತ್ರದ, ಎಂ.ಆರ್‌. ಭದ್ರಗೌಡ್ರ, ಅಶೋಕ ಮಾಳೇನಹಳ್ಳಿ, ಶಂಕರಪ್ಪ ಬಿದರಿ, ಬಸವರಾಜ ಸಂಕಣ್ಣನವರ ಇನ್ನಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next