ಥಾಣೆ, ನ. 11: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಥಾಣೆ ಸ್ಥಳೀಯ ಸಮಿತಿಯ ವತಿಯಿಂದ ವಿಶೇಷ ಗುರುಪೂಜೆ ಮತ್ತು ಅನ್ನಸಂತರ್ಪಣೆ ಅ. 5ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಸ್ಥಳೀಯ ಅರ್ಚಕ ಹರೀಶ್ ಟಿ. ಪೂಜಾರಿ ಇವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಹೆಜಮಾಡಿಯ ಬಿಲ್ಲವ ಸಂಘದಲ್ಲಿ ಬಿಲ್ಲವ ರತ್ನ ಜಯ ಸಿ. ಸುವರ್ಣ ಅವರ ವೈಕುಂಠ ಸಮಾ ರಾಧನೆ ನಡೆದಿದ್ದು. ಅವರ ಸಂಸ್ಮರಣೆಯಲ್ಲಿ ಥಾಣೆ ಪರಿಸರದ ತುಳು-ಕನ್ನಡಿಗರಿಗೆ, ಜಯ ಸಿ. ಸುವರ್ಣರ ಅಭಿಮಾನಿಗಳಿಗೆ, ಸಮಾಜ ಬಾಂಧ ವರಿಗೆ ವಿಶೇಷ ರೀತಿಯಲ್ಲಿ ಅನ್ನಸಂತರ್ಪಣೆಯನ್ನು ಮಾಡಲಾಯಿತು.
ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಎಸ್. ಎಸ್. ಪೂಜಾರಿ, ಕಾರ್ಯದರ್ಶಿ ಹರೀಶ್ ಟಿ. ಪೂಜಾರಿ ಅವರ ಸಲಹೆಯಂತೆ, ಸ್ಥಳೀಯ ಉದ್ಯಮಿ, ಏಷ್ಯಾಟಿಕ್ ಕ್ರೇನ್ ಸರ್ವಿಸಸ್ ಇದರ ಗಣೇಶ್ ಆರ್. ಪೂಜಾರಿ ಪರಿವಾರದವರ ಮಾರ್ಗದರ್ಶನ, ಸಂಪೂರ್ಣ ಸಹಕಾರದಿಂದ ಈ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು. ನೂರಾರು ಮಂದಿ ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು. ಜಯ ಸಿ. ಸುವರ್ಣರ ಭಾವಚಿತ್ರಕ್ಕೆ ಪುಷ್ಪವೃಷ್ಠಿಗೈದು ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಅನಂತ ಸಾಲ್ಯಾನ್, ಕಾರ್ಯಾಧ್ಯಕ್ಷ ಎಸ್. ಎಸ್. ಪೂಜಾರಿ, ಉಪ ಕಾರ್ಯಾಧ್ಯಕ್ಷ ಸುರೇಶ್ ಎಸ್. ಪೂಜಾರಿ, ಗೌರವ ಕಾರ್ಯದರ್ಶಿ ಹರೀಶ್ ಜಿ. ಪೂಜಾರಿ, ಗೌರವ ಕೋಶಾಧಿಕಾರಿ ದೇವದಾಸ್ ಕರ್ಕೇರ, ಪರಿಸರದ ಉದ್ಯಮಿಗಳಾದ ಉಮೇಶ್ ಶೆಟ್ಟಿ ಪೊಲ್ಯ, ಸ್ಥಳೀಯ ನಗರ ಸೇವಕರಾದ ಶಿವಸೇನೆಯ ದಿಲೀಪ್ ಬಾರ್‌ಟಕ್ಕೆ, ಶಿವಸೇನೆಯ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಬಿಲ್ಲವರ ಅಸೋಸಿಯೇಶನ್‌ನ ಅಶೋಕ್ ಕುಕ್ಯಾನ್ ಸಸಿಹಿತ್ಲು, ಉದ್ಯಮಿ ವಿಶ್ವನಾಥ್ ಪೂಜಾರಿ, ಕಿಸನ್ ನಗರದ ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ಜಯರಾಮ ಪೂಜಾರಿ, ಉದ್ಯಮಿ ಸುಧಾಕರ ಅಜೆಕಾರ್, ಚಿತ್ತರಂಜನ್ ಅಮೀನ್, ರವಿ ಕೋಟ್ಯಾನ್, ಹಿರಿಯ ಉದ್ಯಮಿ ಬಾಬು ಎಲ್. ಸಾಲ್ಯಾನ್, ಉದ್ಯಮಿ ಅಶೋಕ್ ಎಂ. ಕೋಟ್ಯಾನ್, ಉದ್ಯಮಿ ವಾಸು ಎಸ್. ಪೂಜಾರಿ, ಉದ್ಯಮಿ ಶಂಕರ್ ಮೂಲ್ಯ, ಜಯರಾಮ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಸಮಿತಿಯ ಸದಸ್ಯರಾದ ಲಕ್ಷ್ಮಣ್ ಅಮೀನ್, ರೂಪಾ ಕೃಷ್ಣ ಪೂಜಾರಿ, ಪೂರ್ಣಿಮಾ ಅಮೀನ್, ಅಮಿತಾ ಎಸ್. ಪೂಜಾರಿ, ತ್ರಿವೇಣಿ ಪೂಜಾರಿ, ಗಿರಿಧರ ಕರ್ಕೇರ, ಪ್ರೇಮಾನಂದ ಕುಕ್ಯಾನ್, ಕೃಷ್ಣ ಪೂಜಾರಿ, ಡಾಕೇಶ್ ಕರ್ಕೇರ, ಲತಾ ಪೂಜಾರಿ, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯ-ಸದಸ್ಯೆಯರು, ಸಮಾಜ ಬಾಂಧವರು, ತುಳು-ಕನ್ನಡಪರ ವಿವಿಧ ಸಂಘಟನಗಳ ಪ್ರತಿನಿಧಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.