Advertisement

ಶಾಸಕರಿಗೆ ಕೋವಿಡ್‌: ವಿಶೇಷ ಪೂಜೆ

12:35 PM Sep 09, 2020 | Suhan S |

ಮಾಲೂರು: ಕೋವಿಡ್ ಸೋಂಕಿಗೆ ಒಳಗಾಗಿರುವ ಶಾಸಕ ಕೆ.ವೈ.ನಂಜೇಗೌಡ ಹಾಗೂ ಕುಟುಂಬ ವರ್ಗದವರು ಶೀಘ್ರ ಗುಣಮುಖರಾಗಲಿ ಎಂದು ತಾಲೂಕು ಕಾಂಗ್ರೆಸ್‌ನಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

Advertisement

ಪಟ್ಟಣದ ಶಕ್ತಿ ದೇವತೆ ಮಾರಿಕಾಂಬ ದೇವಿ ದೇಗುಲದಲ್ಲಿ ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಏರ್ಪಡಿಸಿದ್ದ ವಿಶೇಷ ಪೂಜೆಯಲ್ಲಿ ಮಾತನಾಡಿದಮಾಸ್ತಿ ಬ್ಲಾಕ್‌ನ ಅಧ್ಯಕ್ಷ ಟಿ.ಮುನಿಯಪ್ಪ, ವಾರದಿಂದ ಶಾಸಕ ನಂಜೇಗೌಡ, ಅವರ ಕುಟುಂಬದ ಆರು ಸದಸ್ಯರಿಗೆ ಕೊರೊನಾ ಪಾಸಿಟಿವ್‌ ಬಂದಿರುವ ಕಾರಣ, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಶೀಘ್ರಗುಣಮುಖರಾಗುವ ಮೂಲಕ ತಾಲೂಕಿನ ಜನರ ಸೇವೆಗೆ ಸಿದ್ಧರಾಗಲಿ ಎಂದು ಹೇಳಿದರು.

ತಾಲೂಕಿನ ಜನತೆ ತುರ್ತು ಸೇವೆಗಳಿಗೆ ದೂರವಾಣಿಮೂಲಕವೇ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಸೂಚಿಸುತ್ತಿರುವ ಶಾಸಕರು, ಶೀಘ್ರ ಗುಣಮುಖರಾಗಿ, ತಾಲೂಕಿನ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಇದರಿಂದ ಮಾಲೂರು ಪಟ್ಟಣದ ಶಕ್ತಿ ದೇವತೆ ಮಾರಿಕಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, 101 ತೆಂಗಿನ ಕಾಯಿ ಹೊಡೆಯುವ ಕಾರ್ಯ ಮಾಡಲಾಯಿತು ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಮೈಲಾಂಡಹಳ್ಳಿ ನಾರಾಯಣ ಸ್ವಾಮಿ, ಸಂತೇಹಳ್ಳಿ ನಾರಾಯಣಸ್ವಾಮಿ, ಅಂಜನಿ ಸೋಮಣ್ಣ, ವಿಜಯನರಸಿಂಹ, ಅಶ್ವತ್‌ರೆಡ್ಡಿ, ಮಹಾ ಲಕ್ಷ್ಮೀ ಮತ್ತಿತರರು ಇದ್ದರು.

………………………………………………………………………………………………………………………………………………………

Advertisement

ಕೊಂಡರಾಜನಹಳ್ಳಿ: ವಿಶ್ವ ಸಾಕ್ಷರತಾ ದಿನ : ಕೋಲಾರ: ಕೊಂಡರಾಜನಹಳ್ಳಿ ಪಂಚಾಯ್ತಿಯು 2 ಎಕರೆ ಜಮೀನು ನೀಡಿದರೆ ರಾಜ್ಯಮಟ್ಟದ ಸೇವಾದಳ ತರಬೇತಿ ಕೇಂದ್ರವನ್ನು ನಿರ್ಮಾಣ ಮಾಡಲಾಗುವುದು ಎಂದು ಸೇವಾದಳ ಕಾರ್ಯದರ್ಶಿ ಎಸ್‌.ಸುಧಾಕರ್‌ ಹೇಳಿದರು.

ನಗರದ ಕೊಂಡರಾಜನಹಳ್ಳಿ ಪಂಚಾಯ್ತಿ ಕಚೇರಿಯಲ್ಲಿ ಮಂಗಳವಾರ ಭಾರತ ಸೇವಾದಳ, ಕೋಲಾರ ರೋಟರಿ ಸೆಂಟ್ರಲ್‌ ಹಾಗೂ ಗ್ರಾಪಂ ಆಯೋಜಿಸಿದ್ದ ವಿಶ್ವ ಸಾಕ್ಷರತಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಿಡಿಒ ಬೈರಾರೆಡ್ಡಿ ಮಾತನಾಡಿ, ಪಂಚಾಯ್ತಿಯು ಸೇವಾದಳ ಹಾಕಿಕೊಟ್ಟ ಆದರ್ಶವನ್ನು ಪಾಲಿಸುತ್ತ, ಮುಂದಿನ ವರ್ಷ ಪಂಚಾಯ್ತಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಗುವುದು ಎಂದು ಘೋಷಿಸಿದರು. ಈ ವೇಳೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸೇವಾದಳ ಜಿಲ್ಲಾ ಉಪಾಧ್ಯಕ್ಷ ಜಿ.ಶ್ರೀನಿವಾಸ್‌, ಕೋಲಾರ ಜಿಲ್ಲಾ ಡ್ರೈವಿಂಗ್‌ ಶಾಲೆ ಮಾಲಿಕರ ಸಂಘದ ಅಧ್ಯಕ್ಷ ಆರ್‌.ಗೋಪಾಲ್‌, ಗ್ರಾಪಂ ಮಾಜಿ ಉಪಾಧ್ಯಕ್ಷ ಶ್ರೀನಿವಾಸ್‌, ಮಾಲೂರು ಸೇವಾದಳ ಅಧ್ಯಕ್ಷ ಬಹಾದ್ದೂರ್‌, ಶ್ರೀನಿವಾಸಪುರ ಅಧ್ಯಕ್ಷ ಬಂಗವಾದಿ ನಾಗರಾಜ್‌,

ಸಂಘಟಕ ದಾನೇಶ್‌, ತಾಲೂಕು ಕಾರ್ಯದರ್ಶಿ ಶ್ರೀರಾಮ್‌, ಗ್ರಾಪಂ ಕಾರ್ಯದರ್ಶಿ ನಾರಾಯಣಸ್ವಾಮಿ, ಬಿಲ್‌ಕಲೆಕ್ಟರ್‌ ಶ್ರೀನಿವಾಸ್‌, ಮಾಜಿ ಸದಸ್ಯರಾದ ಚಲಪತಿ, ಕುಮಾರ್‌, ಸತೀಶ್‌, ವೆಂಕಟೇಶ್‌ ಇತರರು ಹಾಜರಿದ್ದರು.ಕೊಂಡರಾಜನಹಳ್ಳಿ ಮಂಜುಳ ಕಾರ್ಯಕ್ರಮ ನಿರೂಪಿಸಿ, ಅಂಕಿತರೊಂದಿಗೆ ಆಶಯ ಗೀತೆಗಳನ್ನು ಹಾಡಿದರು. ಸರ್ವಧರ್ಮ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮ ರಾಷ್ಟ್ರಗೀತೆ ಗಾಯನದೊಂದಿಗೆ ಮುಕ್ತಾಯಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next