Advertisement
ತನಗೆ ಸಜ್ಜನ, ಶ್ರೀರಾಮಚಂದ್ರನಂಥ ಪತಿ ಬೇಕೆಂದು ಪ್ರತಿ ಹೆಣ್ಣು ಮಗಳು ವ್ರತ ಆಚರಣೆ ಮಾಡುತ್ತಾರೆ. ಆದರೆ, ಚಿಕ್ಕೋಡಿ ಪಟ್ಟಣದ ಪುರುಷ ಸಾಂತ್ವನ ಕೇಂದ್ರದ ಮುಖ್ಯಸ್ಥ ಶಶಿಧರ ರಾಮಚಂದ್ರ ಕೋಪರ್ಡೆ ಮಾತ್ರ ತನ್ನ ಪತ್ನಿಯ ಕಾಟ ತಾಳದೇ ಇನ್ನೆಂದೂ ನನಗೆ ಮದುವೆನೇ ಬೇಡ. ಹೆಂಡತಿ ಕಾಟದಿಂದ ಮುಕ್ತಿ ಸಿಗಲಿ ಎಂದು ವಟ ಸಾವಿತ್ರಿ ಹುಣ್ಣಿಮೆ ಅರ್ಥಾತ್ ಕಾರ ಹುಣ್ಣಿಮೆ ನಿಮಿತ್ತ ಅತ್ತಿ ಗಿಡಕ್ಕೆ ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಿದ್ದಾನೆ. ಒಂದು ವೇಳೆ ಮುಂದಿನ ಜನ್ಮದಲ್ಲಿ ಕಂಕಣ ಭಾಗ್ಯ ಕೂಡಿ ಬಂದರೂ ತೊಂದರೆ ಕೊಡುವ ಹೆಂಡತಿ ಮಾತ್ರ ಕೊಡಬೇಡಪ್ಪ ದೇವರೇ ಎಂದು ಬೇಡಿಕೊಂಡಿದ್ದಾನೆ. ಪ್ರತಿ ವರ್ಷ ಕಾರ ಹುಣ್ಣಿಮೆ ಮುನ್ನಾ ದಿನ ಮಹಿಳೆಯರು ತನ್ನ ಗಂಡನಿಗೆ ಆಯುಷ್ಯ, ಆರೋಗ್ಯ ದೊರೆಯಲಿ ಎಂದು ಅತ್ತಿ ಗಿಡಕ್ಕೆ ಪೂಜೆ ಮಾಡಿ ಪ್ರದಕ್ಷಿಣೆ ಹಾಕಿ ಗಿಡಕ್ಕೆ ದಾರ ಕಟ್ಟುತ್ತಾರೆ.
ಪೂಜೆ ಮಾಡಿ ದೇವರಲ್ಲಿ ಬೇಡಿಕೊಳ್ಳುತ್ತಾರೆ. ಆದರೆ ಶಶಿಧರ ಕೋಪರ್ಡೆಮಾತ್ರ ಈ ಜನ್ಮದಲ್ಲಿ ತನ್ನ ಹೆಂಡತಿ ತನಗೆ ಹಾಗೂ ತನ್ನ ತಂದೆ, ತಾಯಿ, ಅಕ್ಕ, ತಂಗಿ, ಅಣ್ಣ, ತಮ್ಮಂದಿರ ಮೇಲೆ ಸುಳ್ಳು ವರದಕ್ಷಿಣೆ ಪ್ರಕರಣ ದಾಖಲಿಸಿ ತೊಂದರೆ ಕೊಟ್ಟಿದ್ದಾಳೆ. ಇಂತಹ ಪತ್ನಿ ಮುಂದಿನ ಜನ್ಮದಲ್ಲಿ ಬೇಡ ಎಂದು ಮಹಿಳೆಯರ ವಿರುದ್ಧವಾಗಿ ಅತ್ತಿ ಗಿಡಕ್ಕೆ ಪೂಜೆ ಸಲ್ಲಿಸಿದ್ದಾನೆ. ಮುಂದಿನ ಜನ್ಮದಲ್ಲಿ ನನ್ನ ಮದುವೆ ಆಗದೇ ಕುಮಾರನಾಗಿ ಬದುಕಿದರೂ ಚಿಂತೆ ಇಲ್ಲ. ಆದರೆ, ಇಂತಹ ಕಿರುಕುಳ ನೀಡುವ, ಸುಳ್ಳು ಹೇಳಿ ಪ್ರಕರಣಗಳನ್ನು ದಾಖಲಿಸುವ ಹೆಂಡತಿಯಿಂದ ನನ್ನನ್ನು ರಕ್ಷಿಸು ಎಂದು ವಟ ಸಾವಿತ್ರಿ ಹುಣ್ಣಿಮೆ ನಿಮಿತ್ತ ಅತ್ತಿ ಗಿಡಕ್ಕೆ ಪೂಜೆ ಸಲ್ಲಿಸಿದ್ದೇನೆ.
● ಶಶಿಧರ ಕೋಪರ್ಡೆ, ಪುರುಷ ಸಾಂತ್ವನ ಕೇಂದ್ರದ ಮುಖ್ಯಸ್ಥ